ಬಾಲ್ಕನಿಯಿಂದಸಂದರ್ಶನಸುದ್ದಿಗಳು

ನಟನಾ ‘ಚೈತ್ರ’ ಕಾಲ

‘ರಗಡ್’ ಮೂಲಕ ಗಮನ ಸೆಳೆದ ಚೆಲುವೆ

ಬೆಂಗಳೂರು.ಏ.22: ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯ ಶ್ರಾವಣಿಯಾಗಿ ಮನೆ ಮಾತಾದ ಮುದ್ದು ಮುಖದ ಚೆಲುವೆಯ ಹೆಸರು ಚೈತ್ರ ರೆಡ್ಡಿ.

ನಾಲ್ಕು ವರುಷಗಳ ಹಿಂದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಚೈತ್ರ ರೆಡ್ಡಿ ಇಲ್ಲಿಯ ತನಕ ಅಭಿನಯಿಸಿದ್ದು ಕೇವಲ ಎರಡು ಧಾರಾವಾಹಿಗಳಲ್ಲಿ! ಜೊತೆಗೆ ಈಗಾಗಲೇ ಒಂದು ತಮಿಳು ಸಿನಿಮಾದಲ್ಲೂ ನಟಿಸಿಯಾಗಿದೆ.

ಮಹಾನಗರಿ ಬೆಂಗಳೂರು ಮೂಲದ ಚೈತ್ರ ರೆಡ್ಡಿ ಸದ್ಯ ತಮಿಳು ರಂಗದಲ್ಲಿ ತುಂಬಾ ಬ್ಯುಸಿ. ತಮಿಳಿನಲ್ಲಿಯೇ ಸಾಕಷ್ಟು ಹೆಸರು ಗಳಿಸಿರುವ ಚೈತ್ರ ರೆಡ್ಡಿ ಇದೀಗ ತಮ್ಮ ಚೊಚ್ಚಲ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ನಟನಾ ಕಂಪನ್ನು ಪಸರಿಸಲಿದ್ದಾರೆ.

‘ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಮೊದಲ ಸಿನಿಮಾ ಅಂದ ಮೇಲೆ ಕೇಳಬೇಕೆ? ಒಂದಷ್ಟು ಖುಷಿ ಇದ್ದೇ ಇರುತ್ತದೆ. ನಿಜ ಹೇಳಬೇಕೆಂದರೆ ಜನ ನನ್ನನ್ನು ಅದು ಹೇಗೆ ಸ್ವೀಕರಿಸುತ್ತಾರೋ ಎಂಬ ಭಯದಲ್ಲಿದ್ದೆ’ ಎನ್ನುತ್ತಾರೆ ಚೈತ್ರ.

ಅವಕಾಶ ಅರಸಿ ಬರುತ್ತಿದೆ ಎಂದು ಎಲ್ಲಾ ಸಿನಿಮಾಗಳಿಗೆ ಓಕೆ ಅಂದಿದ್ದರೆ ನಾನಿಂದು ಏನೆಂದರೂ ಹತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ ನನಗದು ಇಷ್ಟವಿಲ್ಲ ಎನ್ನುವ ಚೈತ್ರ ಕಿರುತೆರೆ ಮತ್ತು ಬೆಳ್ಳಿತೆರೆ ಇದೆರಡರಲ್ಲೂ ತೃಪ್ತಿ ಪಟ್ಟುಕೊಂಡಿದ್ದಾರೆ. ಮಾಡಿದ್ದರೆ, ಇಷ್ಟೊತ್ತಿಗಾಗಲೇ ಹತ್ತಾರು ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ. ಅದು ನನಗಿಷ್ಟವಿಲ್ಲ. ನಂದೇನಿದ್ದರೂ ಲಿಮಿಟೆಡ್ ಎಡಿಷನ್’- ಹೀಗೆ ನಿರರ್ಗಳವಾಗಿ ಹೇಳಿಕೊಳ್ಳುತ್ತಾರೆ ನಟಿ ಚೈತ್ರಾ ರೆಡ್ಡಿ.

‘ಸತ್ಯ ಹೇಳಬೇಕೆಂದರೆ ಎಲ್ಲಿ ನನಗೆ ಆರಾಮ ಫೀಲ್ ಆಗುತ್ತದೆಯೋ ಅಲ್ಲಿ ನಾನು ಇರುತ್ತೇನೆ. ಆದರೆ ಯಾವಾಗ ನನಗೆ ಅನ್ ಕಂಫರ್ಟೇಬಲ್ ಫೀಲ್ ಆಗುತ್ತದೋ ನಾನು ಮತ್ತೆ ಸೀದಾ ಅಲ್ಲಿಂದ ಜಾಗ ಖಾಲಿ ಮಾಡುತ್ತೇನೆ. ಅದುವೇ ನನ್ನ ಸ್ವಭಾವ. ಯಾವ ಕಾರಣಕ್ಕೂ ಅದು ಬದಲಾಗದು ಎನ್ನುವ ಮುದ್ದು ಮುಖದ ಸುಂದರಿ ಪಾತ್ರಗಳ ವಿಚಾರ ಬಂದಾಗ ತುಂಬಾ ಚ್ಯೂಸಿ.

‘ನಾನು ನಟನೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೇನೆ ನಿಜ. ಆದರೆ ನಾನು ಯಾವತ್ತೂ ಅವಸರ ಮಾಡುವುದಿಲ್ಲ. ನಟನಾ ರಂಗಕ್ಕೆ ಬಂದು ನಾಲ್ಕು ವರುಷಗಳಾದರೂ ಬರೀ ಎರಡು ಧಾರಾವಾಹಿಗಳಲ್ಲಷ್ಟೇ ಅಭಿನಯಿಸಿದ್ದೇನೆ ಎಂದು ಜನ ಹೇಳುತ್ತಿದ್ದಾರೆ. ಆದರೆ ಮಾನು ಅದು ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ‘ ಎನ್ನುತ್ತಾರೆ ಚೈತ್ರ ರೆಡ್ಡಿ.

‘ರಗಡ್’ ಚಿತ್ರದಲ್ಲಿ ನಾನು ಹುಬ್ಬಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಹುಬ್ಬಳ್ಳಿ ಭಾಷೆಯ ಸೊಗಡಿನ ಸಂಭಾಷಣೆ ಹೇಳಿದ್ದೇನೆ. ಎಸ್.ಎಸ್.ಎಲ್.ಸಿ ಫೇಲಾಗಿ ಮನೆಯಲ್ಲಿಯೇ ಕುಳಿತು ತಾನು ಮದುವೆಯಾಗುವ ಹುಡುಗನ ಬಗ್ಗೆ ಕನಸು ಕಾಣುತ್ತಿರುವ ಪಾತ್ರ ನನ್ನದು. ಹತ್ತಕ್ಕೂ ಹೆಚ್ಚು ಹುಡುಗರು ಪ್ರಪೋಸ್ ಮಾಡಿದರೂ, ಎಲ್ಲರನ್ನೂ ತಿರಸ್ಕರಿಸಿರುತ್ತಾಳೆ. ಅದೇ ವೇಳೆಗೆ ನಾಯಕನ ಎಂಟ್ರಿಯಾಗುತ್ತದೆ. ಪ್ರೀತಿಯಲ್ಲೂ ಬೀಳುತ್ತಾಳೆ. ಹೀಗೆ ಸಾಗಲಿದೆ ಕಥೆ’ ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳಲು ಮರೆಯಲಿಲ್ಲ.

ಬ್ಯಾಟ್ ಹಿಡಿದ ರಾಜಕುಮಾರಿ

#chaitrareddy, #busy, #kannada, #movie, #balkaninews #filmnews, #kannadasuddigalu, #ragad

Tags