ಸುದ್ದಿಗಳು

‘ಬಟರ್ ಪ್ಲೈ’ ಚಿತ್ರದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ರಂಗಗೀತೆ

ಸಿನಿಮಾ ಹಾಡುಗಳ ಭರಾಟೆಯಲ್ಲಿ ನಾಡಿನ ಗ್ರಾಮೀಣ ಸೊಗಡು ಉಳ್ಳ ರಂಗಗೀತೆಗಳು ಸೇರಿದಂತೆ ಹಲವು ಗೀತೆಗಳು ಇಂದು ಮೂಲೆ ಗುಂಪಾಗಿ ವಿನಾಶದ ಅಂಚಿಗೆ ತಲುಪಿದೆ. ಹೀಗಿರುವಾಗಲೇ ರಮೇಶ್ ಅರವಿಂದ್ ರು ತಮ್ಮ ನಿರ್ದೇಶನದ ಚಿತ್ರಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆಯನ್ನು ಅಳವಡಿಸಿಕೊಂಡಿದ್ದಾರೆ.

ಬೆಂಗಳೂರು, ಜು. 28: ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡುತ್ತಿರುವ ಬಟರ್ ಪ್ಲೈ ಚಿತ್ರವು ಮತ್ತೊಮ್ಮೆ ಸುದ್ದಿಯಾಗಿದೆ. ಚಿತ್ರಕ್ಕಾಗಿ ಮಾಸ್ಟರ್ ಹಿರಣ್ಣಯ್ಯನವರು ಬರೆದಿದ್ದ ಪ್ರಸಿದ್ಧ ರಂಗಗೀತೆಯನ್ನು ಅಳವಡಿಸಿಕೊಂಡಿದ್ದಾರೆ.

ರಂಗಗೀತೆ

ಸುಖವೀವ ಸುರಪಾನವಿದೇ ಸ್ವರ್ಗಸಮಾನನಂ ಎಂದು ಶುರುವಾಗುವ ಈ ರಂಗಗೀತೆಯನ್ನು ಮಾಸ್ಟರ್ ಹಿರಣ್ಣಯ್ಯನವರು ತಮ್ಮ ದೇವದಾಸಿ ನಾಟಕಕ್ಕಾಗಿ ಬರೆದಿದ್ದರು. ಇದೀಗ ಈ ಗೀತೆಯನ್ನು ಬಟರ್ ಪ್ಲೈ ಚಿತ್ರಕ್ಕಾಗಿ ಅಳವಡಿಸಿಕೊಳ‍್ಳಲಾಗುತ್ತಿದೆ. ಈ ವಿಶೇಷವಾದ ಹಾಡಿಗೆ ಕುಣಿದಿರುವ ಪಾರುಲ್ ಕೂಡಾ ಇದನ್ನೊಂದು ಗ್ರೇಟ್ ಎಕ್ಸ್ ಪೀರಿಯನ್ಸ್ ಅಂತ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಮೂರು ಭಾಷೆಗಳಲ್ಲಿ ಚಿತ್ರ

ಹಿಂದಿಯಲ್ಲಿ ಕಂಗನಾ ರಣಾವತ್ ನಟಿಸಿದ್ದ ‘ಕ್ವೀನ್’ ಚಿತ್ರವು ಇದೀಗ ಕನ್ನಡದಲ್ಲಿ ಬಟರ್ ಪ್ಲೈ ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್, ತೆಲುಗಿನಲ್ಲಿ ಒನ್ಸ್ ಅಗೇನ್ ಕ್ವೀನ್ ಆಗಿ ತೆರೆಗೆ ಬರಲಿದೆ. ಮೂಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಅಮಿತ್ ತ್ರಿವೇದಿ ಬಟರ್ಫ್ಲೈ ಸಿನಿಮಾಕ್ಕೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಚಿತ್ರದ ಆರೂ ಹಾಡುಗಳಿಗೆ ಲಿರಿಕ್ಸ್ ಬರೆದಿದ್ದಾರೆ.

ಬಹುಭಾಷಾ ನಟಿಯರು

ಮೂರು ಭಾಷೆಗಳಲ್ಲಿ  ಬರುತ್ತಿರುವ ಈ ಚಿತ್ರಗಳಲ್ಲಿ ಪಾರುಲ್ ಯಾದವ್, ಕಾಜಲ್ ಅಗರವಾಲ್, ಮತ್ತು ತಮನ್ನಾ ಭಾಟಿಯಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

Tags