ಸುದ್ದಿಗಳು

ಬೆಳಿಗ್ಗೆಯಿಂದಲೇ ಮತ ಚಲಾಯಿಸುತ್ತಿರುವ ಸಿನಿಮಾ ಕಲಾವಿದರು: ಓಟ್ ಬಗ್ಗೆ ಯಶ್, ಶ್ರೀ ಮುರುಳಿ ಮತ್ತು ರಾಗಿಣಿಯ ಮಾತುಗಳು

ಬೆಂಗಳೂರು.ಏ.18: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಸಾಗುತ್ತಿದೆ. ಸಾಮಾನ್ಯ ಜನರಂತೆ ಸಿನಿಮಾ ಸ್ಟಾರ್ ಗಳು ಕೂಡ ಬೆಳ್ಳಂಬೆಳಗ್ಗೆಯೇ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಈಗಾಗಲೇ ದರ್ಶನ್, ಗಣೇಶ್, ಶಿವಣ್ಣ, ರಾಘಣ‍್ಣ, ಅವಿನಾಶ್, ಪ್ರೇಮ್ ಕುಮಾರ್, ಜಗ್ಗೇಶ್, ಸುದೀಪ್, ಜಯಮಾಲಾ, ಮಂಡ್ಯ ರಮೇಶ್, ಪ್ರಕಾಶ್ ರೈ, ಧ್ರುವ ಸರ್ಜಾ, ದರ್ಶನ್, ಯಶ್ ಸೇರಿದಂತೆ ಅನೇಕರು ಮತ ಚಲಾಯಿಸಿದ್ದಾರೆ

ಇನ್ನು ನಟ ಯಶ್ ಹೊಸಕೆರೆ ಹಳ್ಳಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ‘ಮತದಾನ ಬಹಳ ಮುಖ್ಯ.. ಯಾರನ್ನೇ ಪ್ರಶ್ನೆ ಮಾಡುವುದಕ್ಕೂ ಮುನ್ನ ನಮ್ಮ ಹಕ್ಕು ಚಲಾಯಿಸಬೇಕು. ಯಾರಿಗೆ ಓಟ್ ಮಾಡೋದು ಯಾಕೆ ಓಟ್ ಮಾಡೋದು ಅಂತ ಸುಮ್ಮನಾಗ್ತಾರೆ. ಮೊದಲು ಒಟ್ ಮಾಡಬೇಕು ಆಮೇಲೆ ಕೆಲಸ ಮಾಡುವಂತೆ ಹೇಳಬೇಕು.ಮತದಾನದ ಜಾಗೃತಿ ಚನ್ನಾಗಿದೆ. ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಧ್ಯಾನ್ಹ ಜನ ಕಮ್ಮಿ ಇರ್ತಾರೆ ಆಗ ಬಂದು ಒಟ್ ಮಾಡಿ.’ ಎಂದಿದ್ದಾರೆ.


ಇನ್ನು ರಾಗಿಣಿ ಮತದಾನ ಮಾಡಿದ ‘ತಪ್ಪದೇ ಮತದಾನ ಮಾಡಿ’ ಎಂದಿದ್ದಾರೆ. ಉಳಿದಂತೆ ನಟರಾದ ರವಿಶಂಕರ್, ಅನಿರುದ್ದ ಸೇರಿದಂತೆ ಪರಭಾಷೆಯ ಕಲಾವಿದರು ಸಹ ಮತದಾನ ಮಾಡಿದ್ದಾರೆ.

ಇನ್ನು ಮತ ಚಲಾಯಿಸಿದ ಶ್ರೀ ಮುರುಳಿ ಹಾಗೂ ಪತ್ನಿ ವಿದ್ಯಾ, ತಂದೆ ಚಿನ್ನೇಗೌಡ ಹಾಗೂ ತಾಯಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ, ನಂತರ ‘ನಾನು ಶೂಟಿಂಗ್ ಬಿಟ್ಟು ವೋಟ್ ಮಾಡಿದ್ದೇನೆ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ೧ ಕೋಟಿಗೆ ಒಂದು ರೂಪಾಯಿ ಕಡಿಮೆಯಾದ್ರೂ ಕೋಟಿ ಆಗೋಲ್ಲ. ಹಾಗೆಯೇ ಪ್ರತಿ ಮತ ಅಮೂಲ್ಯ . ಅದೇನೆ ಕೆಲಸ ಇದ್ರೂ ನೆಪ ಹೇಳದೆ ವೋಟ್ ಮಾಡಿ.

ನಮ್ಮ ನಾಯಕರನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮದೇ . ನೀವು ವೋಟ್ ಮಾಡಲಿಲ್ಲ ಅಂದ್ರೆ ನಿಮ್ಮ ಮಕ್ಮಳು ವೋಟ್ ಮಾಡಿ ಅಂತಾ ಹೇಳೊಕೆ ಆಗಲಲ್ಲ. ಯಾಕಂದ್ರೆ ಇದು ದೇಶದ ಅಭಿವೃದ್ಧಿ ವಿಚಾರ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿ’ ಎಂದಿದ್ದಾರೆ.

ಸರತಿ ಸಾಲಿನಲ್ಲಿ ನಿಂತು ಪತ್ನಿಯೊಂದಿಗೆ ಮತ ಚಲಾಯಿಸಿದ ಡಿ-ಬಾಸ್ ದರ್ಶನ್

#cinimaactors, #voting, #balkaninews #kannadasuddigalu. #lokasabhaelection2019,

Tags