ಸುದ್ದಿಗಳು

ಕೈ ಕೈ ಮಿಲಾಯಿಸಿದ ನಂತರ ಮತ್ತೆ ಒಂದಾದ ತಂದೆ – ಮಗ

ಅಮೆರಿಕನ್ ಸಂಗೀತಗಾರ ಟಾಲಿ ಲೀ ಮತ್ತು ಅವರ ಮಗ ಬ್ರ್ಯಾಂಡನ್

ಬೆಂಗಳೂರು, ಡಿ.15: ಈ ವರ್ಷದ ಮಾರ್ಚ್ ನಲ್ಲಿ ಅಮೆರಿಕನ್ ಸಂಗೀತಗಾರ ಟಾಮಿ ಲೀ ಮತ್ತು ಅವರ ಪುತ್ರ ಬ್ರ್ಯಾಂಡನ್ ಲೀ ನಡುವೆ ಸಣ್ಣ ವಾಗ್ವಾದ ನಡೆದಿತ್ತು.

ಇ! ಆನ್ಲೈನ್ ವರದಿ ಪ್ರಕಾರ, ಸಂಗೀತಗಾರ ತನ್ನ ಹಿರಿಯ ಮಗನೊಡನೆ ಕೈ ಮಿಲಾಯಿಸಿದ ನಂತರ ತನ್ನ ರಕ್ತಸಿಕ್ತ ತುಟಿಯ ಫೋಟೋವನ್ನು ಪ್ರಕಟಿಸಿದ್ದರು. ಟಾಮಿ ಕೂಡ ಮಾರ್ಚ್ 6ರಂದು ಟ್ವೀಟ್ ಮಾಡಿ, “ನನ್ನ ಮಗ ನಾನು ಕೋಣೆಯಲ್ಲಿ ಮಲಗಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ. ಅದಕ್ಕೆ ಪ್ರತಿಯಾಗಿ ನಾನು ಅವನನ್ನು ಮನೆ ಬಿಟ್ಟು ಹೋಗೆಂದು ಹೇಳಿದ್ದಕ್ಕಾಗಿ ಪ್ರಜ್ಞೆ ತಪ್ಪುವಂತೆ ನನ್ನನ್ನು ಹೊಡೆದನು. ನಂತರ ಅವನು ಪೊಲೀಸರಿಗೂ ಸಿಗದೇ ದೂರ ಓಡಿಹೋದ. ಅದೇ ಸತ್ಯ” ಎಂದು ಬರೆದಿದ್ದರು.ರಾಜಿಯಾದ ಟಾಮಿ ಲೀ ಮತ್ತು ಸನ್‍ ಬ್ರ್ಯಾಂಡನ್

ಈ ಘಟನೆ ಸಂಭವಿಸಿದ ನಂತರದ ಅವಧಿಯಲ್ಲಿ, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ರಹಸ್ಯ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.  ಆದರೂ, ತಂದೆ ಮತ್ತು ಮಗನ ನಡುವಿನ ಸಂಘರ್ಷ ಕಳೆದ ಒಂದಷ್ಟು ತಿಂಗಳಿನಿಂದ ಕಡಿಮೆಯಾಗಿತ್ತು. ‘ಸ್ಟಿಲ್ ವೇಟಿಂಗ್’ ಗಾಯಕ ತನ್ನ ಮಗ ಬ್ರ್ಯಾಂಡನ್‍ ನನ್ನು ತಬ್ಬಿಕೊಂಡಿರುವ ಫೋಟೊವನ್ನು ಇನ್ಸ್ಟಾಗ್ರ್ಯಾಮ್‍ ನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೇ ಫೋಟೊಗೆ “ನಾನು ಮಗನನ್ನು ಪ್ರೀತಿಸುತ್ತೇನೆ” ಎಂದು ಶೀರ್ಷಿಕೆ ನೀಡಿದ್ದಾರೆ.

ಬ್ರ್ಯಾಂಡನ್ ಟಾಮಿ ಮತ್ತು ಮಾಜಿ ಪತ್ನಿ ಪಮೇಲಾ ಆಂಡರ್ಸನ್ ದಂಪತಿಯ ಹಿರಿಯ ಮಗ ಬ್ರ್ಯಾಂಡನ್‍. ಅಲ್ಲದೇ, ಈ ದಂಪತಿಗೆ 20 ವರ್ಷದ ಮಗ ಡೈಲನ್ ಲೀ ಕೂಡ ಇದ್ದಾನೆ.

Tags

Related Articles