ಸುದ್ದಿಗಳು

‘ಚಂಬಲ್’ ಗೆ ಸಿನಿ ತಾರೆಯರ ವಿಶ್

ಬೆಂಗಳೂರು, ಫೆ.19:

ಸದ್ಯ ಬಾರೀ ಚರ್ಚೆಗೆ ಗ್ರಾಸವಾಗಿರುವ ಚಂಬಲ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ‌ ಈಗಾಗಲೇ ಟ್ರೇಲರ್ ಮೂಲಕ ನಿರೀಕ್ಷೆಯ ಜೊತೆಗೆ ವಿರೋಧಕ್ಕೆ ಕಾರಣವಾಗಿತ್ತು. ಡಿ.ಕೆ‌.ರವಿಯವರ ಕಥೆಯನ್ನಾಧಾರಿಸಿದ ಸಿನಿಮಾ ಇದಾಗಿತ್ತು ಅಂತಾ ಹಲವಾರು ಮಂದಿ ವಾದಿಸಿದ್ದರು. ಇದೀಗ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಸಿನಿಮಾ ಅಭಿಮಾನಿಗಳು ಕೂಡ ಸಿನಿಮಾಗೆ ವಿಶ್ ಮಾಡಿದ್ದಾರೆ.

ಸಿನಿಮಾಮಂದಿಯಿಂದ ವಿಶ್

ಚಂಬಲ್ ಸಿನಿಮಾ ರಿಲೀಸ್ ಆಗ್ತಾ ಇದೆ. ಇದೀಗ ನಟ ಧೃವ ಸರ್ಜಾ ಕೂಡ ಈ ಸಿನಿಮಾಗೆ ವಿಶ್ ಮಾಡಿದ್ದಾರೆ. ಈ ಸಿನಿಮಾ ವಿಭಿನ್ನವಾಗಿ ಇದೆ ಸೋ ಪ್ಲೀಸ್ ಮಿಸ್ ಮಾಡದೇ ನೋಡಿ ಎಂದು ಹೇಳಿದ್ದಾರೆ. ಇನ್ನು  ಪೂರ್ಣ ಚಂದ್ರೆ ತೇಜಸ್ವಿ, ನಯನ, ಐಶಾನಿ, ಎಸ್.ಮಹೇಶ್ ಕುಮಾರ್ ಸೇರಿದಂತೆ ಹಲವಾರು ಮಂದಿ ಸಿನಿಮಾಗೆ ವಿಶ್ ಮಾಡಿದ್ದಾರೆ.

ಐ ಎ ಎಸ್ ಅಧಿಕಾರಿಯಾದ ನೀನಾಸಂ ಸತೀಶ್

ಮೊಟ್ಟಮೊದಲ ಬಾರಿಗೆ ಐಎಎಸ್ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಅಭಿನಯಿಸುತ್ತಿದ್ದಾರೆ.  ಜೇಕಬ್ ವರ್ಗೀಸ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶಶಿಕುಮಾರ್ ಛಾಯಾಗ್ರಹಣ ಹಾಗೂ ಭುವನ್ ಅವರ ಸಂಕಲನವಿರುವ ಈ ಚಿತ್ರಕ್ಕೆ ನಂದೀಶ್ ಚಿತ್ರಕಥೆ ಬರೆದಿದ್ದಾರೆ. ಬಿ.ಎ.ಮಧು ಹಾಗೂ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.

ವೆಬ್ ಸರಣಿಯತ್ತ ಗಮನ ಹರಿಸಿದ ಪವರ್ ಸ್ಟಾರ್..!!!

#sandalwood #kannadamovies #balkaninews #sathishninasam #chambalkannadamovie

Tags

Related Articles