ಸುದ್ದಿಗಳು

ಪುಟ್ಟ ಅಭಿಮಾನಿಯ ಬರ್ತಡೇ ಆಚರಿಸಿದ ಡಿ-ಬಾಸ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಅಭಿಮಾನಿಗಳಿಗೆ ಅವರ ಬೇಡಿಕೆಗಳನ್ನು ಈಡೇರಿಸುತ್ತಲೇ ಇರುತ್ತಾರೆ. ಅವರು ಬರ್ತಾರೆ ಅಥವಾ ದರ್ಶನ ನೀಡ್ತಾರೆ ಅಂದರೆ ಸಾಕು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಇರುತ್ತಾರೆ. ಹೀಗಾಗಿ ದರ್ಶನ್ ಅಂದರೆ ಸಾಕು ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ದರ್ಶನ್ ಗೂ ಅಭಿಮಾನಿಗಳು ಅಂದರೂ ಅಷ್ಟೇ ಪ್ರೀತಿ.

ಅಂದ ಹಾಗೆ ಇಂದು ‘ರಾಬರ್ಟ್’ ಸಿನಿಮಾ ಸೆಟ್ ನಲ್ಲಿ ದರ್ಶನ್ ಹಾಗೂ ಸಿನಿಮಾ ತಂಡದವರು ಪುಟ್ಟ ಅಭಿಮಾನಿಯ ಬರ್ತಡೇ ಆಚರಿಸಿದ್ದಾರೆ. ಈ ಪುಟ್ಟ ಅಭಿಮಾನಿಯ ಜೊತೆಗೆ ಕೇಕ್ ಕತ್ತರಿಸಿ ಶುಭಾಶಯ ತಿಳಿಸಿದ್ದಾರೆ. ಇನ್ನು ಈ ಪುಟ್ಟ ಹುಡುಗಿ ಸಹ ತನ್ನ ಬರ್ತಡೇ ದಿನದಂದು ದೊಡ್ಡ ಗಿಪ್ಟ್ ಸಿಕ್ಕಂತೆ ಖುಷಿ ಪಟ್ಟಿದ್ದಾರೆ.

ದಬಾಂಗ್ -3 ಕನ್ನಡ ಪ್ರೋಮೋ ! ಸಲ್ಲು ಭಾಯ್ ಗೆ ಕಿಚ್ಚನ ಟ್ವೀಟ್ ಏನು?

#Challengingstardarshan #DarshanFans   #sandalwoodmovies  ‍#kannadasuddigalu

Tags