ಸುದ್ದಿಗಳು

ಸರಗಳ್ಳರ ಬಗ್ಗೆ ಹಾಡುಬರೆದರು ಹೇಮಂತ್ ಕುಮಾರ್… ಹಾಡುಗಾರ ಯಾರು ಗೊತ್ತಾ..?

ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗುತ್ತನೇ ಇದೆ. ಸರಗಳ್ಳರನ್ನು ಹೆಡೆಮುರಿ ಕಟ್ಟಲು ಖಾಕಿ ಪಡೆ ಕೂಡ ರಾತ್ರಿ-ಹಗಲೆನ್ನದೇ ಡ್ಯೂಟಿ ಮಾಡುತ್ತನೇ ಇದೆ. ವಿಶೇಷ ಅಂದರೆ, ಕಾನ್ಸ್ಟೇಬಲ್ ಒಬ್ಬರು, ಸರಗಳ್ಳರ ಬಗ್ಗೆ ಎಚ್ಚರಿಕೆಯಿಂದಿರಿ ಅಂತಾ ಹಾಡುವ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ.ಹೌದು..! ‘ಜೋಕೆ ಬಲು ಜೋಕೆ ಸರಗಳ್ಳರಿದ್ದಾರೆ ಜೋಕೆ.. ಒಕೆ.. ಎಲ್ಲಾ  ಒಕೆ  ನೀವು ಹುಷಾರಾಗಿದ್ರೆ ಒಕೆ’. ವಾವ್ ಎಂಥಾ ಸಾಹಿತ್ಯ.. ಎಂಥಾ ಸಂಗೀತ, ನಿಜಕ್ಕೂ ಅದ್ಭುತ. ಸರಳ ಸಾಲುಗಳನ್ನೇ ಇಟ್ಟುಕೊಂಡು ಮ್ಯೂಸಿಕ್ ಡೈರೆಕ್ಟರ್ ಹೇಮಂತ್ ಕುಮಾರ್, ಸರಗಳ್ಳರ ಮೇಲೆ ಒಂದು ಸುಂದರ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ರಚಿಸಿ, ಹಾಡಿದ್ದು ಬೇರ್ಯಾರು ಅಲ್ಲ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪೇದೆ ಸುಬ್ರಮಣಿ ಶಾನುಭೋಗ್..

ಶಾನುಭೋಗ್ ನಿಜಕ್ಕೂ ಪ್ರತಿಭಾವಂತ ವ್ಯಕ್ತಿ. ಪೊಲೀಸ್ ವೃತ್ತಿಯಲ್ಲಿ ತೊಡಗಿಸಿಕೊಂಡಿರೋ ಇವರು, ಸಮಾಜದ ಬಗ್ಗೆ ಸಾಕಷ್ಟು  ಕಾಳಜಿ ಇಟ್ಕೊಂಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಹಾಗೂ ವೃದ್ಧೆಯರ ಮೇಲೆ ನಡೆಯೋ ಸರಗಳ್ಳತನಗಳ ಬಗ್ಗೆ, ಜನರಲ್ಲಿ ಅರಿವು ಮೂಡಿಸಬೇಕು ಅಂದುಕೊಂಡು, ತಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಇಂತಹ ಸುಂದರ ಗೀತೆಯನ್ನ ರಚಿಸಿ, ಜನರ ಮುಂದಿಟ್ಟಿದ್ದಾರೆ.  ಈ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ಪೊಲೀಸ್ ಆಯುಕ್ತರು ಕೂಡ ಇವರ ಕಾರ್ಯಕ್ಕೆ 10 ಸಾವಿರ ನಗದು ಬಹುಮಾನ ಕೊಟ್ಟು, ಶ್ಲಾಘಿಸಿದ್ದಾರೆ. ಇನ್ನೂ ಇಷ್ಟಕ್ಕೆ ಸುಮ್ಮನಾಗದ ಶಾನ್ಭೋಗ್ ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಅರಿವು ಮೂಡಿಸಲು, ಮತ್ತೊಂದು ಹಾಡು ಬರೆಯೋಕೆ ಮುಂದಾಗಿದ್ದಾರೆ.

Tags

Related Articles