ಸುದ್ದಿಗಳು

ಟಾಲಿವುಡ್ ಗೆ ಡಬ್ ಆಗಲಿರುವ ‘ಚಮಕ್’

ಬೆಂಗಳೂರು,ಏ.14: “ಚಲೋ”  ಮೂಲಕ  ಟಾಲಿವುಟ್ ಗೆ ಎಂಟ್ರಿ ನೀಡಿದ ಚಂದನವನದ ಬೆಡಗಿ  ರಶ್ಮಿಕಾ ತನ್ನ ಮೊದಲ ತೆಲುಗು ಚಿತ್ರ  ಹಿಟ್ ನೀಡಿದ್ದೇ ತಡ ಮುಂದಿನ ಚಿತ್ರ ಗೀತಾ ಗೋವಿಂದಮ್ ಕೂಡ ಸೂಪರ್ ಹಿಟ್…

ಗೀತಾ ಚಲೋ

ತೆಲುಗು ಚಿತ್ರೋದ್ಯಮದಲ್ಲಿ ಇತರ ರಾಜ್ಯಗಳಿಂದ ನಾಯಕ ಅಥವಾ ನಾಯಕಿ ಯಶಸ್ವಿಯಾದರೆ, ನಮ್ಮ ಚಿತ್ರರಂಗದ ನಿರ್ಮಾಪಕರು ತಮ್ಮ ಹಿಂದಿನ ಚಿತ್ರಗಳನ್ನು ವಿಭಿನ್ನ ಶೀರ್ಷಿಕೆಗಳೊಂದಿಗೆ  ಇತರ ಭಾಷೆಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಹೊಂದಿರುತ್ತಾರೆ.. ಈಗ, ರಶ್ಮಿಕ ಮತ್ತು ನಾಯಕ ಗಣೇಶ್ ಅವರ 2017 ರ ಕನ್ನಡ ಚಿತ್ರ’’ಚಮಕ್’’ ಟಾಲಿವುಡ್ ನಲ್ಲಿ ‘ಗೀತಾ ಚಲೋ’ ಎಂಬ ಶೀರ್ಷಿಕೆಯೊಂದಿಗೆ ತೆಲುಗು ಭಾಷೆಯಲ್ಲಿ ಡಬ್ ಮಾಡಲಾಗಿದೆ.

Image result for chamak kannada movie

ನಿರ್ದೇಶಕ ಸುನಿ ಕಾಂಬಿನೇಷನ್
ಗಣೇಶ್‌, ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸುನಿ ಕಾಂಬಿನೇಷನ್‌ ನ ‘ಚಮಕ್‌’ ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ಅತೀ ನಿರೀಕ್ಷೆ ಹುಟ್ಟಿಸಿತ್ತು. ಈ ಸಿನಿಮಾ ಕಲರ್‌ಫುಲ್‌ ಆಗಿ ಮೂಡಿ ಬಂದಿರುವ ಹಿಂದೆ ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಅವರ ಶ್ರಮವೂ ಇದೆ.

ಚಮಕ್ ನಲ್ಲಿ , ಕುಶ್ ಗಣೇಶ್ ಆದರೆ ನಾಯಕಿ ರಶ್ಮಿಕಾ ಕುಶಿ..  , ತೆಲುಗು ಆವೃತ್ತಿಯಲ್ಲಿ ತಯಾರಕರು ಏನು ಹೆಸರಿಡುತ್ತಾರೆ ಎಂಬುದೇ ಈಗಿರುವ ಕುತೂಹಲ..

ಇನ್ನೂ 50 ವರ್ಷಗಳ ಕಾಲ ನಟನೆ ಮಾಡ್ತಿನಿ ಎಂದ ರಾಘವೇಂದ್ರ ರಾಜ್ ಕುಮಾರ್

#balkaninews #sandalwood #tollywood #chamak

Tags