ಸುದ್ದಿಗಳು

ದರ್ಶನ್ ರವರಿಂದ ಬಿಡುಗಡೆಯಾಯ್ತು ಚಿರು ಅಭಿನಯದ ‘ಸಿಂಗ’ ಟೀಸರ್ ಲಾಂಚ್

ಬೆಂಗಳೂರು, ಮಾ.16:

ಯುವ ಸಮ್ರಾಟ್ ಚಿರಂಜೀವಿ ಸರ್ಜಾ ಇದೀಗ ‘ಸಿಂಗ’ ನಾಗಿ ತೆರೆಮೇಲೆ ಅಬ್ಬರಿಸಲಿದ್ದಾರೆ. ಈಗಾಗಲೇ ಸಕ್ಕತ್ ಸೌಂಡ್ ಮಾಡ್ತಾ ಇರುವ ‘ಸಿಂಗ’ ಸಿನಿಮಾ ಟೀಸರ್ ನಿನ್ನೆಯಷ್ಟೇ ಲಾಂಚ್ ಆಗಿದ್ದು, ಪೋಸ್ಟರ್ ಗಳಿಂದಲೇ ಭಾರೀ ಸುದ್ದಿ ಮಾಡಿದ್ದ ಈ ಸಿನಿಮಾ ಇದೀಗ ಟೀಸರ್ ಮೂಲಕ ಮತ್ತಷ್ಟು ಘರ್ಜನೆ ಮಾಡಲಿದೆ.

ಪಂಚಿಂಗ್ ಡೈಲಾಗ್ ಮೂಲಕ ಎಂಟ್ರಿ

ಹೌದು, ಚಾಲೆಂಜಿಂಗ್ ಸ್ಟಾರ್  ದರ್ಶನ್ ‘ಸಿಂಗ’ ಚಿತ್ರದ ಟೀಸರ್ ಲಾಂಚ್ ಮಾಡಿ ಸಿನಿಮಾ ತಂಡಕ್ಕೆ ವಿಶ್ ಮಾಡಿದರು. ಇನ್ನೂ ಖಡಕ್ ಡೈಲಾಗ್ ಮೂಲಕ ಎಂಟ್ರಿ ಕೊಡುವ ನಟ ಚಿರು ಸರ್ಜಾ, ಎದುರಾಳಿಗಳನ್ನು ಹೊಡೆದುರುಳಿಸುವ ಪರಿ ಅದ್ಬುತವಾಗಿದೆ. ಇನ್ನೂ ರವಿಶಂಕರ್, ಕೆ.ಆರ್.ಪೇಟೆ ಶಿವು ನಟನೆ ಕೂಡ ಚೆನ್ನಾಗಿ ಮೂಡಿ ಬಂದಿದ್ದು, ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ.

ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ

‘ಯುಕೆಎಂ ಸ್ಟುಡಿಯೋಸ್‌’ ಬ್ಯಾನರ್‌ ನಲ್ಲಿ ಉದಯ್‌ ಕೆ. ಮೆಹ್ತಾ ನಿರ್ಮಿಸುತ್ತಿರುವ ‘ಸಿಂಗ’ ಚಿತ್ರವನ್ನು ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಿಸಲಾಗಿದೆ. ವಿಜಯ್‌ ಕಿರಣ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಕಿರಣ್‌ ಹಂಪಾಪುರ ಛಾಯಾಗ್ರಹಣ, ಗಣೇಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಧರ್ಮವಿಶ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಗೂ ಚೇತನ್‌ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ.

ಗಜರಾಜನನ್ನು ಭೇಟಿ ಮಾಡಿದ ಗಜೇಂದ್ರ

#darshan #darshanmovies #chirusarjasingamovie #singakannadamovie #balkaninews

Tags