ಸುದ್ದಿಗಳು

ಜನ್ಮದಿನ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಫರ್ಧಿ ಚೈತ್ರಾ ಕೋಟೂರ್

ಸುದೀಪ್ ನಿರೂಪಣೆಯಲ್ಲಿ ನಡೆಯುತ್ತಿರುವ ಕನ್ನಡ ಬಿಗ್ ಬಾಸ್ 7 ರ ಸ್ಪರ್ಧಿಯಾಗಿರುವ ಚೈತ್ರಾ ಕೊಟೂರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವ ಬರಹಗಾರ್ತಿಯಾಗಿರುವ ಅವರು ‘ಸೂಜಿದಾರ’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದು, ಮಾತ್ರವಲ್ಲದೇ ಹಾಡನ್ನು ಸಹ ರಚಿಸಿದ್ದರು.

ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಚೈತ್ರಾ ಕೋಟೂರು ಅವರ ತಂದೆ ನಾರಾಯಣಪ್ಪನವರು ಸೇನೆಯಲ್ಲಿ ಹವಾಲ್ದಾರ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ. ಹವ್ಯಾಸಕ್ಕೆಂದು ಚುಟುಕುಗಳನ್ನು ಬರೆಯುತ್ತಾರೆ. ತಾಯಿ ಸರ್ಕಾರಿ ಶಾಲಾ ಶಿಕ್ಷಕಿ.ಸಹೋದರ ಪ್ರದೀಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ.

ಕಥೆ, ಕವನ, ಹನಿಗವಿತೆ, ಸಿನಿಮಾಗಳಿಗೆ ಸಂಭಾಷಣೆ ಮತ್ತು ಹಾಡಿನ ರಚನೆ, ಅಭಿನಯ… ಹೀಗೆ ಅನೇಕ ರೀತಿಯ ಕಲಾ ಕೌಶಲ್ಯತೆಯನ್ನು ಹೊಂದಿದ್ದಾರೆ ಚೈತ್ರಾ. ಅಷ್ಟೇ ಅಲ್ಲದೇ ಇವರು ನಿರ್ದೇಶಕಿಯಾಗಿ ಗುರುತಿಸಿಕೊಳ್ಳುವ ಹಂಬಲ ಹೊಂದಿದ್ದು, ‘ವಿರಾಟಪರ್ವ’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಈ ಚಿತ್ರವು ತೆರೆ ಕಾಣಬೇಕಿದೆ. ಇವರು ನೂರು ಕಾಲ ಸುಖವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

ಸಾವನ್ನಪ್ಪಿದ ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಡಿ-ಬಾಸ್ ದರ್ಶನ್

#ChaithraKotooru #ChaithraKotooruBirthday #SandalwoodMovies  ‍#kannadaSuddigalu

Tags