ಸುದ್ದಿಗಳು

ಈ ಫೋಟೋದಲ್ಲಿರುವ ನಟಿ ಯಾರೆಂದು ಕಂಡುಹಿಡಿಯುತ್ತೀರಾ?

ಈ ನಟಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಎಲ್ಲರಿಗೂ ಗೊತ್ತು. ತೆಲುಗಿನಲ್ಲಿ ಪುರಿ ಜಗನ್ನಾಥ್ ಅವರ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಈ ನಟಿ ತನ್ನ ವೈಯಕ್ತಿಕ ಸಿದ್ಧಾಂತದಿಂದ ಎಲ್ಲರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾದಳು.

ಆದರೆ ತನ್ನನ್ನು ತಾನು ಸಾಬೀತುಪಡಿಸುಕೊಳ್ಳಲು ಹೋಗಿ ಎಂಥಹ ಎಡವಟ್ಟು ಮಾಡಿಕೊಂಡಳೆಂದರೆ ಇತರರಿಗೆ ಸ್ವಲ್ಪ ಸೊಕ್ಕಿನ ಮತ್ತು ಅಹಂಕಾರದ ನಟಿ ಎಂಬಂತೆ ಭಾಸವಾದಳು.

ಬಾಲಿವುಡ್ ನಲ್ಲಿ ವೃತ್ತಿಜೀವನವು ಮುಳುಗಿದಂತೆ ತೋರಿದಾಗ ಅಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಳಾದರೂ ಇದ್ದಕ್ಕಿದ್ದಂತೆ ಕಣ್ಮರೆಯಾದಳು.

ಈಗ ಆಕೆ ಯಾರೆಂದು ನಿಮಗೆ ಗೊತ್ತಾಯ್ತಾ? ಹೋಗಲಿ ಬಿಡಿ, ಇನ್ನು ಕೆಲವು ಸುಳಿವು ಕೊಡುತ್ತೇವೆ. ತಮಿಳು ಅಮ್ಮಾಯಿ, ಗಜಿನಿಯ ಕಲ್ಪನಾ, ಶಿವಮಣಿಯ ಗೆಳತಿ ಒಂದು ದಶಕದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳನ್ನು ಆಳಿದ ತಾರೆ.

ಇಷ್ಟೆಲ್ಲಾ ನಾವ್ಯಾಕೆ ಹೇಳಬೇಕಾಯಿತು ಅಂದರೆ ಆ ನಟಿ ತುಂಬಾ ಬದಲಾಗಿದ್ದಾರೆ. ಫೋಟೋವನ್ನು ನೋಡಿ ನಮಗೆ ಕಂಡುಹಿಡಿಯಲು ಎರಡು ನಿಮಿಷಗಳು ಬೇಕಾಯಿತು.

ಅಂದಹಾಗೆ ಈ ನಟಿ ಬೇರಾರು ಅಲ್ಲ ಅಸಿನ್. ಫೋಟೋ ನೋಡಿದರೆ ಅಸಿನ್ ಸಿನಿಮಾಗೆ ರೀ ಎಂಟ್ರಿ ಕೊಡಲು ಸಜ್ಜಾಗುತ್ತಿರುವಂತೆ ತೋರುತ್ತಿದೆ.

ಟ್ವೀಟ್ ಡಿಲೀಟ್ ಮಾಡಿದ ಲಾವಣ್ಯ ತ್ರಿಪಾಠಿ, ಅಂಥದ್ದೇನಿತ್ತು ಅಲ್ಲಿ?!

#balkaninews #asin #newphoto

Tags