ಸುದ್ದಿಗಳು

ಕಾಲು ಶತಮಾನದ ದಾಂಪತ್ಯ, ಬಿಟ್ಟರೂ ಬಿಡಲಾಗದ ಕಂದಕ…

ಬಾಲಿವುಡ್ ಹಿನ್ನೆಯ ಗಾಯಕಿಯ ವೈವಾಹಿಕ ಕಂಗಟ್ಟು....

ಆಕೆ ತನ್ನ 14 ನೇ ವಯಸ್ಸಿಗೆ ಸಿಂಗಿಂಗ್ ಇಂಡಸ್ಟ್ರೀಗೆ ಕಾಲಿಟ್ಟವಳು. ಇದುವರೆಗೂ 2 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿದ್ದಾರೆ. ವಿವಿಧ ಭಾಷೆಯ ಹಾಡಿಗೆ ಧ್ವನಿಯಾದ ಇವರನ್ನು 90ರ ದಶಕದ ಮೆಲೋಡಿ ಕ್ವೀನ್ ಎಂದೆ ಕರೆಯಲಾಗುತ್ತದೆ. ಲತಾ ಮಂಗೇಶ್ಕರ್ ಹಾಗೂ ಆಶಾ ಬೋಸ್ಲೆ ನಂತರದ ಸ್ಥಾನ ತುಂಬಬಲ್ಲ ಏಕೈಕ ಗಾಯಕಿ ಎಂದೇ ಇವರನ್ನು ಎಲ್ಲರೂ ಗುರುತಿಸುತ್ತಿದ್ದರು. ನಾವು ಯಾರ ಬಗ್ಗೆ ಹೇಳಲು ಹೊರಟಿದ್ದೇವೆ ಎಂಬುದು ನಿಮಗೆ ಈಗಾಗಲೇ ಗಮನಕ್ಕೆ ಬಂದಿರಬಹುದು. ಹೌದು ನಾವು ಹೇಳಲು ಹೊರಟಿರುವುದು ಖ್ಯಾತ ಹಿನ್ನೆಲೆಯ ಗಾಯಕಿ ‘ಅಲ್ಕಾ ಯಾಗ್ನಿಕ್’ ಬಗ್ಗೆ. ಸಂಗೀತ ಲೋಕದಲ್ಲಿ ಇಷ್ಟೆಲ್ಲಾ ಹೆಸರು ಮಾಡಿದರೂ ಅಲ್ಕಾ ಅವರ ವೈಯಕ್ತಿಕ ಬದುಕು ಮಾತ್ರ ವಿಭಿನ್ನವಾಗಿದೆ.

ಅಲ್ಕಾ ಶಿಲಾಂಗ್ ಮೂಲದ ಉದ್ಯಮಿ ನೀರಜ್ ಕಪೂರ್ ಅವರನ್ನು 1989ರಲ್ಲಿ ವಿವಾಹವಾಗುತ್ತಾರೆ. ಆದರೆ ವಿವಾಹವಾದರು 25 ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ದಂಪತಿ ಪರಸ್ಪರ ದೂರವೇ ಇದ್ದಾರಂತೆ. ಅಂದಹಾಗೆ ಅಲ್ಕಾ ಹಾಗೂ ನೀರಜ್ ನಡುವಿನ ಪ್ರೀತಿ ಆರಂಭವಾದ ಬಗೆಯೇ ವಿಭಿನ್ನ.ಪ್ರೀತಿ ಆರಂಭದ ದಿನಗಳು

1986ರಲ್ಲಿ ಅಲ್ಕಾ ಯಾಗ್ನಿಕ್ ತಮ್ಮ ತಾಯಿಯೊಂದಿಗೆ ರೈಲಿನ ಮೂಲಕ ದೆಹಲಿಗೆ ತೆರಳುತ್ತಾರೆ. ಅಲ್ಲಿ ಅಲ್ಕಾನ ಅವರ ತಾಯಿಯ ಗೆಳತಿಯ ಸಂಬಂಧಿ ನೀರಜ್ ಇವರನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಬಂದಿರುತ್ತಾರೆ. ಇದೇ ಮೊದಲ ಬಾರಿಗೆ ಇವರಿಬ್ಬರು ಪರಸ್ಪರ ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ಇವರಿಬ್ಬರ ನಡುವೆ ಒಂದು ರೀತಿಯ ಬಾಂಧವ್ಯ ಏರ್ಪಟ್ಟರು ಇದು ಪ್ರೀತಿಗೆ ತಿರುಗಲು ಒಂದಷ್ಟು ಕಾಲ ಹಿಡಿಯಿತು.

ಅಲ್ಕಾ ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ನೀರಜ್ ಆಕೆಯನ್ನು ಭೇಟಿ ಮಾಡುತ್ತಿದ್ದರು. 6 ತಿಂಗಳ ಕಾಲ ಉತ್ತಮ ಗೆಳೆಯರಾಗಿದ್ದ ಇವರಿಬ್ಬರು, ತಮ್ಮ ಸಂಬಂಧದ ಮತ್ತೊಂದು ಮಜಲನ್ನು ತಲುಪಲು ನಿರ್ಧರಿಸಿದರು.

ನೀರಜ್ ರಲ್ಲಿ ಯಾವ ವಿಚಾರ ಇಷ್ಟವಾಯಿತು ಎಂದ ಅಲ್ಕಾ

ರೈಲ್ವೆ ನಿಲ್ದಾಣಕ್ಕೆ ನಮ್ಮನ್ನು ಕರೆದೊಯ್ಯಲು ಆಗಮಿಸಿದ್ದ ನೀರಜ್ ಬಿಳಿ ಪೈಜಾಮ ಧರಿಸಿದ್ದರು. ಇದೇ ನನ್ನ ಮೊದಲ ಇಪ್ರೆಂಷನ್. ನಾನು ರೈಲಿನಿಂದ ಇಳಿಯುವಾಗ ಕಂಡ ಗ್ಲಾಮರ್ ಲುಕ್ ನೀರಜ್ ಗೆ ತುಂಬಾ ಹಿಡಿಸಿತ್ತಂತೆ. ಇದೇ ನಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಯಿತು ಎಂದಿದ್ದಾರೆ ಅಲ್ಕಾ. ಗೆಳತನ ಪ್ರೀತಿಗೆ ತಿರುಗಿ ಒಂದು ವರ್ಷದ ಬಳಿಕ ತಾವಿಬ್ಬರು ಈ ಸಂಬಂಧವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದೆವು. ಅಲ್ಲದೆ 1988ರಲ್ಲಿ ಅಲ್ಕಾ ಅವರ ವೃತ್ತಿ ಜೀವನವೂ ಎತ್ತರಕ್ಕೆ ಬೆಳೆಯಲಾರಂಭಿಸಿತು. ಏಕ್ ದೋ ತೀನ್ ಹಾಡ ಸೂಪರ್ ಹಿಟ್ ಆಗಿದ್ದೇ ತಡ ಅಲ್ಕಾ ಅವರ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆಯಾಯಿತು. ಇದರ ನಡುವೆಯೇ ತಾವಿಬ್ಬರು ಮದುವೆಯಾಗುವ ನಿರ್ಧಾರವನ್ನು ಅಲ್ಕಾ ಹಾಗೂ ನೀರಜ್ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸುತ್ತಾರೆ. ಈ ಬಗ್ಗೆ ಕುಟುಂಬ ಸದಸ್ಯರು ಚಿಂತಿತರಾಗುತ್ತಾರೆ. ಇಬ್ಬರದ್ದೂ ವಿಭಿನ್ನ ವೃತ್ತಿಜೀವನ. ಅಲ್ಲದೆ ವೃತ್ತಿ ಬದುಕು ಬೇರೆ ಬೇರೆ ಸ್ಥಳಗಳಲ್ಲಿ ಇರುವುದರಿಂದ ಪೋಷಕರು ಚಿಂತಿತರಾಗಿದ್ದರು. ಆದರೆ ಪೋಷಕರ ಮನವೊಲಿಸಿದ ಇವರಿಬ್ಬರು 1989ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ ವಿವಾಹದ ನಂತರ ಅಲ್ಕಾ ಮುಂಬೈನಲ್ಲಿ ನೆಲೆಸಿದರೆ, ನೀರಜ್ ಶಿಲಾಂಗ್ ನಲ್ಲಿ ತಾವು ನಡೆಸುತ್ತಿದ್ದ ಉದ್ಯಮಕ್ಕಾಗಿ ಇಲ್ಲೇ ಉಳಿಯಬೇಕಾಯಿತು. ಈ ನಡುವೆ ದಂಪತಿಗೆ ಸಯೇಶ್ ಎಂಬ ಹೆಣ್ಣು ಮಗು ಜನಿಸುತ್ತದೆ. ತನ್ನ ಮಗಳೊಂದಿಗೆ ಅಲ್ಕಾ ಮುಂಬೈನಲ್ಲೇ ನೆಲೆಸುತ್ತಾರೆ.ಸಂಬಂಧದಲ್ಲಿನ ಅಂತರ

ಹಿನ್ನೆಲೆ ಗಾಯಕಿಯಾಗಿದ್ದ ಅಲ್ಕಾ ತಮ್ಮ ವೃತ್ತಿಗಾಗಿ ಮುಂಬೈನಲ್ಲಿ ನೆಲೆಸಬೇಕಾಯಿತು. ಪತಿ ಶೀಲಾಂಗ್ ನಲ್ಲೇ ಉಳಿದಿದ್ದರು. ಪತ್ನಿಯ ವೃತ್ತಿ ಜೀವನಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದ ಪತಿಯ ಬಗ್ಗೆ ಅಲ್ಕಾಗೂ ತುಂಬಾನೆ ಗೌರವವಿತ್ತು. ಈ ಬಗ್ಗೆ ಅಲ್ಕಾ ಹೇಳಿಕೊಳ್ಳುತ್ತಿದ್ದರೂ ಕೂಡ. ಈ ನಡುವೆ ಮುಂಬೈನಲ್ಲಿ ಉದ್ಯಮ ಆರಂಭಿಸಲೆಂದು ಬಂದ ನೀರಜ್ ಗೆ ಅದೃಷ್ಟ ಕೈ ಹಿಡಿಯಲಿಲ್ಲ. ಇದ್ದ ಹಣ ಖಾಲಿಯಾಗಿದ್ದರಿಂದ ಹಾಗೂ ಜನ ಮೋಸಮಾಡಿದ್ದರಿಂದ, ಮತ್ತೆ ಶೀಲಾಂಗ್ ಗೆ ಹೋಗಲು ನಿರ್ಧರಿಸಿದರು. ಆದರೆ ಈ ಸಂದರ್ಭ ಇವರಿಬ್ಬರ ನಡುವೆ ನಡೆದ ಕೆಲವೊಂದು ಮಾತುಗಳಿಂದಾಗಿ ದಂಪತಿಗಳು ನಾಲ್ಕು ಐದು ವರ್ಷಗಳ ಕಾಲ ಪರಸ್ಪರ ಮಾತನಾಡಿರಲಿಲ್ಲ. ಆದರೆ ದೂರವಾದ ಬಳಿಕವೂ ಪರಸ್ಪರ ಬಾಂಧವ್ಯ ಹಾಗೆ ಇತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ಅಲ್ಕಾ.ನಾನು ಸುಳ್ಳು ಹೇಳಿಲ್ಲ. ನನಗೆ ಬೇರೆ ಒಬ್ಬರು ಇಷ್ಟವಾಗಲೂ ಇಲ್ಲ. ನನ್ನ ಜೀವನದ ಕೆಲವೊಂದು ನಿರ್ಧಾರಗಳು ಗಟ್ಟಿಯಾಗಿದೇ ಇದೆ . ನಾವಿಬ್ಬರೂ ಈಗಲೂ ಪರಸ್ಪರ ಪ್ರೀತಿಸುತ್ತಲೇ ಇದ್ದೇವೆ. ಆದರೆ ದೂರ ದೂರ ಬದುಕುತ್ತಿದ್ದೇವೆ ಎಂದಿದ್ದಾರೆ ಅಲ್ಕಾ.

Tags

Related Articles