ಸುದ್ದಿಗಳು

ಹೀಗೊಬ್ಬಳು ನಾಟ್ಯ ‘ಮಯೂರಿ’

ನಮ್ಮ ದೇಶದ ರಾಷ್ಟ್ರ ಪಕ್ಷಿ ನವಿಲಿನ ನೃತ್ಯಕ್ಕೆ ಮನ ಸೋಲದವರಿಲ್ಲ! ಅದರಲ್ಲೂ ಗರಿಗೆದರಿ ಕುಣಿಯುವ ನವಿಲಿಗೆ ನವಿಲೇ ಸಾಟಿ!  ಇಂತಿಪ್ಪ ನವಿಲಿನಂತೆ ನಾಟ್ಯ ಮಾಡುವ ಇವರ ಹೆಸರು ಮಯೂರಿ! ಸಾಮ್ಯತೆ ಎಂದರೆ ಇದೇ ಇರಬೇಕೇನೋ!

ನೃತ್ಯದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ. ಮಾತ್ರವಲ್ಲ ಇವರ ನೃತ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಹಾನಗರಿ ಬೆಂಗಳೂರು ಮೂಲದವರಾದ ಮಯೂರಿ ಹುಟ್ಟಿದ್ದು ಡಿಸೆಂಬರ್ 30,1979.

Image may contain: 1 person, closeup

ಎಂಇಎಸ್ ಕಾಲೇಜ್‌ ಆಫ್ ಆರ್ಟ್ಸ್‌ ಆ್ಯಂಡ್ ಕಾಮರ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿರುವ ಮಯೂರಿ ಸಕಲಾ ಕಲಾ ವಲ್ಲಭೆ ಎಂದರೆ ತಪ್ಪಾಗಲಾರದು.  ನೃತ್ಯದ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಮಯೂರಿ  ಇಂಡಿಯನ್ ಕೋರಿಯೋಗ್ರಾಫರ್, ಟಿವಿ ಜಡ್ಜ್ ಆಗಿ ಗುರುತಿಸಿಕೊಂಡವರು. ಇದರ ಜೊತೆಗೆ ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Image may contain: 1 person, sitting

ಭರತನಾಟ್ಯ, ಓಡಿಸ್ಸಿ, ಕಥಕ್ ಜೊತೆಗೆ ಕಲರಿಪಟ್ಟು ಹೀಗೆ ನೃತ್ಯಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿರುವ ಮಯೂರಿ ಬೆಂಗಳೂರಿನಲ್ಲಿ ‘ನೃತಾನೃತ್ಯ’ ಡ್ಯಾನ್ಸ್ ಶಾಲೆ ನಡೆಸುತ್ತಿದ್ದಾರೆ. ಸಂತಸದ ಸಂಗತಿಯೆಂದರೆ 2018 ರಲ್ಲಿ Mughal-E-Azam ಡ್ಯಾನ್ಸ್ ಕಾರ್ಯಕ್ರಮದಲ್ಲಿ ಉತ್ತಮ ಕೋರಿಯೋಗ್ರಾಫಿ ಅವಾರ್ಡ್‌ ಪಡೆದಿದ್ದಾರೆ.

ಕನ್ನಡದ ಹೆಸರಾಂತ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2 ಮತ್ತು 3 ರ ತೀರ್ಪುಗಾರರಾಗಿಯೂ ಮಿಂಚಿದ್ದ ನಾಟ್ಯ ಮಯೂರಿ ಪಂಚರಂಗಿ, ತಮಾಷೆ ಹಾಗೂ ಇಜೋಡು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

Image may contain: 4 people, people smiling, people standing

ಇಂತಿಪ್ಪ ಮುದ್ದು ಮುಖದ ಚೆಲುವೆ ಮಯೂರಿ ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆ ಅಪಾರ. ಅವರ ಈ ಕೊಡುಗೆಗಾಗಿ  ‘ಮಾನವ ರತ್ನ’ ಅವಾರ್ಡ್‌ ಪಡೆದಿರುತ್ತಾರೆ.  ಸಕಲಾ ಕಲಾ ವಲ್ಲಭೆ ಆಗಿರುವ ಮಯೂರಿ ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಮಿಂಚಲಿ ಎಂಬುದೇ ನಮ್ಮ ಬಾಲ್ಕನಿ ನ್ಯೂಸ್ ಹಾರೈಕೆ.

– ಅನಿತಾ ಬನಾರಿ

Image may contain: 1 person, closeup

Image may contain: 2 people

ರಶ್ಮಿಕಾ ನಟಿಯಾಗುತ್ತೇನೆ ಎಂದಾಗ ಮನೆಯವರ ಪ್ರತಿಕ್ರಿಯೆ ಹೀಗಿತ್ತು…!

 

#balkaninews #sandalwood #mayuriupadhya #mayuriupadhyafamily #mayuriupadhyamovies #mayuriupadhyafacebook #mayuriupadhyainstagram #mayuriupadhyasister #mayuriupadhyahusband #mayuriupadhyarealityshow #mayuriupadhyabiography

Tags