ಸುದ್ದಿಗಳು

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ‘ಚಲಿಸುವ ಮೋಡಗಳು’

ಹಳೆಯ ಟೈಟಲ್ ನಲ್ಲಿ ಹೊಸ ಸಿನಿಮಾ

ಬೆಂಗಳೂರು.ಜ.11: ಮನುಷ್ಯನ ಬದುಕಿಗೂ, ಚಿತ್ರರಂಗಕ್ಕೂ ಒಂಥರ ಸಂಬಂಧವೆನಿಸುವ ಹೆಸರು ‘ಚಲಿಸುವ ಮೋಡಗಳು’. ಇದೀಗ ಇದೇ ಹೆಸರನ್ನು ಇಟ್ಟುಕೊಂಡು ಇಲ್ಲೊಂದು ಹೊಸಬರ ತಂಡದವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

32 ವರ್ಷಗಳ ಹಿಂದಿನ ಸಿನಿಮಾ

ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ‘ಚಲಿಸುವ ಮೋಡಗಳು’ 1982 ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಡಾ. ರಾಜ್ ಕುಮಾರ್, ಸರಿತಾ, ಅಂಬಿಕಾ, ಪುನೀತ್ ರಾಜ್ ಕುಮಾರ್, ಹೊನ್ನವಳ‍್ಳಿ ಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದರು. ಚಿತ್ರದಲ್ಲಿನ ವಕೀಲ ಮೋಹನ್ ಪಾತ್ರ ಅದ್ಭುತವಾಗಿತ್ತು.

ಇದು ಹೊಸಬರ ‘ಚಲಿಸುವ ಮೋಡಗಳು’

ಈಗಾಗಲೇ ಡಾ. ರಾಜ್ ಕುಮಾರ್ ನಟಿಸಿರುವ ‘ಶ್ರೀನಿವಾಸ ಕಲ್ಯಾಣ’, ‘ಎರಡು ಕನಸು’ ಚಿತ್ರಗಳ ಹೆಸರಿನಂತೆ ‘ಚಲಿಸುವ ಮೋಡಗಳು’ ಸಹ ಹೊಸಬರ ಸಿನಿಮಾ ಶೀರ್ಷಿಕೆಯಾಗಿದೆ. ಮಹೇಶ್ ವೀರಭದ್ರಯ್ಯ ಸಾರಥ್ಯದಲ್ಲಿ ಹೊಸ ಚಲಿಸುವ ಮೋಡಗಳು ಮೂಡಿ ಬರುತ್ತಿದೆ.

ರಂಗಭೂಮಿ ಕಲಾವಿದರು

ಚಿತ್ರದಲ್ಲಿ ಬಹುತೇಕ ರಂಗಭೂಮಿಯ ಕಲಾವಿದರೇ ಅಭಿನಯಿಸಿದ್ದು, ಈಗಾಗಲೇ ಒಂದನೇ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಎಸ್.ಕುಮಾರ್ ಫಿಲಂಸ್ ಬ್ಯಾನರ್ ನಡಿ ಸಿನಿಮಾ ಮೂಡಿ ಬರುತ್ತಿದೆ.

#chalisuvamodagalu, #balkaninews #filmnews, #kannadasuddigalu, #rajkumar

Tags