ಸುದ್ದಿಗಳು

ಕ್ರೇಜಿಸ್ಟಾರ್ ಮಗಳ ಮದುವೆಗೆ ಫಿಕ್ಸ್ ಆಯ್ತು ದಿನಾಂಕ

ಬೆಂಗಳೂರು, ಏ.15:

ರವಿಮಾಮಮ ಮನೆಗೆ ಅಳಿಮಯ್ಯ ಬರುವ ಸಮಯ ಸನ್ನಿತದಲ್ಲಿದೆ. ಈಗಾಗಲೇ ಅದ್ದೂರಿಯಾಗಿ ರವಿಚಂದ್ರನ ಮಗಳ ನಿಶ್ಚಿತಾರ್ಥ ಬೆಂಗಳೂರಿನ ಖಾಸಗೀ ಹೋಟೆಲ್‌ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಸಿನಿಮಾ ಗಣ್ಯರು ಸಂಬಂಧಿಕರು ಕೂಡ ಭಾಗಿಯಾಗಿದ್ದರು. ಇದೀಗ ಮದುವೆ ದಿನಾಂಕ ನಿಗಧಿಗೊಳಿಸಿದ್ದಾರೆ. ವಿಶೇಷ ಅಂದರೆ ಮಗಳೀಗಾಗಿ ಹಾಡೊಂದನ್ನು ಕೂಡ ರಚಿಸಿದ್ದಾರೆ ನಟ ನಿರ್ದೇಶಕ, ನಿರ್ಮಾಪಕ ರವಿಚಂದ್ರನ್.

Related image

29 ರಂದು ಮದುವೆ ಸಮಾರಂಭ

ಹೌದು, ಫೆಬ್ರವರಿಯಲ್ಲಿ ಉದ್ಯಮಿ ಅಜಯ್ ಹಾಗೂ ರವಿಚಂದ್ರನ್ ಪುತ್ರಿ ಗೀತಾಂಜಲಿಗೂ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯ ನೆರವೇರಿತ್ತು. ಇದೀಗ ಇವರ ಮಗಳ ಮದುವೆ ದಿನಾಂಕ ನಿಗಧಿಯಾಗಿದೆ. ಈ ಜೋಡಿಯ ವಿವಾಹ ಮೇ 29 ರಂದು ಜರುಗಲಿದೆ. ಮೇ 28ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಕೂಡಾ ಇರಲಿದೆ. ಈಗಾಗಲೇ ಮದುವೆ ಸಿದ್ದತೆಯಲ್ಲಿ ತೊಡಗಿದೆ ಇಡೀ ತಂಡ. ತಮ್ಮ ಕಾರ್ಯಕ್ರಮಗಳ ಬ್ಯುಸಿಯಲ್ಲೂ ಈ ನಟ ಮದುವೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

Image result for ravichandra daughter

ಮಗಳಿಗಾಗಿ ಹಾಡು

ವಿಶೇಷ ಅಂದ್ರೆ ಈ ನಟ ಮಗಳಿಗಾಗಿ, ಮಗಳ ಮದುವೆಗಾಗಿ ಹಾಡೊಂದನ್ನು ರಚಿಸಿ, ರಾಗ ಸಂಯೋಜನೆ ಮಾಡಿದ್ದಾರೆ. ಯಾಕೋ ಏನೋ ತಿಳಿಯದೇನೆ ಚಡಪಡಿಸಿದೆ ಮನಸು ನೋವು ನಲಿವು ಜೊತೆಗೆ…ಸಂಭ್ರಮ ಅಡಗಿದೆ… ಒ ನನ್ನ ಮಗಳೇ ಎಂಬ ಸಾಲಿನಿಂದ ಈ ಹಾಡು ಪ್ರಾರಂಭವಾಗಲಿದೆಯಂತೆ. ಈಗಾಗಲೇ ಹಾಡು ಕೂಡ ತಯಾರಾಗಿದೆಯಂತೆ. ಇನ್ನೂ ಈ ತಯಾರಿ ಹಾಡು ತಕಧಿಮಿತ ಶೋ ನಲ್ಲಿಯೇ ಪ್ರಸಾರವಾಗುತ್ತದೆಯಂತೆ. ಒಟ್ಟಿನಲ್ಲಿ ರವಿಚಂದ್ರನ್ ಮನೆಯಲ್ಲಿ ಓಲಗದ ಶಬ್ದ, ಹಾಗೂ ಚಪ್ಪರ, ತೋರಣಗಳ ಮಾಲೆ ಇಷ್ಟರಲ್ಲೇ ನೆರವೇರಲಿದೆ.

“ಶ್ವೇತ” ಸುಂದರಿ…

#ravichandran #actorravichandradaughrerwedding #actorravichandrandaughtergeetanjaliengagement

Tags