ಸುದ್ದಿಗಳು

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಲ್ಲಿ ಶುರುವಾಯ್ತು ‘ಪ್ರೊಡಕ್ಷನ್ 7’

ಇತ್ತಿಚೆಗಷ್ಟೇ ಹೊಸಕೆರೆ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ “PRODUCTION NO 7”  ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು.

ಇದೇ ಜೂನ್ 10 ರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಕೃಷ್ಣ ಅಜೇಯ್ ರಾವ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ಸಂಜನಾ ಆನಂದ್ ,ಶರತ್ ಲೋಹಿತಾಶ್ವ , ಗಿರಿ, ಅರುಣ ಬಾಲ್ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜಾಕಿ (ತಿಮ್ಮೇಗೌಡ) ಈ ಬಹುತಾರಾಗಣದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Image may contain: 1 person, beard
ಟಿ.ಆರ್.ಚಂದ್ರ ಶೇಖರ್ ರವರು ಕ್ಲಾಪ್ ಮಾಡಿದರೆ, ಯೋಗಾನಂದ್ ರವರು ಕ್ಯಾಮರ ಚಾಲನೆ ಮಾಡಿದರು, ನಿರ್ದೇಶಕರಾದ ಜಾಕಿರವರು ಆ್ಯಕ್ಷನ್ ಕಟ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಹಾಗೂ ಇನ್ನೂ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
Image may contain: 11 people, people standing

ಕೌಟುಂಬಿಕ ಮತ್ತು ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಮುಖ್ಯ ಭೂಮಿಕೆಯಲ್ಲಿ ಮುನಿರಾಜ್ ,ತಬಲ ನಾಣಿ ,ಪ್ರಮೋದ್ ಶೆಟ್ಟಿ ,ಮತ್ತಿತರು ನಟಿಸುತ್ತಿದ್ದಾರೆ ಮತ್ತು ಎಸ್.ಅಭಿ  ಹಾಗೂ ಅರುಣ್ ಕುಮಾರ್ ಸಹ ನಿರ್ದೇಶನ ನಿರ್ವಹಿಸುತ್ತಿದ್ದಾರೆ.

Image may contain: 2 people, people smiling, people standing

ತಾಂತ್ರಿಕ ವರ್ಗದಲ್ಲಿ ನವೀನ್ ಕುಮಾರ್ .ಎಸ್ ಛಾಯಾಗ್ರಹಣ, ಬಾಲು ಕುಮುಟ ನಿರ್ಮಾಣ ನಿರ್ವಹಣೆ, ಅಮೂಲ್ಯ ಸುರೇಶ್ ವಸ್ತ್ರ ವಿನ್ಯಾಸ, ದಯಾನಂದ್ ಭದ್ರಾವತಿ ವಸ್ತ್ರಾಲಂಕಾರ, ಮಲ್ಲಿಕಾರ್ಜುನ  ವರ್ಣಾಲಂಕಾರ ಮಾಡುತ್ತಿದ್ದು ನಿರ್ದೇಶನ ತಂಡದಲ್ಲಿ ಪ್ರಶಾಂತ್ ,ದಿಲೀಪ್ .ಕೆ.ಆರ್ , ವಿನೋದ್ ,ದೀಪು ದಚ್ಚು‌ ಸಾಥ್ ನೀಡುತ್ತಿದ್ದಾರೆ.

Image may contain: 7 people, people smiling, people standing and indoor

Image may contain: 7 people, people smiling, people standing and shoes

ಪ್ರೊಡಕ್ಷನ್ ನಂಬರ್ 1: ಇದು ಹೊಸಬರ ಸಿನಿಮಾ

#krishnaajairao #balkaninews #sandalwood #kannadamovies #crystalpaarkcinemas

Tags