ಸುದ್ದಿಗಳು

‘ಜುಗಾರಿ ಕ್ರಾಸ್’ ಗೆ ಫೈನಲ್ ಆದ ಕಲಾವಿದರು

ಮುಂದಿನ ತಿಂಗಳು ಶುರುವಾಗುತ್ತಿರುವ ಸಿನಿಮಾ

ಬೆಂಗಳೂರು.ಜ.16:

‘ಜುಗಾರಿ ಕ್ರಾಸ್’– ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತದೆ. ಕಾಡು ಕಾಳದಂಧೆಗೆ ಸಿಲುಕಿ ನಲುಗುತ್ತಿರುವ ಬಗ್ಗೆ ಕನ್ನಡಿ ಹಿಡಿಯುತ್ತದೆ. ‘ಜುಗಾರಿ ಕ್ರಾಸ್’ನಲ್ಲಿ ನಡೆಯುವ ಕಾಳದಂಧೆ ಊಹೆಗೆ ನಿಲುಕದ್ದು.

ಈಗಾಗಲೇ ಈ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದಾಗಿ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿತ್ತು. ಆದರೆ ಸಿನಿಮಾ ಶುರುವಾಗಿರಲಿಲ್ಲ.

ಕೊನೆಗೂ ಶುರುವಾಗುತ್ತಿರುವ ಸಿನಿಮಾ

‘ಜುಗಾರಿ ಕ್ರಾಸ್’ ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದು, ಟಿ. ಎಸ್ ನಾಗಾಭರಣ ನಿರ್ದೇಶಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಗಿದ್ದು, ಕಲಾವಿದರು ಫೈನಲ್ ಆಗಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರದ ಮೂಹೂರ್ತ ನೆರವೇರಲಿದೆ. ಚಿತ್ರದ ಪ್ರಧಾನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ನಟಿಸಲಿದ್ದಾರೆ.

ಚಿತ್ರದ ಬಗ್ಗೆ

ಈ ಹಿಂದೆ ನಿರ್ದೇಶಕ ಕೋಡ್ಲು ರಾಮಕೃಷ್ಣ ಸೇರಿದಂತೆ ಹಲವಾರು ಜನಪ್ರಿಯ ನಿರ್ದೇಶಕರು ‘ಜುಗಾರಿ ಕ್ರಾಸ್’ ಕಾದಂಬರಿಯನ್ನು ದೃಶ್ಯ ರೂಪದಲ್ಲಿ ಕಟ್ಟಿ ಕೊಡಲು ಪ್ರಯತ್ನ ನಡೆಸಿದ್ದರು. ಆದರೆ ಆಗಿರಲಿಲ್ಲ, ಈಗ ಕೊನೆಗೂ ಆ ಕಾದಂಬರಿಯ ಹಕ್ಕುಗಳನ್ನು “ಕಡ್ಡಿಪುಡಿ’ ಚಂದ್ರು ಪಡೆದು, ನಾಗಾಭರಣ ಅವರ ನಿರ್ದೇಶನದಲ್ಲಿ ಚಿತ್ರ ಮಾಡುತ್ತಿದ್ದಾರೆ.

ಇನ್ನು ಚಿತ್ರದಲ್ಲಿ ಚಿರಂಜೀವಿ ಸರ್ಜಾ, ರಂಗಾಯಣ ರಘು, ತಾರಾ, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

#chiranjeevisarja, #balkaninews #filmnews, #kannadasuddigalu, #jugaricross, #tsnagabharana, #kodluramkakrishna

Tags