ಸುದ್ದಿಗಳು

ನೋವನ್ನೇ ನುಂಗಿ , ವಿಶ್ವವನ್ನೇ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್

ಇಂದು 130 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು.ಏ.16: ನಗಿಸುತ್ತಲೇ ಬದುಕಿನ ಸಂಕಟಗಳು, ಪ್ರೀತಿಯ ಮಾನವೀಯತೆ ಪಾಠ ಮಾಡಿದ ಮಹಾನ್ ಕಲಾವಿದ ಚಾರ್ಲಿ ಚಾಪ್ಲಿನ್ (ಏಪ್ರಿಲ್ 16, 1889) ಇವರ 130 ನೇ ಜನ್ಮದಿನದ ಸಂಭ್ರಮ. ಇವರು ಪ್ರಪಂಚ ಕಂಡ ಮಹಾನ್ ನಟ, ನಿರ್ಮಾಪಕ ಮತ್ತು ನಿರ್ದೇಶಕರಲ್ಲಿ ಒಬ್ಬರು.

Related image

ಹಾಸ್ಯ ಪಾತ್ರಗಳಲ್ಲಿ ಚಾರ್ಲಿನ್ ಹುಟ್ಟಿಸಿದ ನಗೆ, ಆ ನಗೆಯ ಅಂತರಾಳದಲ್ಲಿ ಈ ವಿಶ್ವದ ಜನರ ಅದರಲ್ಲೂ ಬಡ ಮತ್ತು ಶೋಷಿತ ಜನಾಂಗದ ಕುರಿತಾಗಿ ನೀವು ಮೂಡಿಸಿದ ಕಾಳಜಿಗಳು ಅಪ್ರತಿಮವಾದದ್ದು. ಚಿತ್ರಗಳಲ್ಲಿ ಇವರು ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ನೀವು ಚಿತ್ರದಲ್ಲಿ ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು ಎಲ್ಲವೂ ಪ್ರಿಯವೋ ಪ್ರಿಯ.

Image result for charlie chaplin

ಇನ್ನು ಸಿನಿಮಾಗಳಲ್ಲಿ ‘ಟಿಂಗ್, ಟಿಂಗ್, ಟಿಂಗ್ ,ಟಿಂಗ್….’ ಅಂತ ಚಾರ್ಲಿ ಚಾಪ್ಲಿನ್ ನಡೆಯುವುದೇ ಖುಷಿ. ಕಿತ್ತು ಹೋಗಿರುವ ಶೂ, ಕೊಳೆ ತುಂಬಿದ ಹಳೆ ಕೋಟು, ತಲೆಯ ಮೇಲಿನ ಹ್ಯಾಟು, ಕಾಲಿಗೆ ಚಕ್ರ ಕಟ್ಟಿಕೊಂಡು ಸ್ಕೇಟಿಂಗ್ ಮೂಲಕ ಚಿನಕುರುಳಿಯಂತೆ ಅಡ್ಡಾಡುವ ವೈಭವ, ಹುಡುಗಿಯನ್ನು ಪ್ರೇಮಿಸುವ ಪರಿ, ದಡಿಯನನ್ನು ಪೇಚಿಗೆ ಸಿಕ್ಕಿಸುವ ರೀತಿ, ಸಿಕ್ಕಿದವರನ್ನೆಲ್ಲ ತನ್ನ ಕೋಲಿನಲ್ಲಿ ಕುಟ್ಟಿ ಬೀಳಿಸುವ ಚೇಷ್ಟೆ…. ಒಂದೇ ಎರಡೇ.

Image result for charlie chaplin

ಸಂತೋಷ ಮತ್ತು ತಿಳಿವಳಿಕೆ ಎರಡು ವಿರುದ್ಧ ದಿಕ್ಕಿನವು. ಮನಸ್ಸು ತುಂಬಾ ನಗು ಮತ್ತು ತಲೆ ತುಂಬಾ ತಿಳಿವಳಿಕೆ ಎರಡನ್ನೂ ಒಟ್ಟಿಗೆ ಕೊಟ್ಟವರು ಚಾಪ್ಲಿನ್. ‘ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್ ರಷ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ. ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನರಾದರು.

Image result for charlie chaplin

ಇವರು ಜನರನ್ನು ನಗಿಸಿದ್ದು ವಿಶ್ವ ಎರಡು ಯುದ್ಧಗಳಲ್ಲಿ ನಲುಗಿದ್ದ ಕಾಲದಲ್ಲಿ. ಇಡೀ ವಿಶ್ವ ಆರ್ಥಿಕ ಸಂಕಟಗಳ ಸಂಕೋಲೆಗಳಲ್ಲಿ ನಲುಗಿದ್ದ ಕಾಲದಲ್ಲಿ. ಆತನ ವಿಡಂಭನೆಗಳ ಧೈರ್ಯವನ್ನು ಮೆಚ್ಚಲೇ ಬೇಕು. ಹಾಗೆಯೇ ಇವರು ಹೇಳುವ ಜೀವನಾನುಭವಗಳ ಮಾತುಗಳು ಇಷ್ಟವಾಗುತ್ತವೆ.

1. ನಾನು ಮಳೆಯಲ್ಲಿ ನೆನೆಯಲು ಇಷ್ಟ ಪಡುತ್ತೇನೆ. ಏಕೆಂದರೆ ಆಗ ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲ.

2 ನನ್ನ ಬದುಕಲ್ಲಿ ನೂರಾರು ಸಮಸ್ಯೆಗಳಿವೆ. ಆದರೆ ನನ್ನ ತುಟಿಗಳಿಗೆ ಸಮಸ್ಯೆಗಳ ಅರಿವಿಲ್ಲ. ಈಗಾಗಿ ತುಟಿಗಳಲ್ಲಿ ಸದಾ ನಗುವಿರುತ್ತದೆ.

3 ಬದುಕಿನಲ್ಲಿ ನಗುವಿರದಿದ್ದರೆ ಆ ಬದುಕಿನ ಒಂದು ದಿನ ಹಾಳಾದಂತೆ.

ಒಗ್ಗರಣೆಗೂ ಸೈ, ಆರೋಗ್ಯಕ್ಕೂ ಜೈ ಎನ್ನುವ ಅಡುಗೆ ಮನೆಯ ಜೀರಿಗೆ

#charlichaplin, #birthday, #balkaninews #filmnews, #kannadasuddigalu

Tags