ವೈರಲ್ ನ್ಯೂಸ್ಸುದ್ದಿಗಳು

ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ದಂಪತಿಗಳ ವಿನೂತನ ಫೋಟೋಶೂಟ್

ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದ ದಂಪತಿಗಳು ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ವಿಶೇಷವಾಗಿ ಫೋಟೋಶೂಟ್ ಮಾಡಿಸಿಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಹೌದು, ತಮ್ಮೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ತಿಳಿಸಲು ಕಿರಣ್ ಕುಮಾರ್ ದಂಪತಿಗಳು ಹಾಗೂ ಅವರ ಮಗ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ತಮ್ಮ ನಗರದ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆಯಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ತಗ್ಗು ಗುಂಡಿಗಳಲ್ಲಿ ಬೈಕ್ ನಿಲ್ಲಿಸಿ, ಬೈಕ್ ಮೇಲೆ ತಗ್ಗುಗುಂಡಿಗಳಲ್ಲಿ ಅಪಾಯಕಾರಿ ಪ್ರಯಾಣ ಬಿಂಬಿಸುವ ಫೋಟೋ, ತಾಯಿ ಮಗನೊಂದಿಗೆ ಬೈಕಿನಲ್ಲಿ ಕಿತ್ತು ಹೋಗಿರುವ ಡಾಂಬರ್ ರಸ್ತೆ ಹೋಗುತ್ತಿರುವ ಫೋಟೋ, ಹೀಗೆ ಮೂವರುಗಳು ಸೇರಿಕೊಂಡು ಹದಗೆಟ್ಟ ರಸ್ತೆಗಳ ಬಗ್ಗೆ ವಿಡಂಭನಾತ್ಮಕ ಫೋಟೋಶೂಟ್ ಮಾಡಿಸಿದ್ದಾರೆ.

ಹತ್ತೊಂಬತ್ತರ ಹುಡುಗಾಟಕ್ಕೆ ತಲೆದೂಗಿದ ಸೆನ್ಸಾರ್ ಮಂಡಳಿ

#Couples  #PhotoShoot  #ViralNews #kannadaSuddigalu

Tags