ಸುದ್ದಿಗಳು

ಅವನು ನಮ್ಮ ಜೊತೆಗಿದ್ದರೆ ಒಳ್ಳೆಯವರಿಗೆ ಉಳಿಗಾಲ, ಕೆಟ್ಟವರಿಗೆ ಕೇಡುಗಾಲ

ನೋಡುಗರ ಮನ ಸೆಳೆದ ‘ಚಾಣಾಕ್ಷ’ ಟ್ರೈಲರ್

ಬೆಂಗಳೂರು.ಮಾ.14: ಚಂದನವನದ ಯಂಗ್ ಹೀರೋ ಕ್ಯಾಡ್ಬರಿಸ್ ಎಂದೇ ಖ್ಯಾತಿ ಪಡೆದಿರುವ ಧರ್ಮ ಕೀರ್ತಿರಾಜ್ ನಟಿಸಿರುವ ‘ಚಾಣಾಕ್ಷ’ ಚಿತ್ರ ಇದೇ ತಿಂಗಳ ಕೊನೆ ವಾರ ಬಿಡುಗಡೆಗೆ ಸಿದ್ದವಾಗುತ್ತಿದೆ. ಇದೇ ಸಮಯದಲ್ಲಿ ಚಿತ್ರತಂಡದವರು ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಸದ್ಯ ಬಿಡುಗಡೆ ಮಾಡಿರುವ ಚಿತ್ರದ ಟ್ರೈಲರ್ ನೋಡುವಂತಿದ್ದು, ಅದರಲ್ಲಿ ಕೇಳಿ ಬರುವ ‘ಅವನು ನಮ್ಮ ಜೊತೆಗಿದ್ದರೆ ಒಳ್ಳೆಯವರಿಗೆ ಉಳಿಗಾಲ, ಕೆಟ್ಟವರಿಗೆ ಕೇಡುಗಾಲ’ ಎಂಬ ಡೈಲಾಗ್ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿದೆ. ಚಿತ್ರದಲ್ಲಿ ತಂದೆ ಕಂಡ ಕನಸನ್ನು ಮಗ ನನಸು ಮಾಡುವ ಕಥೆಯನ್ನು ತೋರಿಸಲಾಗಿದೆ.

ಚಿತ್ರಕ್ಕೆ ಮಹೇಶ್ ಚಿನ್ಮಯ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ತಂದೆಯ ಕನಸನ್ನು ನಾಯಕ ತನ್ನ ಚಾಣಾಕ್ಷ ಬುದ್ಧಿಯಿಂದ ಹೇಗೆಲ್ಲಾ ಈಡೇರಿಸುತ್ತಾನೆ ಎಂಬುದನ್ನು ಲವ್, ಸೆಂಟಿಮೆಂಟ್, ಕಾಮಿಡಿ ಮೂಲಕ ತೋರಿಸಿದ್ದಾರೆ.


‘ನನ್ನದು ನಗರದಿಂದ ಹಳ್ಳಿಗೆ ಬರುವ ಯುವಕನ ಪಾತ್ರವನ್ನು ನಿರ್ವಹಿಸಿದ್ದು ಕಥೆಯಲ್ಲಿ ಹಲವಾರು ಟ್ವಿಸ್ಟ್ ಗಳಿವೆ. ರೈತರ ಸಮಸ್ಯೆಯ ಬಗ್ಗೆಯೂ ಇಲ್ಲಿ ಹೇಳಲಾಗಿದೆ. ಹಾಗೆಯೇ ಲವರ್ ಬಾಯ್ ಶೇಡ್ ನಿಂದ ಹೊರ ಬಂದು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಧರ್ಮ ಕೀರ್ತಿರಾಜ್ ಹೇಳುತ್ತಾರೆ.

ಇನ್ನು ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿದ್ದು, ಥ್ರಿಲ್ಲರ್ ಮಂಜು ಈ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಇನ್ನು ಚಿತ್ರಕ್ಕೆ ಅಭಿಮನ್ ರಾಯ್ ಸಂಗೀತ ನೀಡಿದ್ದು, ನಾಯಕ ಧರ್ಮ ಕೀರ್ತಿರಾಜ್ ಗೆ ನಾಯಕಿಯಾಗಿ ಅರ್ಚನಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

“ಈ ಚಿತ್ರ ನನ್ನ ಕೊನೆಯ ಚಿತ್ರವಾಗಲಿದೆ”: ರಾಜಮೌಳಿ!!

#chanaksha, #trailor, #released, #balkaninews #dharamkeerthiraj, #kannadasuddigalu

 

Tags