ಸುದ್ದಿಗಳು

ಶೀತಲ್ ಶೆಟ್ಟಿಯ ಹೊಸ ಕಿರುಚಿತ್ರ ‘ಕಾರು’..

‘ಸಂಗಾತಿ’ ಕಿರುಚಿತ್ರದ ನಂತರ ‘ಕಾರು’

ಬೆಂಗಳೂರು, ನ.21: ಈಗಾಗಲೇ ನಟಿ ಶೀತಲ್ ಶೆಟ್ಟಿ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಇನ್ನು ಕಳೆದ ಕೆಲವು ತಿಂಗಳಗಳ ಹಿಂದೆ ಬಿಡುಗಡೆಯಾಗಿದ್ದ ‘ಪತಿಬೇಕು ಡಾಟ್ ಕಾಮ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ಸಂಗಾತಿ’ ನಂತರ ಹೊಸ ಕಿರುಚಿತ್ರ

ಈಗಾಗಲೇ ಮೊದಲ ಕಿರುಚಿತ್ರ ‘ಸಂಗಾತಿ’ ಮೂಲಕ ಗಹನವಾದೊಂದು ಸಂಗತಿಯನ್ನು ಹೇಳಿದ್ದ ಶೀತಲ್ ಇದೀಗ ‘ಕಾರು’ ಹೆಸರಿನ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಕಿರುಚಿತ್ರ ಬೇರೆ ವಿಷಯಗಳನ್ನು ತಿಳಿಸಿದರೆ ಇದು ಬೇರೆಯದ್ದೇ ಬಗೆಯ ಕಥೆಯೊಂದನ್ನು ತಿಳಿಸುತ್ತಿದೆ. ಈಗಾಗಲೇ ಇದರ ಚಿತ್ರೀಕರಣ ಭರದಿಂದ ಸಾಗುತ್ತಿದೆ.

‘ಕಾರು’ ಕಥಾಹಂದರ

ಈ ಕಿರುಚಿತ್ರವು ಒಟ್ಟು ಹನ್ನೆರಡದಿಂದ ಹದಿನೈದು ನಿಮಿಷದ ಅವಧಿಯನ್ನು ಒಳಗೊಂಡಿದೆ. ಪುಟ್ಟ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಏನೇನೋ ಕನಸಿರುತ್ತದೆ. ಕಣ್ಣಿಗೆ ಕಾಣುವ ಯಾವುದೋ ವಸ್ತುವನ್ನು ತನ್ನದಾಗಿಸಿಕೊಳ್ಳುವ ಕನಸು ಹುಟ್ಟಿಕೊಂಡಿರುತ್ತದೆ. ಅದರಲ್ಲಿ ಕೆಲವು ನನಸಾಗಲೂ ಬಹುದು, ಉಳಿದವು ಕನಸಾಗಿಯೇ ಉಳಿಯಬಹುದು. ಮತ್ತೆ ಕೆಲ ಕನಸುಗಳು ಭ್ರಮೆಯ ಕೂಸಾಗಿರಲೂಬಹುದು. ಇಂಥಾದ್ದೊಂದು ಹೊಳವುನೊಂದಿಗೇ ಸಿದ್ಧಗೊಳ್ಳುತ್ತಿದೆ ಈ ಕಿರುಚಿತ್ರ. ಅಂದ ಹಾಗೆ ಇದೊಂದು ಪುಟ್ಟ ಹುಡುಗಿಯೊಬ್ಬಳ ಸುತ್ತ ತಿರುಗುವ ಕಥೆಯನ್ನು ಒಳಗೊಂಡಿದೆ.

ನಟಿಯಾಗಿ ಮತ್ತು ನಿರ್ದೇಶಕಿಯಾಗಿ

ಈಗಾಗಲೇ ಶೀತಲ್ ಶೆಟ್ಟಿ ‘ಕೆಂಡಸಂಪಿಗೆ’, ‘ಉಳಿದವರು ಕಂಡಂತೆ’, ‘ಪತಿಬೇಕು ಡಾಟ್ ಕಾಮ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಕಿರುಚಿತ್ರ ನಿರ್ದೇಶನ ಮಾಡಿದಂತೆ, ಫ್ಯೂಚರ್ ಚಿತ್ರವನ್ನೂ ನಿರ್ದೇಶನ ಮಾಡಬೇಕೆಂಬ ಆಸೆಯಿದೆ ಎನ್ನುತ್ತಾರೆ. ಇನ್ನು ಈ `ಕಾರು’ ಕಿರುಚಿತ್ರವನ್ನು ಡಿಸೆಂಬರ್ ನಲ್ಲಿ ನಡೆಯಲಿರುವ ಗೋವಾ ಶಾರ್ಟ್ಫಿಲಂ ಫೆಸ್ಟಿವಲ್ ನಲ್ಲಿ ಈ ಪ್ರದರ್ಶನ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

Tags