ಸುದ್ದಿಗಳು

ವಿಚ್ಛೇದನದ ನಂತರವೂ ಆಫ್ಸೆಟ್ ಜೊತೆಗೆ ಕ್ರಿಸ್ಮಸ್ ಹಬ್ಬ ಆಚರಿಸಲು ನಿರ್ಧರಿಸಿದ ಕಾರ್ಡಿ ಬಿ

ಹಾಲಿವುಡ್ ನಟಿ, ರ್ಯಾಪರ್ ಮತ್ತು ಬರಹಗಾರ್ತಿ ಕಾರ್ಡಿ ಬಿ

ಬೆಂಗಳೂರು, ಡಿ.20: ಅಮೆರಿಕಾದ ರ್ಯಾಪರ್ ಆಫ್ಸೆಟ್‍ ಜೊತೆಗೆ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡಲು ಅಮೆರಿಕಾದ ರ್ಯಾಪರ್ ಕಾರ್ಡಿ ಬಿ ಯೋಜಿಸುತ್ತಿದ್ದಾರೆ. ಆದರೆ ಆತನ ಜೊತೆಗೆ ಮತ್ತೆ ಮರಳಲು ಇನ್ನೂ ಸಿದ್ಧವಾಗಿಲ್ಲ.

ಕಲ್ಚರ್ ಕಿಯಾರಿ ಸೆಫಸ್ ಹೆಸರಿನ ಮಗಳು ಆಫ್ಸೆಟ್‍ ನೊಂದಿಗೆ ಹಂಚಿಕೊಂಡಿರುವ ಕಾರ್ಡಿ, ಅವರ ಪುತ್ರಿಗಾಗಿ ಪೋಷಕತ್ವವು ಬಹಳ ಮುಖ್ಯವಾಗಿದೆ ಎಂದು ಭಾವಿಸುತ್ತಾರೆ ಮತ್ತು ಅವರ ಪೋಷಕರನ್ನು ಹೊಗಳಿದ್ದಾರೆ. ‘ಐ ಲೈಕ್ ಇಟ್’ ರಾಪರ್ ತನ್ನ ಕುಟುಂಬದೊಂದಿಗೆ ಡೊಮಿನಿಕನ್ ರಿಪಬ್ಲಿಕ್‍ ನಲ್ಲಿ ಕೆಲ ಉತ್ತಮ ಸಮಯವನ್ನು ಕಳೆಯಲು ನಿರ್ಧರಿಸಿದ್ದಾರೆ.

“ಅವರು ಒಟ್ಟಿಗೆ ಇಲ್ಲದಿದ್ದರೂ, ಅವರು ರಜಾದಿನಗಳಲ್ಲಿ ಒಂದೇ ಕುಟುಂಬವಾಗಿ ಉತ್ತಮ ಸಮಯ ಕಳೆಯಲು ಬಯಸುತ್ತಾರೆ” ಎಂದು ಮೂಲಗಳು ಇ! ನ್ಯೂಸ್ ಗೆ ತಿಳಿಸಿರುವುದಾಗಿ ವರದಿ ಮಾಡಿದೆ.

ಒಟ್ಟಿಗೆ ಇಲ್ಲದಿದ್ದರೂ ರಜಾದಿನಗಳಲ್ಲಿ ಒಟ್ಟಿಗೆ ಕಾಲ ಕಳೆಯಲು ಬಯಸುತ್ತಿರುವ ದಂಪತಿ

“ಕಾರ್ಡಿ ಬಿ ಅವರು ಆಫ್ಸೆಟ್ ನನ್ನು ಕಲ್ಚರ್ ಜೀವನದಲ್ಲಿ ಒಂದು ಭಾಗವಾಗಿರಲು ಬಯಸುತ್ತಾರೆ ಮತ್ತು ಅವನ ಮಗಳ ಜೊತೆ ಕ್ರಿಸ್ಮಸ್ ಆಚರಿಸಲು ಬಯಸುತ್ತಾರೆ. ಇದು ಕಲ್ಚರ್ ನ ಮೊದಲ ಕ್ರಿಸ್ಮಸ್ ಮತ್ತು ಕಾರ್ಡಿ ಕುಟುಂಬ ಒಟ್ಟಾಗಿ ಸೇರಲು ಬಹಳಷ್ಟು ಸಂಗತಿಯಾಗಲಿದೆ” ಎಂದು ಮತ್ತೊಂದು ಮೂಲ ಇ! ನ್ಯೂಸ್ ಗೆ ತಿಳಿಸಿದೆ.

“ಅವಳು ಅವನನ್ನು ಸೇರಲು ಸಿದ್ಧವಾಗಿಲ್ಲ. ಕಾರ್ಡಿ ಕೇಂದ್ರಿತವಾಗಿರಲು ಪ್ರಯತ್ನಿಸುತ್ತಾಳೆ ಮತ್ತು ಅವಳು ಏನು ಮಾಡಬೇಕೆಂದು ಬಯಸುತ್ತಾರೋ ಅಲ್ಲಿಯ ತನಕ ಅವಳು ಯಾವುದೇ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ” ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 4ರಂದು, ‘ಬೋಡಾಕ್ ಎಲ್ಲೋ’ ರಾಪರ್ ಒಂದು ವರ್ಷದ ನಂತರ ಇನ್ಸಾಗ್ರಾಮ್ ನಲ್ಲಿ ಹಂಚಿಕೊಂಡ ವೀಡಿಯೋದಿಂದಾಗಿ ಅವರ ದಾಂಪತ್ಯದಲ್ಲಿ ಒಡಕುಂಟಾಗಿದೆ ಎಂಬುದಾಗಿ ಆಫ್‍ ಸೆಟ್‍ ಘೋಷಿಸಿದ್ದರು.

ಶನಿವಾರ, ಆಫ್ಸೆಟ್ ಲಾಸ್ ಏಂಜಲೀಸ್ ನ ತನ್ನ ಕಛೇರಿಯಲ್ಲಿ ಕಾರ್ಡಿಗೆ ಬೃಹತ್‍ ಕೇಕ್‍ ಮತ್ತು ಹೂವಿನ ಗುಚ್ಛವನ್ನು ನೀಡುವ ಅಚ್ಚರಿ ನೀಡಿದರು. ಅಲ್ಲದೇ “ಟೇಕ್ ಮಿ ಬ್ಯಾಕ್ ಕಾರ್ಡಿ” ಎಂದು ಬರೆಯುವ ಮೂಲಕ ಆಕೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.

Tags