ಸುದ್ದಿಗಳು

ಕಾರ್ಡಿ ಬಿ ಕ್ಷಮೆಗಾಗಿ ಬೇಡಿಕೊಂಡ ಆಫ್‍ ಸೆಟ್

ಅಮೇರಿಕನ್ ರ್ಯಾಪರ್ ಕಾರ್ಡಿ ಬಿ ಮತ್ತು ಆಫ್ಸೆಟ್

ಬೆಂಗಳೂರು, ಡಿ.17: ಅಮೆರಿಕನ್ ರಾಪರ್‍ ಗಳಾದ ಕಾರ್ಡಿ ಬಿ ಮತ್ತು ಆಫ್ಸೆಟ್ ತಮ್ಮ ವಿಭಜನೆಯನ್ನು ಘೋಷಿಸಿದ ನಂತರದ ಕೆಲ ದಿನಗಳಲ್ಲಿ, ಆಫ್ಸೆಟ್ ಕ್ಷಮೆ ಕೇಳುವ ಮೂಲಕ ಅವರ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ, ‘ಮಿಗೊಸ್’ ರಾಪರ್ ಶನಿವಾರ ಒಂದು ಸುದೀರ್ಘ ವೀಡಿಯೋವೊಂದನ್ನು ಹಂಚಿಕೊಂಡಿದ್ದು “ಹುಟ್ಟುಹಬ್ಬದ ಶುಭಾಶಯ”ಗಳನ್ನು ಕೋರಿದ್ದಾರೆ. ಅಲ್ಲದೇ ಕಾರ್ಡಿ ಬಿ ಅವರ ಮನಸ್ಸನ್ನು ಗೆದ್ದು ಮತ್ತೊಮ್ಮೆ ಆಕೆಯ ಜೊತೆಗಿರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೋಸದ ಹಗರಣದಿಂದ ಈ ದಂಪತಿಗಳು ವಿಭಜನೆಯಾಗಿದ್ದರು.

ವೀಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ

ಕಾರ್ಡಿಗೆ ನೇರವಾಗಿ ಆಫ್ಸೆಟ್, “ನಾವು ಇದೀಗ ಬಹಳಷ್ಟು ಸಂಗತಿಗಳನ್ನು ಮಾಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಾನು ಬಹಿರಂಗವಾಗಿ ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ಕಾರ್ಡಿ, ನಾನು ನಿನ್ನನ್ನು ಈ ಹಿಂದೆ ಮುಜುಗರಕ್ಕೀಡು ಮಾಡಿದ್ದೇನೆ. ನಾನು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದಿದ್ದಾರೆ.“ನಾನು ಪಾಲ್ಗೊಳ್ಳುವಂತಿಲ್ಲವಾದ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೇನೆ ಮತ್ತು ನಾನು ಕ್ಷಮೆಯಾಚಿಸುತ್ತಿದ್ದೇನೆ. ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ತಿಳಿದಿದೆಯೇ? ನಮ್ಮ ಭರವಸೆ ಮುರಿದಿದ್ದೇನೆ, ದೇವರ ಭರವಸೆಯನ್ನು ಮುರಿದ ಸ್ವಾರ್ಥಿ, ಅವ್ಯವಸ್ಥಿತವಾದ ಪತಿಯ ಹಾಗೆ ನಿನ್ನ ಹೃದಯವನ್ನು ಮುರಿದಿದ್ದೇನೆ” ಎಂದು ಅವರು ಹೇಳಿದರು.

ಆಫ್ಸೆಟ್ ಮುಂದುವರಿದು, 5 ತಿಂಗಳ ಹೆಣ್ಣು ಮಗು ಕಲ್ಚರ್ ಮತ್ತು ನಿನ್ನೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ವಂಚನೆ ಹಗರಣದ ಕಾರಣದಿಂದಾಗಿ ಅವರ ಪತಿಯ ಮೇಲಿನ ನಂಬಿಕೆ ಕಳೆದುಕೊಳ್ಳುವಂತಾಗಿ ಕಾರ್ಡಿ ಪ್ರಸ್ತುತ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಆಫ್ಸೆಟ್ ನ ಆಪಾದಿತ ವೀಡಿಯೋದಲ್ಲಿ ಸಮ್ಮರ್ ಬನ್ನಿ ಎಂಬ ಹೆಸರಿನ ಮಹಿಳೆ ಆನ್ಲೈನ್‍ ನಲ್ಲಿ ಕಾಣಿಸಿಕೊಂಡಾಗ ಈ ಜೋಡಿಯ ನಡುವೆ ಬಿರುಕುಂಟಾಯಿತು. ಈ ತಿಂಗಳ ಆರಂಭದಲ್ಲಿ, ಕಾರ್ಡಿ ಬಿ, ಎ.ಕೆ. ಬೆಲ್ಕಲಿಸ್ ಮಾರ್ಲೆನಿಸ್ ಅಲ್ಮಾನ್ಝಾರ್ ಅವರನ್ನು ವಿವಾಹವಾದ ಒಂದು ವರ್ಷದ ನಂತರ ಈ ಜೋಡಿಯು ಬೇರೆ ಬೇರೆಯಾಗಿರುವುದಾಗಿ ಘೋಷಿಸಿದೆ.

 

View this post on Instagram

 

F O R G I V E M E @iamcardib A L L I W A N T F O R M Y B D A Y

A post shared by OFFSET (@offsetyrn) on

 

View this post on Instagram

 

#PressPlay: #Offset crashes #CardiB’s set at #RollingLoud to apologize in person ???????? (????: @power_106)

A post shared by The Shade Room (@theshaderoom) on

Tags

Related Articles