ಸುದ್ದಿಗಳು

ದಶಕದ ಸಂಭ್ರಮದ `ಚಿತ್ತಾರ ಸ್ಟಾರ್ ಅವಾರ್ಡ್ಸ್ 2019’

ಕನ್ನಡದ ಹೆಸರಾಂತ ಸಿನಿ ಮ್ಯಾಗಜಿನ್ ಚಿತ್ತಾರ ಇದೀಗ ದಶಕದ ಸಂಭ್ರಮದಲ್ಲಿದೆ. ಸಿನಿಮಾ ಎಂಬ ಅದ್ಭುತ ಲೋಕಕ್ಕೆ ಕಲರ್‍ಫುಲ್ ವೇದಿಕೆ ಕಲ್ಪಿಸುವ ಆಶಯದೊಂದಿಗೆ 2009ರಲ್ಲಿ ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ಸಂಚಿಕೆಯೂ ಸ್ಯಾಂಡಲ್‍ವುಡ್‍ನಲ್ಲಿ ಸಂಚಲನ ಉಂಟುಮಾಡಿದೆ. ಹೊಸತವನ್ನು ಪ್ರತಿ ಸಂಚಿಕೆಯಲ್ಲೂ ನೀಡಬೇಕೆನ್ನುವ ಹಠದಿಂದ ಅರಳುವ ಚಿತ್ತಾರ ದಶಕದ ಮೈಲಿಗಲ್ಲು ದಾಟಿದೆ.

ಕಳೆದ ಭಾನುವಾರ ಬೆಂಗಳೂರಿನ ಲಲಿತ್‍   ಅಶೋಕ್‍ ದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮ ಚಿತ್ರರಂಗದಲ್ಲಿ ಹೊಸತನಕ್ಕೆ ಸಾಕ್ಷಿಯಾಯಿತು. ಇದೇ ವೇದಿಕೆಯಲ್ಲಿ ಸಿನಿಮಾರಂಗದ ಅಭಿವೃದ್ಧಿಗೆ ಶ್ರಮಿಸಿದ, ಶ್ರಮಿಸುತ್ತಿರುವ ಸಾಧಕ ವ್ಯಕ್ತಿತ್ವಗಳನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಿತು. ಅದರ ಸಂಪೂರ್ಣ ವಿವರ ಇಲ್ಲಿದೆ.

ಜೀವಮಾನದ ಸಾಧನೆಗಾಗಿ ಹಿರಿಯ ನಟ ದೇವರಾಜ್, 100 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್, ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಬಹದ್ದೂರ್ ಚೇತನ್, ಆಶಿಕಾ ರಂಗನಾಥ್, ಮಯೂರಿ ಕ್ಯಾತರಿ, ಅಪೂರ್ವ, ರಾಧಿಕಾ ನಾರಾಯಣ್ ವಿಜಯ್ ಸೂರ್ಯ ಅವರುಗಳಿಗೆ, ರೀಡರ್ಸ್ ಚಾಯ್ಸ್ ವಿಭಾಗದಲ್ಲಿ ನಟರಾದ ನೆನಪಿರಲಿ ಪ್ರೇಮ್, ಅಜಯ್ ರಾವ್, ರಿಶಬ್ ಶೆಟ್ಟಿ, ರವಿ ಚೇತನ್ ನಿರ್ದೇಶಕ ತರುಣ್ ಸುಧೀರ್, ನಟಿಯರಾದ ಸೋನುಗೌಡ, ಮೇಘನಾ ಗಾವ್ಕರ್, ಹರ್ಷಿಕಾ ಪೂಣಚ್ಚರಿಗೆ, ಸ್ಟಾರ್ ಆಫ್ ದಿ ಡಿಕೇಡ್ ಗೌರವವನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯರಿಗೆ ನೀಡಲಾಯಿತು.

ಚಿತ್ತಾರ ಸ್ಟಾರ್ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಶ್ರೀ ಮುರಳಿಯವರಿಗೆ, ಬೆಸ್ಟ್ ಆಕ್ಟ್ರೆಸ್ ಆಗಿ ಪ್ರಣೀತಾ ಸುಭಾಷ್, ಅತ್ಯುತ್ತಮ ನಿರ್ದೇಶಕರಾಗಿ ಮೊಗ್ಗಿನ ಮನಸ್ಸು ಶಶಾಂಕ್, ಬೆಸ್ಟ್ ಪ್ರೊಡ್ಯೂಸರ್  ಕೆ.ಪಿ. ಶ್ರೀಕಾಂತ್, ಅತ್ಯುತ್ತಮ ಸಂಗೀತ ನಿರ್ದೇಶಕರ ವಿಭಾಗದಲ್ಲಿ ಅಜನೀಶ್ ಲೋಕನಾಥ್, ಸಂಕಲನಕಾರರಾಗಿ ಶ್ರೀಕಾಂತ್ ಗೌಡ, ಛಾಯಾಗ್ರಾಹಕರಾಗಿ ನವೀನ್ ಕುಮಾರ್, ಚಿತ್ರಸಾಹಿತಿ ಕವಿರಾಜ್, ಖಳನಟ ವಸಿಷ್ಠ ಸಿಂಹ, ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆಯವರನ್ನು ಚಿತ್ತಾರದ ವತಿಯಿಂದ ಗೌರವಿಸಲಾಯಿತು. ಹಿನ್ನೆಲೆ ಗಾಯಕರಾದ ಅನನ್ಯ ಭಟ್ ಹಾಗೂ ಸಂಚಿತ್ ಹೆಗ್ಡೆಯವರನ್ನು ಚಿತ್ತಾರ ಸ್ಟಾರ್ ಬೆಸ್ಟ್ ಸಿಂಗರ್‍ಗಳೆಂದು ಗುರುತಿಸಲಾಯಿತು. ಅಗ್ನಿಸಾಕ್ಷಿಯ ವೈಷ್ಣವಿ, ನಟಿ ರೂಪಿಕಾ, ಪಾರು ಸೀರಿಯಲ್‍ನ ಮೋಕ್ಷಿತಾ ಪೈ ಸೇರಿದಂತೆ ಚಿತ್ತಾರ ಸೆಲೆಬ್ರಿಟಿ ಕ್ಯಾಲೆಂಡರ್‍ನಲ್ಲಿ ತಮ್ಮ ಅಮೋಘ ಸೌಂದರ್ಯ ಪ್ರದರ್ಶಿಸಿರುವ 12 ನಟಿಯರನ್ನು ಪ್ರಾಮಿಸಿಂಗ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ಲಲಿತ್‍ಅಶೋಕ್‍ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ವಿಧಾನಪರಿಷತ್ ಸದಸ್ಯ ಶರವಣ, ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್, ಉದ್ಯಮಿಗಳಾದ ಶ್ರೀ ದತ್ರಿ ಸಂಸ್ಥೆಯ ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್, ಸ್ಯಾನ್ ಗ್ರೂಪ್‍ನ ವಿಶ್ವ ಕಾರ್ಯಪ್ಪ, ಡಿಎಸ್ ಮ್ಯಾಕ್ಯ್ಸ್‍ನ ದಯಾನಂದ್, ಕಸ್ತೂರಿ ಟೀಯ ದೀಪಕ್ ನಾಯಕ್, 1-3 ನೂಡಲ್ಸ್‍ನ ಮತಿವಣ್ಣನ್, ಬ್ಯೂ ಪೇ ಮ್ಯಾಕ್ಸ್‍ನ ದೀಪಕ್ ಗೌಡ, ಸಿನರ್ಜಿ ಗ್ರೂಪ್‍ನ ಸತೀಶ್ ದಂಪತಿ, ಅಮೃತ್ ನೋನಿ ಸಂಸ್ಥೆಯ ಮುಖ್ಯಸ್ಥರು, ಆಶಿಕಾ ಆಯಿಲ್‍ನ ವೇಣುಗೋಪಾಲ್, ಮೊದಲಾದ ಅನೇಕ ಗಣ್ಯರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ವಿಶೇಷತೆ ಎಂದರೆ ಫ್ಯಾಷನ್ ಶೋ ಹಾಗೂ ಸಿನಿಮಾ ಅವಾರ್ಡ್‍ನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಿದ್ದು ಚಿತ್ತಾರದ ಹೆಗ್ಗಳಿಕೆ. ಮುಂಬೈನ ಖ್ಯಾತ ಫ್ಯಾಷನ್ ಡಿಸೈನರ್ ಅಟ್ಲಾಂಟಾ ಕಶ್ಯಪ್ ಈ ಶೋನಲ್ಲಿ ಭಾಗವಹಿಸಿದ್ದು, ಭಾರತದ ಅತ್ಯುತ್ತಮ ಮಾಡೆಲ್‍ಗಳು ಅವರ ಉಡುಪುಗಳನ್ನು ಧರಿಸಿ ವೇದಿಕೆಯ ಮೇಲೆ ಕಲರ್‍ಫುಲ್ ಚಿತ್ತಾರವನ್ನಾಗಿಸಿದರು.

ಬೆಂಗಳೂರಿನ ಲಲಿತ್ ಅಶೋಕ್‍ದಲ್ಲಿ ನಡೆದ `ಚಿತ್ತಾರ ಸ್ಟಾರ್ ಅವಾಡ್ರ್ಸ್ 2019’ ಅದ್ಧೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸಾಧಕರ ವಿವರ ಈ ಕೆಳಗಿನಂತಿದೆ:

ಚಿತ್ತಾರ ರೈಸಿಂಗ್ ಸ್ಟಾರ್ಸ್

  1. ಬಹದ್ದೂರ್ ಚೇತನ್ 2.      ಆಶಿಕಾ ರಂಗನಾಥ್
  2. ಮಯೂರಿ ಕ್ಯಾತರಿ           4.      ಅಪೂರ್ವ
  3. ರಾಧಿಕಾ ನಾರಾಯಣ್ 6.      ವಿಜಯ್ ಸೂರ್ಯ
  4. ಜಯರಾಂ ಕಾರ್ತಿಕ್

ಚಿತ್ತಾರ ರೀಡರ್ ಚಾಯ್ಸ್ ಅವಾಡ್ರ್ಸ್

1.ಅಜಯ್ ರಾವ್
2.ಲವ್ಲಿ ಸ್ಟಾರ್ ಪ್ರೇಮ್
3.ರಿಷಬ್ ಶೆಟ್ಟಿ
4.ತರುಣ್ ಸುಧೀರ್
5.ಸೋನು ಗೌಡ
6.ಮೇಘನ ಗಾವಂಕರ್

ಸ್ಟಾರ್ ಆಫ್ ಡಿಕೇಡ್

  1. ಗೋಲ್ಡನ್ ಸ್ಟಾರ್ ಗಣೇಶ್ 2.      ಅಮೂಲ್ಯ

ಚಿತ್ತಾರ ಸ್ಟಾರ್ ಅವಾಡ್ರ್ಸ್

1. ಚಿತ್ತಾರ ಸ್ಟಾರ್ ಬೆಸ್ಟ್ ಆಕ್ಟರ್ ಶ್ರೀ ಮುರಳಿ
2. ಚಿತ್ತಾರ ಸ್ಟಾರ್ ಬೆಸ್ಟ್ ಆಕ್ಟ್ರೆಸ್ ಪ್ರಣೀತಾ ಸುಭಾಷ್
3. ಚಿತ್ತಾರ ಸ್ಟಾರ್ ಬೆಸ್ಟ್ ಡೈರೆಕ್ಟರ್ ಶಶಾಂಕ್
4. ಚಿತ್ತಾರ ಸ್ಟಾರ್ ಬೆಸ್ಟ್ ನಿರ್ದೇಶಕ ಕೆ.ಪಿ. ಶ್ರೀಕಾಂತ್
5. ಚಿತ್ತಾರ ಸ್ಟಾರ್ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್
6. ಚಿತ್ತಾರ ಸ್ಟಾರ್ ಬೆಸ್ಟ್ ಎಡಿಟರ್ ಶ್ರೀಕಾಂತ್ ಗೌಡ
7. ಚಿತ್ತಾರ ಸ್ಟಾರ್ ಬೆಸ್ಟ್ ಡಿಒಪಿ ನವೀನ್ ಕುಮಾರ್
8. ಚಿತ್ತಾರ ಸ್ಟಾರ್ ಬೆಸ್ಟ್ ಲಿರಿಕ್ಸ್ ರೈಟರ್ ಕವಿರಾಜ್
9. ಚಿತ್ತಾರ ಸ್ಟಾರ್ ಬೆಸ್ಟ್ ಕಾಮಿಡಿಯನ್ ಶಿವರಾಜ್ ಕೆಆರ್ ಪೇಟೆ
10. ಚಿತ್ತಾರ ಸ್ಟಾರ್ ಬೆಸ್ಟ್ ವಿಲನ್ ವಶಿಷ್ಠ ಸಿಂಹ
11. ಚಿತ್ತಾರ ಸ್ಟಾರ್ ಸಿಂಗರ್ ಅನನ್ಯ ಭಟ್
12. ಚಿತ್ತಾರ ಸ್ಟಾರ್ ಸಿಂಗರ್ ಸಂಚಿತ್ ಹೆಗ್ಡೆ

ಚಿತ್ತಾರ ಲೈಫ್ ಅಚೀವ್ಮೆಂಟ್ ಅವಾಡ್ರ್ಸ್

  1. ಓಂ ಸಾಯಿ ಪ್ರಕಾಶ್ 2. ದೇವರಾಜ್
  2. ಗುರು ಕಿರಣ್

ಗೋಲ್ಡನ್ ಅವಾರ್ಡ್

  1. ಕ್ರೇಜಿ ಸ್ಟಾರ್ ರವಿಚಂದ್ರನ್ 2. ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್

ಚಿತ್ತಾರ ಪ್ರಾಮಿಸಿಂಗ್ ಸ್ಟಾರ್ಸ್

1.ವೈಷ್ಣವಿ ಗೌಡ
2.ಶ್ರುತಿ ಗೊರಾಡಿಯ
3.ದಿಶಾ ಪೂವಯ್ಯ
4.ಐಶ್ವರ್ಯ ಶಿಂಧರೋಗಿ
5.ಪಾಯಲ್ ರಾಧಾಕೃಷ್ಣ
6.ರೂಪಿಕಾ
7.ಪ್ರಿಯಾಂಕಾ ಮಲ್ನಾಡ್
8.ರಾಶಿ ಮಹದೇವ್
9.ಶಾಲಿನಿ ಗೌಡ
10.ಸೋನಿಕಾ ಗೌಡ
11.ಮೋಕ್ಷಿತ ಪೈ
12.ಸನಿಹ ಯಾದವ್

 

ಕಿರುತೆರೆಯ ಗುಬ್ಬಿ, ‘ಸೀತಾವಲ್ಲಭ’ ಧಾರಾವಾಹಿಯ ಮೈಥಿಲಿ ಈ ನಮ್ಮ ಬೆಡಗಿ…!

#chittaraawards #10thanniversary #sandalwood

 

Tags