ಸುದ್ದಿಗಳು

ಸ್ಯಾಂಡಲ್ ವುಡ್ ನಲ್ಲಿ ಸಿನಿತಾರೆಯರ ಕಬ್ಬಡಿ ಲೀಗ್

ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಗಮನಿಸುವ ಹಾಗೆ ಬರೀ ಅಂತರಾಷ್ಟ್ರೀಯ ಕ್ರೀಡೆಗಳಿಗೆ ಉತ್ತೇಜನ ನೀಡುವುದರ ಮೂಲಕ ನಮ್ಮ ಮೈದಾನಗಳು, ಮನಸ್ಸುಗಳು ಎಲ್ಲವೂ ಪಾಶ್ಚಿಮಾತ್ಯ ಆಗಿ ಹೋಗಿವೆ ಎಂದರೆ ತಪ್ಪಾಗಲಾರದು.

ಇದಕ್ಕೆ ಉದಾಹರಣೆಯಂತೆ, ನಮ್ಮ ಆಹಾರ ಪದ್ದತಿ ಉಡುಗೆ ತೊಡುಗೆ ಮಾತಿನ ಶೈಲಿ ಹಲವಾರು ರೀತಿಯಲ್ಲಿ ನಾವೆಲ್ಲಾ ಪಾಶ್ಚಿಮಾತ್ಯದ ಕಡೆಗೆ ವಾಲುತ್ತಿರುವುದು ನಮ್ಮ ದೇಶದ ಸಂಸ್ಕೃತಿಗೆ ದಕ್ಕೆ ಉಂಟು ಮಾಡಿರುವುದು ವಿಪರ್ಯಾಸವೇ ಸರಿ.

ಕಬಡ್ಡಿ ನಮ್ಮ ದೇಶೀ ಆಟ. ‘ಕರ ಬಧಿ’ (ಕರ ಬಂಧನ) ಎಂದರೆ ಕೈಗಳನ್ನು ಹಿಡಕೊಳ್ಳುವುದು, ಬಂಧಿಸುವುದು ಎಂಬರ್ಥದ ಸಂಸ್ಕೃತ ಶಬ್ದ ಮೂಲದಿಂದ ಕಬಡ್ಡಿ ಶಬ್ದ ಉತ್ಪತ್ತಿಯಾಗಿದೆ ಎಂಬುದು ಕೆಲವು ವಿದ್ವಾಂಸರ ಮತ. ಇದೇ ಅರ್ಥವುಳ್ಳ ‘ಕೈಪಿಡಿ’ ಎಂಬ ತಮಿಳು ಮೂಲದಿಂದ ಈ ಶಬ್ದ
ಎಂಬ ಅಭಿಪ್ರಾಯವುಳ್ಳ ವಿದ್ವಾಂಸರೂ ಇದ್ದಾರೆ

ಪ್ರಾಚೀನ ಭಾರತದಲ್ಲಿ ವಿಭಿನ್ನ ಪ್ರಕಾರದ ಕಬಡ್ಡಿ ಆಟ ಬಳಕೆಯಲ್ಲಿತ್ತು. ನಮ್ಮಲ್ಲಿ ಪರಕೀಯ ಪ್ರಭಾವವು ಅರೆಬರೆಯಾಗಿ ಆಪೋಶನ ತೆಗೆದುಕೊಂಡ ಹಲವು ಸಂಗತಿಗಳಲ್ಲಿ ಕಬಡ್ಡಿಯೂ ಒಂದು.
ಅರೆಬರೆ ಆಪೋಶನ ಎಂದದ್ದೇಕೆಂದರೆ ಯಾವುದೂ ಪೂರ್ತಿ ಬತ್ತಿಹೋಗಿಲ್ಲ. ನಿಜಕ್ಕಾದರೆ, ಪರಕೀಯ ಪ್ರಭಾವದಿಂದ ಯಾವುದೇ ಸಮಾಜವನ್ನು ಹೊರತಾಗಿಸಲು, ಅದನ್ನು ದೃಢಿಷ್ಠವಾಗಿ ಎದುರಿಸಲು ಕ್ರೀಡೆಯೊಂದರಿಂದ ಸಾಧ್ಯ ಎನ್ನುವುದಾದರೆ ಅದು ಕಬಡ್ಡಿಯೇ ಸರಿ.

ಈ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ – ನಿರ್ಮಾಪಕ ಕುಮಾರ್ ಗೌರವ್ , ಹಿರಿಯ ನಿರ್ಮಾಪಕ ಹಾಗೂ ಚಲನಚಿತ್ರಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದ್ ಮತ್ತು ರಾಕೇಶ್ ಮಲ್ಲಿ ಸೇರಿದಂತೆ ಹಲವಾರು ಗಣ್ಯರ ನಿಯೋಜಕತ್ವದಲ್ಲಿ ನಮ್ಮ ದೇಶದ ಕ್ರೀಡೆಯಾದ “ಕಬ್ಬಡಿ” ಆಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಕರ್ನಾಟಕ ಸೆಲೆಬ್ರೆಟಿ ಕಬ್ಬಡಿ ಲೀಗ್”(CKL) ಅನ್ನೋ ಶೀರ್ಷಿಕೆಯೊಂದಿಗೆ ಟೂರ್ನಮೆಂಟ್ ಆಯೋಜಿಸುತ್ತಿರುವುದು ಅತೀ ವಿಶೇಷ. ಸ್ಯಾಂಡಲ್ ವುಡ್ ನಲ್ಲಿ ಸಿಸಿಎಲ್(CCL) ಮಾಡಿದ ಹಾಗೆ ಸಿಕೆಲ್(CKL) ಕಬ್ಬಡಿ ಲೀಗ್ ಆರಂಭವಾಗಲಿದೆ

ಇದರಲ್ಲಿ ವಿಶೇಷತೆ ಎನ್ನುವಂತೆ ಈ ಬಾರಿ ಮಹಿಳೆರ ಕಬ್ಬಡಿ ಲೀಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದರಲ್ಲಿ ಚಿತ್ರ ನಟಿಯರು ಭಾಗಿಯಾಗಲಿದ್ದಾರೆ. 8 ನಾಯಕಿಯರ ತಂಡಗಳು ಇದರಲ್ಲಿ ಭಾಗವಹಿಸಲಿದೆ. ನಿಮ್ಮ ಪ್ರಾಂತ್ಯಗಳ ತಂಡಕ್ಕೆ ನಿಮ್ಮ ನೆಚ್ಚಿನ ನಟಿಯರನ್ನು ನೀವೆ ತಂಡದ ನಾಯಕಿಯಾಗಿ ಆಯ್ಕೆ ಮಾಡಿ, ಎಸ್ಎಮ್ಮೆಸ್(SMS) ಮಾಡಬಹುದು ಅತೀ ಹೆಚ್ಚು ಯಾವ ಪ್ರಾಂತ್ಯದಿಂದ ವೋಟ್ ಬರುತ್ತೋ ಆ ಪ್ರಾಂತ್ಯದಿಂದ ತಂಡದ ನಾಯಕಿಯಾಗಲಿದ್ದಾರೆ.  ಎಸ್ಎಮ್ಮೆಸ್(SMS) ಮಾಡಿದ ನೂರಾರು ಅದೃಷ್ಟವಂತ ಅಭ್ಯರ್ಥಿಗಳಿಗೆ ಸಿಕೆಲ್(CKL) ಸಮಾರಂಭಕ್ಕೆ ಅಥಿತಿಯಾಗಿ ಆಹ್ವನಿಸಲಾಗುವುದು.

SMS “CKL_REGION CODE_ACTRESS CODE”

TO 56161

REGION CODE

BAN     BANGALORE

MYS    MYSORE

HU      HUBLI/DHARWAD

MND    MANDYA

GUL    GULBARGA

DAV     DAVANAGERE

BAK     BAGALKOT

MAN    MANGALORE

ACTRESS CODE

CKL_DISTRICT CODE_MAN        (MANVITHA HARISH)

CKL_DISTRICT CODE_BHA         (BHAVANA RAO)

CKL_DISTRICT CODE_SAM        (SAMYUKTA HORNAD)

CKL_DISTRICT CODE_YAJ         (YAJNA SHETTY)

CKL_DISTRICT CODE_SHR         (SHARDDHA SRINATH)

CKL_DISTRICT CODE_SRU         (SHRUTHI HARIHARAN)

CKL_DISTRICT CODE_RAC        ( RACHITA RAM)

CKL_DISTRICT CODE_RAD        (RADHIKA PANDIT)

CKL_DISTRICT CODE_NID         (NIDHI SUBBAIAH)

CKL_DISTRICT CODE_NEE        (NEETU SHETTY)

CKL_DISTRICT CODE_RAS        (DUNIYA RASHMI)

CKL_DISTRICT CODE_HAR      (HARSHIKA POONACHA)

CKL_DISTRICT CODE_SAN      (SANJANA GALRANI)

CKL_DISTRICT CODE_SUB      (SHUBHA POONJA)

CKL_DISTRICT CODE_HAP      (HARIPRIYA)

CKL_DISTRICT CODE_KAM      (KAMANA JETHMALANI)

 

 

 

 

Tags

Related Articles

Leave a Reply

Your email address will not be published. Required fields are marked *