ಸುದ್ದಿಗಳು

ಈ ಫೋಟೋದಲ್ಲಿರುವ ಪುಟಾಣಿಗಳು ಇಂದು ತಾರೆಯರು!!

ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕ..

ಬೆಂಗಳೂರು,ನ.14: ಬಾಲ್ಯದ ನೆನಪುಗಳನ್ನು  ಮೆಲುಕು ಹಾಕಲು ಬಂದಿದೆ ಮಕ್ಕಳ ದಿನಾಚರಣೆ .. ಹೌದು ಇಂದು ಮಕ್ಕಳಿಗೆ ಹಬ್ಬ.. ದೊಡ್ಡವರಿಗೆ ಮಾತ್ರ ಇದು ನೆನಪು ಮಾತ್ರ.. ನೆನಪು ಬೇಡ ಬೇಡವೆಂದರೂ ಮನಸಿಗೆ ದಾಳಿ ಇಡುತ್ತಿವೆ…ಕಾರಣ ಇನ್ನು ನಾವೆಂದೂ ಆ ದಿನಗಳನ್ನು ಅನುಭವಿಸಲು ಸಾಧ್ಯವೇ ಇಲ್ಲ… ಕಾಲ ಉರುಳಿ ಹೊಗಿದೆ… ದಶಕಗಳು ಸಂದಿವೆ… ಆದರೂ ಅಚ್ಚಳಿಯದೆ ಮನಸಿನಲ್ಲಿ ಉಳಿದಿದೆ.. ಆದರೆ ಇಂದಿಗೆ ಅವೆಲ್ಲವೂ ಕೇವಲ ನೆನಪು… ಮನದಲ್ಲುಳಿಯುವ ಅಚ್ಚಳಿಯದ ನೆನಪು…

ಬಾಲ್ಯದ ಫೋಟೋ

ಈ ಫೋಟೋದಲ್ಲಿರುವ ಮೂವರು ಇಂದು ನಟರು.. ಕನ್ನಡದಲ್ಲಿ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ.. ಕನ್ನಡದ ಯುವನಟ, ಚಿರು ಸರ್ಜಾ, ಧೃವ ಸರ್ಜಾ, ಹಾಗೂ ಐಶ್ವರ್ಯ ಸರ್ಜಾ ಇವರೆಲ್ಲರೂ ಒಂದೇ ಫೋಟೋದಲ್ಲಿ ಮಕ್ಕಳ ಗುಂಪೊಂದು ಒಟ್ಟಿಗೆ ನಗುತ್ತಿರುವ ಬಾಲ್ಯದ ಫೊಟೋವನ್ನು ಚಿರು ಸರ್ಜಾ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ…

ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರು 2009 ರಲ್ಲಿ ತೆರೆಕಂಡ “ವಾಯುಪುತ್ರ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಇಷ್ಟೇ ಅಲ್ಲದೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಇತ್ತೀಚಗೆ ಬಿಡುಗಡೆಯಾದ ‘ಅಮ್ಮ ಐ ಲವ್ ಯು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ..

 

 

Tags