ಸುದ್ದಿಗಳು

ಧೃವಾಗೆ, ಚಿರು ಹೆಡ್ ಮಸಾಜ್

ಬೆಂಗಳೂರು, ಜ.11: ನಟ ಚಿರು ಹಾಗೂ ಧೃವ ಸರ್ಜಾ ಇಬ್ಬರು ಕೂಡ ಅನ್ಯೋನ್ಯ ಅಣ್ಣ ತಮ್ಮ ಅನ್ನೋದು ಗೊತ್ತಿರುವ ವಿಚಾರ. ಈಗಾಗಲೇ ಈ ಬ್ರದರ್ಸ್ ಬಹಳಷ್ಟು ಬಾರೀ ಇದನ್ನು ಸಾಬೀತುಪಡಿಸಿದ್ದಾರೆ. ಇದೀಗ ಈ ನಟರಿಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಅದೇನು ಅನ್ನೋದನ್ನು ಮುಂದೆ ನೋಡಿ..

ಪ್ರೀತಿಯ ಎಣ್ಣೆಯಲ್ಲಿ ಮಿಂದೆದ್ದ ಧೃವ

ಹೌದು, ಅಣ್ಣ ತಮ್ಮನ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡೋದು ಅಂದರೆ ಸುಮ್ಮನೆ ಅಲ್ಲ. ಯಾಕಂದ್ರೆ ಆ ಮಸಾಜ್ ಮಾಡುವ ಪ್ರೀತಿಯೇ ಬೇರೆ ಇರುತ್ತದೆ. ಇದೀಗ ಚಿರು ಸರ್ಜಾ, ಧೃವಾ ಸರ್ಜಾಗೆ ಪ್ರೀತಿ ಎಂಬ ಎಣ್ಣೆ ಹಚ್ಚಿ, ವಾತ್ಸಲ್ಯ ಎಂಬ ಮಸಾಜ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಅಭಿಮಾನಿಗಳು ಈ ವಿಡಿಯೋಗೆ ಫಿದಾ ಆಗಿದ್ದಾರೆ.

ಉದ್ದ ಕೂದಲಿಗೆ ಮಸಾಜ್

ಈ ಇಬ್ಬರು ನಟರು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದವರೇ, ಅಷ್ಟೆ ಅಲ್ಲ ಅಣ್ಣನಂತೆ ತಮ್ಮ ಎಂಬ ಬಿರುದು ಕೂಡ ಇದೆ. ಸದಾ ಜೊತೆಯಾಗಿರುವ ಈ ಹಕ್ಕಿಗಳು, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಉದ್ದ ಗಡ್ಡ, ಉದ್ದ ಕೂದಲು ಬಿಟ್ಟ ಧೃವಾಗೆ ಅಣ್ಣನ ಪ್ರೀತಿಯ ಮಸಾಜ್ ಹಿತ ಎನಿಸಿದೆ. ಸದ್ಯ ಚಿರು ‘ಸಿಂಗ’ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಧೃವ ಕೂಡ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

#sandalwood #kannadamovies #dhruvasarja #chirusarja #balkaninews

Tags