ಸುದ್ದಿಗಳು

ಹಾಸ್ಯ ನಟ ತರುವ ಲಂಚ್ ಬಾಕ್ಸ್ ಗೆ ಸಿಕ್ಕಾಪಟ್ಟೆ ಅಭಿಮಾನಿಗಳು!!

ದಶಕಗಳಿಂದ, ಬ್ರಹ್ನಾನಂದಂ ಟಾಲಿವುಡ್ ನಲ್ಲಿ ಹಾಸ್ಯ ನಟನಾಗಿ ಎಲ್ಲರನ್ನು ನಗೆಯ ಅಲೆಯಲ್ಲಿ ತೇಲಿಸುತ್ತಿದ್ದಾರೆ. ಅನೇಕ ಸ್ಟಾರ್ ಹೀರೋಗಳು ಮತ್ತು ನಿರ್ದೇಶಕರಿಗೆ ಸಹ-ನಟರಾಗಿದ್ದಾರೆ.

ನಟನೆಗೆ ಮಾತ್ರವಲ್ಲದೆ, ಬ್ರಹ್ಮಾನಂದಂ ಮನೆಯಿಂದ ತರುವ ಊಟಕ್ಕೂ ಫ್ಯಾನ್ಸ್ ಇದ್ದಾರೆ ಅಂದ್ರೆ ನಂಬಲೇಬೇಕು. ಅವರು ಪ್ರತಿದಿನ ಮನೆಯಿಂದ ತರುವ ಊಟವನ್ನು, ಸೆಟ್‌ ಗಳಲ್ಲಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ.

Image result for Huge Fans For Brahmanandam's Lunch Box

ಇಂದು, ನಿರ್ದೇಶಕ ಹರೀಶ್ ಶಂಕರ್ ಅವರು “ವಾಲ್ಮೀಕಿ” ಚಲನಚಿತ್ರದ ಶೂಟಿಂಗ್ ಸ್ಥಳದಲ್ಲಿ ಫೋಟೋ ತೆಗೆದ ಹಂಚಿಕೊಂಡಿದ್ದಾರೆ, ಚಿತ್ರೀಕರಣದ ಕೊನೆಯ ದಿನದಂದು ಬ್ರಹ್ಮಾನಂದಂ ತಂದುರುವ ಊಟವನ್ನು ಹಂಚಿಕೊಳ್ಳುತ್ತಿದ್ದಾರೆ. ಬ್ರಹ್ಮಾನಂದಂ ತಮ್ಮ ಮನೆಯಿಂದ ಪ್ರತಿದಿನ ಸುಮಾರು ಐದು ಬಗೆಯ ಪದಾರ್ಥ, ಬೇಯಿಸಿದ ತರಕಾರಿ ಮತ್ತು ವಿವಿಧ ರೀತಿಯ ಸೂಪ್‌ಗಳನ್ನು  ಕೊಂಡೊಯ್ಯುತ್ತಾರಂತೆ.. ಚಿರಂಜೀವಿ ಮತ್ತು ಬಾಲಕೃಷ್ಣನ್ ಸೇರಿದಂತೆ ಇಡೀ ಚಿತ್ರರಂಗವು ಅವರು ತರುವ ಊಟಕ್ಕೆ ಅಭಿಮಾನಿಗಳು ಎಂದು ಹೇಳಲಾಗುತ್ತದೆ.

ತುಳು ಚಿತ್ರರಂಗದಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವನಟಿ ಪವಿತ್ರಾ

#bharamandam #tollywood

Tags