ಸುದ್ದಿಗಳು

‘ಬಟರ್ ಫ್ಲೈ’ ಫೋಟೋ ಶೂಟ್ ಮಾಡಿಸಿದ ನಟಿ ಪಾರುಲ್

ಬೆಂಗಳೂರು, ಏ.15:

ನಟಿ ಪಾರುಲ್ ಯಾದವ್ ಸದ್ಯ ‘ಬಟರ್ಫ್ಲೈ’ ಆಗಿ ಹಾರಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಪ್ರಮೋಷನ್ ಕಾರ್ಯದಲ್ಲಿ ಮುಂದಾಗಿರುವ ಈ ಚಿತ್ರತಂಡ ವಿಭಿನ್ನವಾಗಿ ಪ್ರಮೋಷನ್ ಮಾಡಲಾಗುತ್ತಿದೆ. ಇದೀಗ ನಟಿ ಪಾರುಲ್ ಯಾದವ್ ವಿಭಿನ್ನ ಪ್ರಮೋಷನ್ ಗೆ ಫೋಟೋ ಶೂಟ್ ಮಾಡಿಸಿದ್ದಾರೆ.

ಚಿಟ್ಟೆಯಾಗಿ ಬದಲಾದ ಪಾರುಲ್

ಹೌದು, ಸದ್ಯ ಬಿಡುಗಡೆಗೆ ರೆಡಿಯಾಗಿರುವ ‘ಬಟರ್ಫ್ಲೈ’ ಚಿತ್ರದ ಪ್ರಮೋಷನ್ ಜೋರಾಗಿದೆ‌. ಇದೀಗ ಈ ಚಿತ್ರದ ಪ್ರಮೋಷನ್ ಗಾಗಿ ನಟಿ ಪಾರುಲ್ ಚಿಟ್ಟೆ ತರಹದ ಬಟ್ಟೆ ಧರಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಇದೀಗ ಈ ಫೋಟೋಗಳು ಫುಲ್ ವೈರಲ್ ಆಗಿವೆ. ಕಲರ್ ಕಲರ್ ಬಟ್ಟೆಯನ್ನು ಜೋಡಿಸಿ ಚಿಟ್ಟೆಯ ರೆಕ್ಕೆಯನ್ನು ಕಟ್ಟಿಕೊಂಡ ರೀತಿಯಲ್ಲಿ ಫೋಟೋ ತೆಗೆಸಿದ್ದಾರೆ. ಇನ್ನೂ ಈ ಫೋಟೋವನ್ನು ಸಂತೋಷ್ ಅನಿ ಎಂಬುವವರು ಸೆರೆ ಹಿಡಿದಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶನದ ಚಿತ್ರ

ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಮನು ಕುಮಾರನ್ ನಿರ್ಮಾಣದಲ್ಲಿ, ಪಾರುಲ್ ಯಾದವ್ ಸಹ ನಿರ್ಮಾಣದಲ್ಲಿ ಸಿದ್ಧಗೊಂಡಿದೆ. ಟೈಜೂನ್ ಖೋರಕಿವಾಲಾ ಅರ್ಪಿಸುವ ಬಟರ್ ಫ್ಲೈ ಮೆಡಿಎಂಟೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. ಸದ್ಯ ಈ ಚಿತ್ರ ನಾಲ್ಕು ಭಾಷೆಯಲ್ಲಿ ರೀಮೇಕ್ ಆಗುತ್ತಿದೆ.

Image may contain: 1 person, standing and outdoor

Image may contain: 1 person

ಕಿರುತೆರೆಯಿಂದ ಜನಪ್ರಿಯತೆ ಗಳಿಸಿದೆ : ಭವಾನಿ ಸಿಂಗ್

#balkaninews #parulyadav #parulyadavmovies #parulyadavhits #parulyadavinstagram #parulyadavtwitter #parulyadavbutterfly

Tags