ಸುದ್ದಿಗಳು

ಚಿರತೆ ದತ್ತು ಪಡೆದು ಪ್ರಾಣಿ ಪ್ರೀತಿ ತೋರಿದ ನಟ ಚಿಕ್ಕಣ್ಣ

ಬೆಂಗಳೂರು.ಮಾ.17: ತೆರೆ ಮೇಲೆ ಹಾಸ್ಯದ ಮೂಲಕ ಗಮನ ಸೆಳೆಯುವ ಹಾಸ್ಯ ನಟ ಚಿಕ್ಕಣ್ಣ, ಭಾನುವಾರ ಮೈಸೂರಿನ ಮೃಗಾಲಯದಲ್ಲಿ ಚಿರತೆಯೊಂದನ್ನು ದತ್ತು ಪಡೆದು ಪ್ರಾಣಿ ಪ್ರೀತಿ ತೋರಿಸಿದ್ದಾರೆ. ಒಂದು ವರ್ಷದ ಅವಧಿಗೆ ಚಿರತೆ ದತ್ತು ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಚಿಕ್ಕಣ್ಣ ಅವರ ಜೊತೆಗೆ ಅವರ ಗೆಳೆಯರೂ ಕೂಡ ಇನ್ನಿತರ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ದತ್ತು ಸ್ವೀಕಾರ ಯೋಜನೆಯಡಿ ಚಿರತೆ ದತ್ತು ಪಡೆದ ಚಿಕ್ಕಣ್ಣ

ಇಂದು ಮೈಸೂರು ಮೃಗಾಲಯದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ಚಿಕ್ಕಣ್ಣ 35 ಸಾವಿರ ಹಣ ನೀಡಿ ಚಿರತೆ ದತ್ತು ಪಡೆದಿದ್ದಾರೆ. ದತ್ತು ಪಡೆದ ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ. ಇದೇ ವೇಳೆ ಚಿಕ್ಕಣ್ಣ ಅವರ ಸ್ನೇಹಿತರು ಕೂಡ ಇನ್ನಿತರ ಪ್ರಾಣಿಗಳನ್ನು ದತ್ತು ಪಡೆದರು. ಈ ಹಿಂದೆ ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು.

ಮೂಕವಿಸ್ಮಿತ: ಇದು ಟೊಳ್ಳು ನಿರೀಕ್ಷೆಯಿಲ್ಲದ ಗಟ್ಟಿ ಸಿನಿಮಾ

#chikkanna, #balkaninews #chitha, #kannadasuddigalu

Tags