ಸುದ್ದಿಗಳು

‘ಮೈ ಲಾರ್ಡ್ ನನ್ನ ವಾದ ಕೇಳಿ’ ಎಂದ ವಿನಯ್ ರಾಜ್ ಕುಮಾರ್.

ನಟ ವಿನಯ್ ಅವರ ಮೂರನೇ ಸಿನಿಮಾ ಅನಂತು ವರ್ಸಸ್ ನುಸ್ರತ್ ಗಾಗಿ, ಕರಿ ಕೋಟು ತೊಟ್ಟು ವಕೀಲರಾಗಿರುವ ವಿಷಯ ಹಳೆಯದಾಯಿತು. ಟವರಿಗೆ ಜೊತೆಯಾಗಿ ಲತಾ ಹೆಗ್ಡೆ ಅಭಿನಯಿಸುತ್ತಿದ್ದು, ಕಾಮಿಡಿ ಕಿಲಾಡಿಗಳು ನಯನಾ ಮುಖ್ಯ ಪಾತ್ರದಲ್ಲಿದ್ದಾರೆ.

ಸುಧೀರ್ ಶಾನಭಾಗ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ, ಸಧ್ಯ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಕೋರ್ಟ್ ಸೆಟ್ ನಲ್ಲಿ ಕೆಲ ದಿನಗಳಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

1980 ರಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದ ಡಾ. ರಾಜ್ ಕುಮಾರ್ ಅಭಿನಯದ ಚಲಿಸುವ ಮೋಡಗಳು’ ಚಿತ್ರದಲ್ಲಿನ ‘ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ’ ಎಂಬ ಹಾಡನ್ನು ಮರು ಸೃಷ್ಟಿಸಿ ‘ಅನಂತು’ ಚಿತ್ರಕ್ಕೆ ಅಳವಡಿಸಲಾಗಿದೆ. ಈ ಹಾಡನ್ನು ಕೋರ್ಟ್ ನಲ್ಲಿಯೇ ಶೂಟ್ ಮಾಡಲಾಗಿತ್ತು. ಡಾ. ರಾಜ್ ಕುಮಾರ ಹಾಗೂ ಅಂಬಿಕಾರ ನಡುವೆ ಈ ಹಾಡನ್ನು ಚಿತ್ರೀಕರಿಸಲಾಗಿತ್ತು. ಈ ಅನಂತು ಚಿತ್ರದಲ್ಲಿ ನಾಯಕ ನಾಯಕಿ ಲಾಯರ್ ಪಾತ್ರ ಮಾಡುತ್ತಿರುವುದರಿಂದ ಮತ್ತೆ ಈ ಹಾಡನ್ನು ಮರು ಸೃಷ್ಟಿಸಲಾಗುತ್ತಿದೆಯಂತೆ.

ಈಗಾಗಲೇ ಚಲಿಸುವ ಮೋಡಗಳು ಚಿತ್ರದ ‘ಕಾಣದಂತೆ ಮಾಯವಾದನು’ ಎಂಬ ಹಾಡನ್ನು ‘ಅಣ್ಣಾ ಬಾಂಡ್’ ಚಿತ್ರದಲ್ಲಿ ರಿಮೀಕ್ಸ್ ಮಾಡಲಾಗಿತ್ತು. ಈಗ ಇದೇ ಚಿತ್ರದ ಇನ್ನೊಂದು ಹಾಡು ಸಹ ರಿಮೀಕ್ಸ್ ಆಗುತ್ತಿದೆ.
ಅನಂತು ಚಿತ್ರಕ್ಕೆ ಸುನಧ್ ಗೌತಮ್ ಸಂಗೀತ ಸಂಯೋಜಿಸುತ್ತಿದ್ದು ಅಭಿಶೇಕ್ ಕಾಸರಗೋಡ್ ಛಾಯಾಗ್ರಹಣವಿದೆ.

Tags

Related Articles

Leave a Reply

Your email address will not be published. Required fields are marked *