ಸುದ್ದಿಗಳು

ಶೀರ್ಷಿಕೆ ಬದಲಾವಣೆ ಮಾಡಿಕೊಂಡ ‘ಚೀಟ್ ಇಂಡಿಯಾ’ ಚಿತ್ರತಂಡ

ಮುಂಬೈ, ಜ.12: ಸಿನಿಮಾ ಟೈಟಲ್‌ ಗಳು ಕೆಲವೊಮ್ಮೆ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಗುರಿಯಾಗುತ್ತವೆ. ಈಗಾಗಲೇ ಇಂಥಹ ಅನೇಕ ಘಟನೆಗಳು ನಡೆದಿವೆ. ಅಷ್ಟೆ ಅಲ್ಲ ಅಂಥಹ ಸಿನಿಮಾಗಳಿಗೆ ವಿರೋಧ ಕೂಡ ವ್ಯಕ್ತವಾದುದ್ದುಂಟು. ಇದೀಗ ‘ಚೀಟ್ ಇಂಡಿಯಾ’ ಸಿನಿಮಾ ಕಥೆ ಕೂಡ ಹಾಗೆ ಆಗಿದೆ.

ಇಮ್ರಾನ್ ಹಶ್ಮಿ ನಟನೆಯ ಸಿನಿಮಾ

ಹೌದು, ಇಮ್ರಾನ್ ಹಶ್ಮಿ ನಟನೆಯ ‘ಚೀಟ್ ಇಂಡಿಯಾ’ ಎನ್ನುವ ಶೀರ್ಷಿಕೆಯಲ್ಲಿ ಸಿನಿಮಾ ಮುಂದಿನ ವಾರ ತೆರೆ ಕಾಣಲು ರೆಡಿಯಾಗಿತ್ತು. ಇದಕ್ಕೆ ನಕಲ್ ಮೇ ಹಿ ಅಕಲ್ ಹೇ ಎನ್ನುವ ಟ್ಯಾಗ್ ಲೈನ್ ಕೂಡ ಇತ್ತು. ಆದರೆ ಇದೀಗ ಈ ಹೆಸರಿಗೆ ಸೆನ್ಸಾರ್ ಬೋರ್ಡ್ ವಿರೋಧ ವ್ಯಕ್ತ ಮಾಡಿದೆ. ಹಾಗಾಗಿ ಸಿನಿಮಾ ಟೈಟಲ್ ಕೂಡ ಬದಲಾವಣೆ ಮಾಡಿ ಟ್ಯಾಗ್ ಲೈನ್ ಕೂಡ ತೆಗೆದಿದೆ.

ವೈ ಚೀಟ್ ಇಂಡಿಯಾ

ಸೌಮಿಕ್ ಸೇನ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಮುಂದಿನ ವಾರ ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಹೇಗಿರುತ್ತದೆ ಎಂಬುದರ ಸಿನಿಮಾವಾಗಿದೆಯಂತೆ. ಹಾಗಾಗಿ ಸೆನ್ಸಾರ್ ಮಂಡಳಿ ಈ ಸಿನಿಮಾ ಟೈಟಲ್ ತೆಗೆಯುವಂತೆ ಸೂಚನೆ ನೀಡಿತ್ತು. ಅದರಂತೆ ಈ ಸಿನಿಮಾ ಟೈಟಲ್ ಬದಲಾಗಿದ್ದು, ವೈ ಚೀಟ್ ಇಂಡಿಯಾ ಎಂಬ ಟೈಟಲ್ ಇಟ್ಟುಕೊಂಡು ಬಿಡುಗಡೆಯಾಗುತ್ತಿದೆ.

#emraanhashmi #emraanhashmimovies #whycheatindia #twitter #balkaninews

Tags