ಸುದ್ದಿಗಳು

ಕನ್ನಡಕ್ಕೆ ‘ಕಮಾಂಡೋ’ ಹೆಸರಿನಲ್ಲಿ ಡಬ್ ಆಗಿ ಬಂತು ತಮಿಳಿನ ‘ವಿವೇಗಂ’ ಚಿತ್ರ ..!!!

ಬಹುದಿನಗಳಿಂದಲೂ ಡಬ್ಬಿಂಗ್ ನ ಕುರಿತಾಗಿ ಕನ್ನಡ ಪರ ಸಂಘಟನೆಗಳು ಹಾಗೂ ಕೆಲವೊಂದಿಷ್ಟು ಮಂದಿ ಸಿನಿ ಮಂದಿ ವಿರೋಧಿಸುತ್ತಲೇ ಬರುತ್ತಿದ್ದಾರೆ. ಎಷ್ಟೇಲ್ಲಾ ವಾದ-ವಿವಾದ, ವಿರೋಧಗಳ ನಡುವೆ ತಮಿಳಿನ ‘ವಿವೇಗಂ’ ಕನ್ನಡದಲ್ಲಿ ‘ಕಮಾಂಡೋ’ ಆಗಿ ಬರುತ್ತಿದೆ.

ಬೆಂಗಳೂರು, ಆ.06: ಡಬ್ಬಿಂಗ್ ವಿಚಾರದಲ್ಲಿ ಸಿನಿರಂಗದ ಜೊತೆಗೆ ಕನ್ನಡ ಪರ ಸಂಘಟನೆಗಳಿಂದಲೂ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇವೆ. ಇಂದಿಗೂ ಈ ಡಬ್ಬಿಂಗ್ ಬೇಕು-ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಕೆಲ ಚಿತ್ರಗಳು ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆಗಿ ಮತ್ತೆ ಕನ್ನಡದಲ್ಲಿಯೇ ಬಿಡುಗಡೆಯಾಗುತ್ತಿವೆ. ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬಗ್ಗೆ ಸದ್ದು ಉಂಟಾಗುತ್ತಿದೆ.

‘ಕಮಾಂಡೋ’ ಆದ ‘ವಿವೇಗಂ’ 

ಡಬ್ಬಿಂಗ್ ಗೆ ಕಾನೂನಿನಲ್ಲಿ ಮಾನ್ಯತೆ ಸಿಕ್ಕ ನಂತರ ಇದೀಗ ತೆಲುಗು, ತಮಿಳು ಭಾಷೆಯ ಚಿತ್ರಗಳು ಕನ್ನಡಕ್ಕೆ ಬರಲು ಸಜ್ಜಾಗಿವೆ. ಹೀಗಿರುವಾಗಲೇ ತಮಿಳಿನ ‘ವಿವೇಗಂ’ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಕೆಲಸ ಕೊನೆಯ ಹಂತ ತಲುಪಿದೆಯಂತೆ. ಈಗಾಗಲೇ ಈ ಚಿತ್ರದ ಟೀಸರ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು,ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸಾಹಸಮಯ ಚಿತ್ರ ‘ವಿವೇಗಂ’

2017 ರಲ್ಲಿ ತೆರೆ ಕಂಡು ಯಶಸ್ವಿಯಾಗಿದ್ದ, ಶಿವ ನಿರ್ದೇಶನದ ತಮಿಳಿನ ಸಾಹಸಮಯ ‘ವಿವೇಗಂ’ ಚಿತ್ರವು ಕನ್ನಡದಲ್ಲಿ ‘ಕಮಾಂಡೋ’ ಆಗಿ ಬಿಡುಗಡೆಯಾಗಲಿದೆ. ಹರಿವು ಕ್ರಿಯೇಷನ್ಸ್ ನವರು ಕನ್ನಡಕ್ಕೆ ಡಬ್ ಮಾಡುತ್ತಿದ್ದು,ಈ ಚಿತ್ರದಲ್ಲಿ ಅಜಿತ್, ವಿವೇಕ್ ಒಬೆರಾಯ್, ಕಾಜಲ್ ಅಗರ್ ವಾಲಾ ಸೇರಿದಂತೆ ಅನೇಕರು ನಟಿಸಿದ್ದರು.

ಮತ್ತಷ್ಟು ಡಬ್ಬಿಂಗ್ ಚಿತ್ರಗಳು

ತಮಿಳು ನಟ ಕಾರ್ತಿ ಶಿವಕುಮಾರ್ ಬರೋಬ್ಬರಿ ನಾಲ್ಕು ಶೇಡ್ ನಲ್ಲಿ ಕಾಣಿಸಿಕೊಂಡಿರುವ, ‘ಕಾಷ್ಮೋರ’ ಎಂಬ ಸಿನಿಮಾದ ಪೋಸ್ಟರ್ ಇದೀಗ ಕನ್ನಡದಲ್ಲಿ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಹಾಗೂ ಸನ್ನಿಲಿಯೋನ್ ಅಭಿನಯದ “ವೀರ ಮಹಾದೇವಿ” ಚಿತ್ರವು ಸಹ ಡಬ್ಬಿಂಗ್ ಚಿತ್ರವಾಗಿದೆ.

Tags