ಸುದ್ದಿಗಳು

ನಿರ್ಮಾಪಕರಾಗಿ ಭಡ್ತಿ ಪಡೆದ ಹಾಸ್ಯ ನಟ ಚಿಕ್ಕಣ್ಣ.

ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದ ಚಿಕ್ಕಣ್ಣ ಅವರೀಗ ಸ್ಯಾಂಡಲ್ ವುಡ್ ನ ಬೇಡಿಕೆಯ ಹಾಸ್ಯ ನಟರಾಗಿದ್ದು ಇದೀಗ ‘ರ್ಯಾಂಬೊ 2’ ಚಿತ್ರದಿಂದ ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಕಲಾವಿದರು ಮತ್ತು ತಂತ್ರಜ್ಞರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಚಿಕ್ಕಣ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ, ಬಂಡವಾಳವನ್ನೂ ಹೂಡಿದ್ದಾರೆ.

ಕನ್ನಡದ ಸ್ಟಾರ್ ನಟರಾದ ಯಶ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿದ್ದರು. ತಿಂಗಳಿಗೆ ಚಿಕ್ಕಣ್ಣ ಅವರ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುವ ಮಟ್ಟಿಗೆ ಬಿಜಿ ಆದರು. ಆ ಬಳಿಕ ಎಲ್ಲ ಹಾಸ್ಯ ನಟನರಂತೆ ಚಿಕ್ಕಣ್ಣ ಕೂಡ ಹೀರೋ ಆಗುತ್ತಾರೆ ಎಂಬ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ ಈಗ ಹೀರೋ ಬದಲು ಅವರು ನಿರ್ಮಾಪಕ ಆಗಿದ್ದಾರೆ.

ಶರಣ್ ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದು ಬೇರೆ ಥರದ ಪ್ರಯತ್ನ. ಅಲ್ಲದೆ, ಅವರ ಮತ್ತು ನನ್ನ ಕಾಂಬಿನೇಷನ್ನ ಸಿನಿಮಾಗಳಿಗೆ ಹೋಲಿಸಿ ನೋಡಿದರೆ, ಇದರಲ್ಲಿ ಸಾಕಷ್ಟು ಹೊಸತನ ಇದೆ. ಜರ್ನಿಯಲ್ಲಿ ಸಾಗುವ ಈ ಮೂಲಕ ಚಿತ್ರದ ಕಥೆಯು, ರಾಮೇಶ್ವರ, ರಾಜಸ್ಥಾನ, ಗೋವಾದಲ್ಲಿ ಮಾಡಲಾಗಿದ್ದು, ಇದೊಂದು ಕಾಮಿಡಿ ಸಿನಿಮಾವಾಗಿದೆ. ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಶರಣ್ ಮತ್ತು ಆಶಿಕಾ ಜೋಡಿಯಾಗಿದ್ದಾರೆ.

ಸಿನಿಮಾ ನಿರ್ಮಾಣ ಮಾಡಿದ್ದಕ್ಕೆ ವೈಯಕ್ತಿಕವಾಗಿ ಖುಷಿಯಾದ ಚಿಕ್ಕಣ್ಣ “ನಾನು ಕನಸಲ್ಲೂ ನಿರೀಕ್ಷೆ ಮಾಡದಂತಹ ಬೆಳವಣಿಗೆ ಇದು. ನಿರ್ಮಾಪಕರ ಸಾಲಿನಲ್ಲಿ ನನ್ನ ಹೆಸರು ಇದೆ. ಇದೊಂಥರ ಬೇರೆಯದೇ ರೀತಿಯ ಖುಷಿ. ನಿರ್ಮಾಪಕನಾಗಿದ್ದರಿಂದ ಹಣ ಮತ್ತು ಸಮಯದ ಮೌಲ್ಯ ತಿಳಿಯಿತು” ಎನ್ನುತ್ತಾರೆ ಚಿಕ್ಕಣ್ಣ.

‘ಯಜಮಾನ’, ‘ನಟಸಾರ್ವಭೌಮ’, ‘ಪೊಗರು’, ‘ಸೀತಾರಾಮ ಕಲ್ಯಾಣ’, ‘ಭರತ ಬಾಹುಬಲಿ’, ‘ಹೌಸ್ ಫಾರ್ ಸೇಲ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಚಿಕ್ಕಣ್ಣ ಅಭಿನಯದ ರ್ಯಾಂಬೋ-2 ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ.

 

@ಸುನಿಲ ಜವಳಿ

Tags

Related Articles

Leave a Reply

Your email address will not be published. Required fields are marked *