ಸುದ್ದಿಗಳು

ಚಿರಂಜೀವಿಯಿಂದ “ಸಮ್ಮೋಹನಂ” ಟೀಸರ್ ಬಿಡುಗಡೆ

ಕೆಲವೊಮ್ಮೆ ಕೆಲವೊಂದು ಸಿನಿಮಾಗಳು ಸ್ಟಾರ್ ಗಳಿಂದ ಟೀಸರ್, ಟ್ರೇಲರ್ ಬಿಡುಗಡೆಯಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತವೆ. ಇದೀಗ ಅಂಥಹದ್ದೇ ಸಮ್ಮೋಹನo ಸಿನಿಮಾಕ್ಕೂ ಆಗಿದೆ. ಹೌದು ಇಂದು ಮೆಘಾ ಸ್ಟಾರ್ ಸಮ್ಮೋಹನ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ.

ಭಲೇ ಮಂಚಿ ರೋಜು’ ಸಿನಿಮಾ ಖ್ಯಾತಿಯ ಸುಧೀರ್ ಬಾಬು ನಟನೆಯ  ಸಿನಿಮಾ ಸಮ್ಮೋಹನಂ. ಇದೀಗ ಈ  ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇಂದು ಬೆಳಗ್ಗೆ ಸಿನಿಮಾದ ಅಫಿಷಿಯಲ್ ಟೀಸರನ್ನು ಮೆಗಾ ಸ್ಟಾರ್ ಚಿರಂಜೀವಿ ಬಿಡುಗಡೆಗೊಳಿಸಿದರು.

ಅದಿತಿ ರಾವ್ ಹೈದರಿ ಈ ಸಿನಿಮಾದಲ್ಲಿ ಫೀಮೇಲ್ ಲೀಡ್‌ ರೋಲ್‌‌ನಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ವಿಶೇಷ ಏನಂದ್ರೆ  ಚಿರಂಜೀವಿ ಇತ್ತೀಚೆಗೆ ಬಹಳಷ್ಟು ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ನಾಗಶೌರ್ಯ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಚಿರಂಜೀವಿ ಆಗಮಿಸಿದ್ದರು. ಟೀಸರ್ ಬಿಡುಗಡೆ ಮಾಡಲು ‘ಸಮ್ಮೋಹನಂ’ ಚಿತ್ರತಂಡ ಚಿರಂಜೀವಿಯನ್ನು ಆಹ್ವಾನಿಸಿದಾಗ ಅವರು ಖುಷಿಯಿಂದಲೇ ಒಪ್ಪಿಕೊಂಡರು ಅಂತಾ ಬಲ್ಲ ಮೂಲಗಳು ತಿಳಿಸಿವೆ.

ಶಿವಲೇಖ ಪ್ರಸಾದ್ ನಿರ್ಮಿಸಿ, ಮೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶನ ಮಾಡಿದ್ದಾರೆ. ಇನ್ನು ಸ್ವಲ್ಪ ದಿನದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ. ವಿವೇಕ್ ಸಾಗರ್ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಪಿ.ಜಿ.ವಿಂದಾ ಛಾಯಾಗ್ರಾಹಣವಿದೆ. ಒಟ್ನಲ್ಲಿ ಮೆಗಾಸ್ಟಾರ್ ಕಡೆಯಿಂದ ಈ ಸಿನಿಮಾ ಟೀಸರ್ ಬಿಡುಗಡೆಯಾಗಿರೋದು ಸಿನಿಮಾದ ಮೇಲೇ ಹೆಚ್ವಿನ ನಿರೀಕ್ಷೆ ಹುಟ್ಟಿಸಿದೆ.

 

Tags

Related Articles