ಸುದ್ದಿಗಳು

ಚೈತ್ರಾ ಕೋಟೂರ್ ಗೆ ಆಫರ್ ನೀಡಿದ ರವಿ ಬೆಳಗೆರೆ: ಅದರ ವಿವರ ಹೀಗಿದೆ

ಕನ್ನಡ ಬಿಗ್ ಬಾಸ್ 7ರ ಕಾರ್ಯಕ್ರಮ ಸದ್ಯ ಕೊನೆಯ ಹಂತದಲ್ಲಿದೆ. ಈ ಕಾರ್ಯಕ್ರಮದ ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಬಂದ ಮೇಲೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ವಯಸ್ಸಿನ ಅಂತರ ಮೀರಿಯೂ ಅಲ್ಲೊಂದು ಸ್ನೇಹ ಮನೆ ಮಾಡುತ್ತದೆ. ಅದಕ್ಕೆ ಪ್ರತಿ ಸರಣಿಯಲ್ಲೂ ಸಾಕ್ಷಿ ಸಿಗುತ್ತಲೇ ಇದೆ.

ಇನ್ನು ಈ ಸರಣಿಯ ಸ್ಫರ್ಧಿಗಳಾಗಿದ್ದ ರವಿ ಬೆಳಗೆರೆ ಮತ್ತು ಚೈತ್ರಾ ಕೊಟೂರ್ ಅವರುಗಳ ನಡುವೆ ಆತ್ಮೀಯ ಬಾಂಧವ್ಯವಿದೆ. ತಂದೆಯನ್ನು ಆರೈಕೆ ಮಾಡುವ ರೀತಿಯಲ್ಲಿ ಚೈತ್ರಾ, ರವಿ ಅವರನ್ನು ನೋಡಿಕೊಂಡಿದ್ದರು. ಸದ್ಯ ಬಿಡುವಿನ ವೇಳೆಯಲ್ಲಿ ಇವರಿಬ್ಬರೂ ಭೇಟಿಯಾಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಸ್ಥಳಿಯ ಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ ರವಿ ಬೆಳಗೆರೆಯವರ ಒಂದು ಕೃತಿಯನ್ನು ಸಿನಿಮಾ ಅಥವಾ ಸೀರಿಯಲ್‌ ಆಗಿಸುವ ಪ್ಲ್ಯಾನ್‌ ನಡೆಯುತ್ತಿದೆ. ಅದರ ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಚೈತ್ರಾಗೆ ರವಿ ಬೆಳಗೆರೆಯವರು ಆಫರ್‌ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಇವರಿಬ್ಬರೂ ಇನ್ನೂ ಏನನ್ನೂ ತಿಳಿಸಿಲ್ಲ. ಅಲ್ಲದೇ ಚೈತ್ರಾ ಅವರು ‘ಹೇಳಿಹೋಗು ಕಾರಣ’ ಎಂಬ ಕೃತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ್ದಾರೆ.

ಕೋಟಿಗೊಬ್ಬ- 3 ಚಿತ್ರದಲ್ಲಿ ಆಶಿಕಾ ರಂಗನಾಥ್..!!

#ChaitraKottoor #RaviBelagere #kannadabigBoss7 #HeliHoguKarana ‍#KannadaSuddigalu

Tags