ಸುದ್ದಿಗಳು

ಹೆಂಡತಿಯನ್ನು ಥಳಿಸಿದ ‘ಹುಲಿರಾಯ’ ಖ್ಯಾತಿಯ ನಟ ಬಾಲು ನಾಗೇಂದ್ರ…!!!

ಇತ್ತಿಚೆಗಷ್ಟೇ ಡಿ-ಬಾಸ್ ದರ್ಶನ್ ರವರು ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಇನ್ನೊಬ್ಬ ನಟ ತನ್ನ ಹೆಂಡತಿ ಮತ್ತು ಮಗುವನ್ನು ಹೊಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ವಿರುದ್ದ ವರದಕ್ಷಿಣೆ ಕುರುಕುಳ ಪ್ರಕರಣ ದಾಖಲಾಗಿದೆ.

ಹೌದು, ‘ಹುಲಿರಾಯ’, ‘ಕಪಟ ನಾಟಕ ಸೂತ್ರಧಾರಿ’, ‘ಕಡ್ಡಿಪುಡಿ’ ಚಿತ್ರಗಳಲ್ಲಿ ನಟಿಸಿರುವ ನಟ ಬಾಲು ನಾಗೇಂದ್ರ, ತನ್ನ ಪತ್ನಿಗೆ ಥಳಿಸಿದ್ದಾರೆ. ಈ ಸಂಬಂಧ ಬಾಲು ನಾಗೇಂದ್ರ ಅವರ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಳು ನಾಗೇಂದ್ರರ ಪತ್ನಿ ತನ್ನ ತವರು ಮನೆಗೆ ಪ್ರತಿ ತಿಂಗಳೂ 8000 ರೂಪಾಯಿ ಕಳಿಸುತ್ತಿದ್ದರು. ಮದುವೆಗೆ ಮೊದಲೇ ಅವರು ಇದನ್ನು ಬಾಲುನಾಗೇಂದ್ರ ಅವರಿಗೆ ತಿಳಿಸಿದ್ದರು. ಆದರೂ ಕೂಡ ತವರು ಮನೆಗೆ ಹಣ ಕೊಡುವುದನ್ನು ವಿರೋಧಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೆಯೇ ವಾಪಸ್ ಕೊಡುವುದಾಗಿ ಹೇಳಿ ಹೆಂಡತಿಯಿಂದ 1,50,000 ರೂಪಾಯಿ ತೆಗೆದುಕೊಂಡಿದ್ದ. ಅದನ್ನಿನ್ನೂ ವಾಪಸ್ ಕೊಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಇದಷ್ಟೇ ಅಲ್ಲದೇ ಬಾಲು ಅವರ ಹೆಂಡತಿ, ತಾನು ಕೆಲಸಕ್ಕೆ ಹೋಗುವುದಿಲ್ಲ, ಓದುತ್ತೇನೆ ಎಂದಿದ್ದಾರೆ. ಆದರೆ ಅದಕ್ಕೆ ಒಪ್ಪದ ನಟ, ಇಲ್ಲ ನೀನು ಕೆಲಸಕ್ಕೆ ಹೋಗಬೇಕು ಎಂದು ಬಲವಂತವಾಗಿ ಥಳಿಸಿದ್ದಾರೆ. ಅಲ್ಲದೆ ಆಕೆಯನ್ನು ಕೆಲಸದ ಸ್ಥಳದಿಂದ ಮನೆಗೆ ಬೈಕ್ ನಲ್ಲಿ ಕರೆದುಕೊಂಡು ಬರುವ ವೇಳೆ ಕೂಡ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ.

ಸದ್ಯ ಬಾಲು ನಾಗೇಂದ್ರ ಅವರ ಪತ್ನಿ ನೀಡಿದ ದೂರಿನ ಅನ್ವಯ ಬಸವನಗುಡಿ ಮಹಿಳಾ ಪೊಲೀಸರು ಸೆಕ್ಷನ್ 498 ಎ (ಪತ್ನಿಗೆ ಹಿಂಸೆ) ಪ್ರಕಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇವರನ್ನು ಪೊಲೀಸರು ಮೂರ್ನಾಲ್ಕು ಬಾರಿ ವಿಚಾರಣೆ ಮಾಡಿದ್ದಾರೆ.

ಎಣ್ಣೆ ಸ್ನಾನ ಮಾಡಿದ್ರೆ ಎಷ್ಟೆಲ್ಲಾ ಅನುಕೂಲವಿದೆ ಗೊತ್ತಾ? ಈ ಲೇಖನ ನೋಡಿ…

#complaintFiled #Huliraya #BaluNagendra #sandalwoodmovies  ‍#kannadasuddigalu

Tags