ಸುದ್ದಿಗಳು

ತನ್ನ ಪತಿಯ ಸಿನಿಮಾಗೆ ಕ್ಲಾಫ್ ಮಾಡಿದ ಸಂತಸದಲ್ಲಿ ಮೇಘನಾ ರಾಜ್

ಖಾಕಿ ಮುಹೂರ್ತ

ಬೆಂಗಳೂರು, ಫೆ.12:

ನಟ ಚಿರಂಜೀವಿ ಸರ್ಜಾ ಸದ್ಯ ‘ಸಿಂಗ’, ಜುಗಾರಿ ಕ್ರಾಸ್, ಸೇರಿದಂತೆ ನಾಲ್ಕೈದು ಸಿನಿಮಾದಲ್ಲಿ ಬ್ಯುಸಿಯಾಗಿರುವುದು ಗೊತ್ತಿರುವ ವಿಚಾರವೇ ಈ ನಟ ಇದೀಗ ‘ಖಾಕಿ’ ಸಿನಿಮಾ ಮೂಲಕ  ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಹೂರ್ತ ನಿನ್ನೆಯಷ್ಟೇ ನೆರವೇರಿದ್ದು ಈ ವಿಚಾರವಾಗಿ ನಟ ಚಿರು ಮತ್ತು ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ಚಿರು

ಈ ಸಿನಿಮಾಗೆ ಚಿತ್ರಕ್ಕೆ ಕಥೆ ಬರೆದಿದ್ದಾರೆ ವಿದ್ಯಾಧರ್. ಇನ್ನು ಈ ಸಿನಿಮಾ ತರುಣ್ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಚಿರು ಸರ್ಜಾ ಮತ್ತು ನವನಿರ್ದೇಶಕ ನವೀನ್ ರೆಡ್ಡಿ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಹಿಂದೆದೂ ಕಾಣದ ಪಾತ್ರದಲ್ಲಿ ಅಂದರೆ, ಕೇಬಲ್ ಆಪರೇಟರ್ ಆಗಿ ಪಾತ್ರ ಮಾಡಲಿದ್ದಾರಂತೆ ನಟ ಚಿರಂಜೀವಿ ಸರ್ಜಾ. ಸದ್ಯ ಈ ಮುಹೂರ್ತ ಕಾರ್ಯ ಅದ್ಧೂರಿಯಾಗಿ ನಡೆದಿದೆ.

ಚಿರು – ಮೇಘನಾ ರಾಜ್

ಇನ್ನು ಈ ವಿಚಾರವಾಗಿ ನಟ ಚಿರು, ನನ್ನ ‘ಖಾಕಿ’ ಸಿನಿಮಾ ಮುಹೂರ್ತ ನಡೆದಿದ್ದು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ಅಂತಾ ಹೇಳಿದ್ದಾರೆ. ಹಾಗೂ ಮೇಘನಾ ರಾಜ್ ಕೂಡ ಸಂಭ್ರಮದಲ್ಲಿದ್ದು, ಇದೇ ಮೊದಲ ಬಾರಿಗೆ ಒಂದು ಸಿನಿಮಾಗೆ ಕ್ಲಾಫ್ ಮಾಡಿರುವುದು ಹಾಗೂ ನನ್ನ ಪತಿಯ ಸಿನಿಮಾ ಕ್ಲಾಫ್ ಮಾಡಿದ್ದು ಸಂತಸ ಹಾಗೂ ಹೆಮ್ಮೆಯ ವಿಚಾರ ಎನ್ನುತ್ತಾ ಸಾಮಾಜಿಕ ಜಾಲತಾಣಗಳಲ್ಲಿ  ಈ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.  ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಚಿರು ಅಭಿನಯದ ಯಾವ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ ಕಾದು ನೋಡಬೇಕು.

ತವರು ಮನೆಯಿಂದ ಕ್ರಿಸ್ಮಸ್ ಗೆ ಭರ್ಜರಿ ಗಿಫ್ಟ್ ಪಡೆದುಕೊಂಡ ಮೇಘನಾ ರಾಜ್!!!!

#chirusarja #chiruasarjajugaricross #chirusarjakhakimovie #chirusarjatwitter #meghanarajtwitter #balkaninews #muhurtha

Tags