ಸುದ್ದಿಗಳು

ತೆಲುಗು ಬಿಗ್ ಬಾಸ್ 3ರಲ್ಲಿ ಭಾಗವಹಿಸುತ್ತಾರಾ ಈ ಕಾಂಟ್ರವರ್ಸಿ ಕ್ವೀನ್?

ತೆಲುಗು ಕಿರುತೆರೆಯಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಸಖತ್ ಫೇಮಸ್. ಅನುಮಾನವೇ ಇಲ್ಲ. ಇದರ ಮೂರನೇ ಸೀಸನ್ ಜುಲೈ 21ರಂದು ಭಾನುವಾರ ಆರಂಭವಾಗುತ್ತಿದೆ. ಈ ಬಾರಿ ನಟ ನಾನಿ ಬದಲು ಕಿಂಗ್ ನಾಗರ್ಜುನ ಅಕ್ಕಿನೇನಿ ಶೋ ಹೋಸ್ಟ್ ಮಾಡುತ್ತಿದ್ದಾರೆ. 15 ಜನ ಸೆಲೆಬ್ರಿಟಿಗಳು ಈ ಶೋ ನಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಕೆಲವು ಸಂಭವನೀಯ ಸ್ಪರ್ಧಿಗಳ ಲಿಸ್ಟ್ ಹೊರಬಿದ್ದಿದೆ. ಇದೀಗ ಲೇಟೆಸ್ಟ್ ಸುದ್ದಿಯ ಪ್ರಕಾರ ವಿವಾದಗಳಿಂದಲೇ ಸುದ್ದಿಯಾಗುವ ನಾಯಕಿ ಶ್ರೀರೆಡ್ಡಿ ಈ ಶೋನಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

‘ಬಿಗ್ ಬಾಸ್’ ಆಯೋಜಕರು ಶೋನಲ್ಲಿ ಭಾಗವಹಿಸಲು ಶ್ರೀರೆಡ್ಡಿಯನ್ನು ಕೇಳಿದ್ದರಂತೆ. ಆದರೆ ಆಕೆಯ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಅದೇನೇ ಇರಲಿ, ಕೆಲವು ಬಲ್ಲ ಮೂಲಗಳ ಪ್ರಕಾರ ಶ್ರೀರೆಡ್ಡಿಯನ್ನು ಶೋನಲ್ಲಿ ಭಾಗವಹಿಸುವಂತೆ ಯಾರೂ ಕೇಳಿಲ್ಲವಂತೆ. ಅಷ್ಟಕ್ಕೂ ಸ್ವತಃ ಶ್ರೀರೆಡ್ಡಿಗೆ ಈ ಶೋನಲ್ಲಿ ಭಾಗವಹಿಸಲು ಇಷ್ಟವಿಲ್ಲವಂತೆ.

Image result for sri reddy

ಇದನ್ನೆಲ್ಲಾ ಕೇಳಿಸಿಕೊಂಡ ವೀಕ್ಷಕರು ಮಾತ್ರ ಯಾರೇ ಸ್ಪರ್ಧಿಗಳಾದರೂ ಈ ಭಾನುವಾರ ಗೊತ್ತಾಗುತ್ತದೆ ಬಿಡಿ, ಯಾಕೆ ಟೆನ್ಷನ್ ಎನ್ನುತ್ತಿದ್ದಾರಂತೆ.

‘ಆಕೆಯ ಕಣ್ಣುಗಳು ಬಹಳ ಸುಂದರ…’ ತಮನ್ನಾ ಹೀಗೆ ಹೇಳಿದ್ದು ಯಾವ ನಟಿಗೆ?

#balkaninews #srireddy # biggbossteluguseason3 # nagarjunaakkineni

Tags