ಸುದ್ದಿಗಳು

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಕಲಾವಿದರಿಗೆ ಸನ್ಮಾನ

ಬೆಂಗಳೂರು, ಮಾ.14:

ವಿಭಿನ್ನ ಟೈಟಲ್ ಮೂಲಕವೇ ಬಾರೀ ಸದ್ದು ಮಾಡುತ್ತಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿದೆ. ಒಂದು ಪುಟ್ಟ ಸಂಸಾರದಲ್ಲಿ ಉಂಟಾದ ಸಮಸ್ಯೆಯಗೆ ಹೇಗೆ ಪರಿಹಾರ ಕಂಡಿತು ಎಂಬುದಕ್ಕೆ ಹಾಸ್ಯದ ಲೇಪನ ನೀಡಿ ತೆರೆ ಮೇಲೆ ತರಲಾಗಿದೆ. ಇದೊಂದು ಮಂಡ್ಯದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ. ಈ ಸಿನಿಮಾ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದ್ದು, 25ದಿನ ಕಂಡಿದೆ. ಇದೀಗ ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ಸನ್ಮಾನ ಮಾಡಲಾಗಿದೆ.

ಚಿತ್ರ ತಂಡಕ್ಕೆ ಸನ್ಮಾನ

ಕುಮಾರ್ ನಿರ್ದೇಶನದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ತಬಲಾ ನಾಣಿಯವರದ್ದು ಪ್ರಧಾನ ಪಾತ್ರ. ಇದರ ಜೊತೆಗೆ ಎಲ್ಲಾ ಪಾತ್ರಗಳು ಕೂಡ ಅಷ್ಟೇ ಮುಖ್ಯವಾಗಿದ್ದವು. ಈ ಸಿನಿಮಾ ಯಶಸ್ವಿ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಗೆಲುವು ಕನ್ನಡ ಗೆಳೆಯರ ಸಮಿತಿಯ ಕೃಷ್ಣಣ್ಣ ಎಂಬುವವರ ನೇತೃತ್ವದಲ್ಲಿ  ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ತಂಡದ ತಬಲ ನಾಣಿ, ಕಿರಿಕ್ ಪಾರ್ಟಿ ಚಂದನ್ ಆಚಾರ್, ಅಪೂರ್ವ, ಸಂಜನಾ, ಡಾ. ಡಿ.ಎಸ್.ಮಂಜುನಾಥ್, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ.

ಸೆಲಿಬ್ರಿಟಿ ಶೋ ಆಯೋಜನೆ

ಇನ್ನೂ ಇದೇ ಖುಷಿಯಲ್ಲಿ ಚಿತ್ರತಂಡ ಸೆಲೆಬ್ರಿಟಿ ಶೋ ಏರ್ಪಡಿಸಿತ್ತು. ಗುಳ್ಟು ನವೀನ್, ಪ್ರಥಮ್, ನವೀನ್ ಸಜ್ಜು, ಶಶಿಕುಮಾರ್, ಭುವನ್ ಪೊನ್ನಣ್ಣ ಸೇರಿದಂತೆ ಬಿಗ್‍ಬಾಸ್‍ನ ಅನೇಕ ಸ್ಪರ್ಧಿಗಳು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಇಟ್ಟಿನಲ್ಲಿ ವಿಭಿನ್ನ ನೈಜ ಕಥೆಯನ್ನಿಟ್ಟುಕೊಂಡು ಇದೀಗ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ.

ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

#balkaninews #sandalwood #kannadamovies #naveensajju #pratham #chemistryofkariyappakannadamovie

Tags

Related Articles