ಸುದ್ದಿಗಳು

ಚೇರ್ಮನ್ ಟೈಟಲ್ ಸಾಂಗ್ ಬಿಡುಗಡೆ

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಬರುತ್ತಿದ್ದು, ಅವರ ಚಿತ್ರಗಳು ಸಹ ಗಮನ ಸೆಳೆಯುತ್ತಿವೆ. ಅದರಂತೆ ಇದೀಗ ‘ಚೇರ್ಮನ್’ ಚಿತ್ರದೊಂದಿಗೆ ಹೊಸಬರು ಬರುತ್ತಿದ್ದಾರೆ. ಈಗ ಈ ಚಿತ್ರದ ಟೈಟಲ್ ಸಾಂಗ್ ಅನ್ನು ಕನ್ನಡ ಚಿತ್ರರಂಗದ ಅರ್ನಾಲ್ಡ್ ಎಂದೇ ಖ್ಯಾತಿಯಾಗಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರು ಬಿಡುಗಡೆ ಮಾಡಿದ್ದಾರೆ.

ಬಸವರಾಜ್ ಹಿರೇಮಠ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಅಮರೇಶ್ವರ ಮಹಾತ್ಮೆ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಬಸವರಾಜ್ ಹಿರೇಮಠ್ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಯಚೂರು, ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ”ಯಕ್ಕಾ ನಿನ್ನ ಮಗಳು ಚಿಕ್ಕವಳಾಗಲ್ವಾ” ಖ್ಯಾತಿಯ ಶಿವು ಬೆರಗಿ ಈ ಚಿತ್ರಕ್ಕೆ 4 ಹಾಡುಗಳನ್ನು ರಚಿಸಿದ್ದಾರೆ.

ಇನ್ನುಳಿದಂತೆ ಮನು, ರಾಜಾಶ್ರೀ, ಅನು, ಮುತ್ತು, ಬಾಲರಾಜ್ ವಾಡಿ, ಕುಶನ್ ಗೌಡ, ಗವಿ ಕನಕಗಿರಿ, ಶಿವಕುಮಾರ್ ಆರಾಧ್ಯ, ಆಶಾನಾಯಕ್, ಲಿಖಿತೇಶ್, ಪ್ರೇಮ, ಬಸವರಾಜ್ ತಿರ್ಲಾಪುರ್, ಮಾಸ್ಟರ್ ಮಂಜುನಾಥ್, ಮುಂತಾದವರ ತಾರಾಬಳಗವಿದೆ.

ಹಳ್ಳಿ ರಾಜಕೀಯದ ಹಿನ್ನೆಲೆಯಲ್ಲಿ ಈಗಿನ ಯುವಕರಿಗೆ ಸಂದೇಶ ಹೇಳುವಂತಹ ಚಿತ್ರ ‘ಚೇರ್ಮನ್’ ಆಗಿದೆ ಎನ್ನುತ್ತಾರೆ ನಿರ್ದೇಶಕರು.

Tags