ಸುದ್ದಿಗಳು

ಇಂಡಿಯಾ ಟು ಇಂಡೋನೇಶಿಯಾ…!!! ಸ್ವಚ್ಛಂದ ಹಕ್ಕಿಗಳಂತೆ ಹಾರಾಡುತ್ತಿರುವ ಬಿಗ್ ಬಾಸ್ ನ ತ್ರಿದೇವಿಯರು..!!!

ಜಾಲಿ ಟ್ರಪ್ ಮಾಡುತ್ತಿರುವ ಅನುಪಮಾ, ಕೃಷಿ, ಹಾಗೂ ಶೃತಿ

ಸೆಲೆಬ್ರೇಷನ್ ಮೂಡ್ನಲ್ಲಿ ಹಾರಾಡುತ್ತಿರುವ ಬಿಗ್ ಬಾಸ್ ಹುಡುಗಿಯರು

ಬೆಂಗಳೂರು, ಸೆ. 14: ಕನ್ನಡದ ಬಿಗ್ ಬಾಸ್ ಸರಣಿ 5 ರ ಸ್ಪರ್ಧಿಯಾಗಿದ್ದ ಕೃಷಿ ತಾಪಂಡ, ಶೃತಿ ಪ್ರಕಾಶ್ ಹಾಗೂ ಅನುಪಮ ಗೌಡ ಸಖತ್ ಕ್ಲೋಸ್ ಆಗಿದ್ದರು. ಈ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಬೇಡಿಕೆಯ ನಟಿಯರಾಗಿ

ಇನ್ನು ಕೃಷಿ ತಾಪಂಡಾ ಬಿಗ್ ಬಾಸ್ ಗೆ ಹೋಗುವುದಕ್ಕಿಂತಲೂ ಮುಂಚೆ ಕಹಿ’ ಹಾಗೂ ‘ಅಕೀರ’ ಚಿತ್ರಗಳಲ್ಲಿ ನಟಿಯಾಗಿದ್ದರು. ಈ ಕಾರ್ಯಕ್ರಮದಿಂದ ಮತ್ತಷ್ಟು ಬೇಡಿಕೆಯ ನಟಿಯಾಗಿದ್ದಾರೆ. ಇವರಂತೆಯೇ ಅನುಪಮ ಗೌಡ ‘ನಗಾರಿ’ ಚಿತ್ರದಲ್ಲಿ ಅಭಿನಯಿಸಿದ್ದರೂ ಅಷ್ಟೊಂದು ಬೇಡಿಕೆಯಲ್ಲಿರಲಿಲ್ಲ. ಇದೀಗ ‘ಆ ಕರಾಳ ರಾತ್ರಿ’,’ಬೆಂಕಿಯಲ್ಲಿ ಅರಳಿದ ಹೂವು’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

 

ಗಾಯಕಿಯಾದ ನಾಯಕಿ

ಶೃತಿ ಪ್ರಕಾಶ್ ಈ ಹಿಂದೆ ಗಾಯಕಿಯಾಗಿದ್ದರು. ಇದೀಗ ‘ಲಂಡನ್ ನಲ್ಲಿ ಲಂಬೋದರ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಭಡ್ತಿ ಪಡೆದಿದ್ದಾರೆ.

ಸೆಲೆಬ್ರೇಷನ್

ಈ ಮೂವರು ನಟಿಯರು ಇದೀಗ ಇಂಡೋನೇಷಿಯಾಗೆ ಪಯಣ ಬೆಳೆಸುತ್ತಿದ್ದು, ಪ್ಲೈಟ್ ಹತ್ತಿದ್ದಾರೆ. ಹಾಗೂ ಅಲ್ಲಿನ ರೆಸಾರ್ಟ್ ನಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಜೊತೆಗೆ ಸೆಲ್ಪೀ ಪೋಟೋಗಳನ್ನು ತೆಗೆಯುತ್ತಾ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Tags

Related Articles