ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ಕ ಹುಟ್ಟುಹಬ್ಬದ ಉಡುಗೊರೆ ಏನು ಗೊತ್ತಾ..?

ಬಾಲ್ಕನಿ ನ್ಯೂಸ್ ತಂಡದಿಂದ D ಬಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳು..

ಇಂದು ಕನ್ನಡದ ಸಿನಿಮಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ, ಕಾರಣ ಇಂದು ಕನ್ನಡದ ಸೂಪರ್‌ಸ್ಟಾರ್, D ಬಾಸ್ ದರ್ಶನ್ ರ ಹುಟ್ಟಿದ ಹಬ್ಬ. ನಿನ್ನೆ ರಾತ್ರಿಯಿಂದಲೇ ದರ್ಶನ್ ರ ಮನೆಯ ಮುಂದೆ ಅಭಿಮಾನಿಗಳು ತಮ್ಮ ನಟನ ಬರ್ತ್ ಡೇ ಆಚರಿಸುತಿದ್ದಾರೆ.ದರ್ಶನ್ ಕೂಡ ತಮ್ಮ ಅಭಿಮಾನಿಗಳ ಜೊತೆ ಸೇರಿ ಕೇಕ್ ಕಟ್ ಮಾಡಿದ್ದಾರೆ.

 

ಹಾಗೆಯೇ ರಾಬರ್ಟ್ ಚಿತ್ರ ತಂಡವು ದರ್ಶನ್ ಹುಟ್ಟಿದ ದಿನಕ್ಕೆ ರಾಬರ್ಟ್ ನ ಟೀಸರ್ ರಿಲೀಸ್ ಮಾಡಿದ್ದು ಸಹ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಟೀಸರ್ ನಲ್ಲಿ ದರ್ಶನ್ ಅವರ ಆಕ್ಷನ್ ಹಾಗೂ ಡೈಲಾಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ರಿಲೀಸ್ ಗಾಗಿ ಎದುರು ನೋಡುತಿದ್ದಾರೆ.

ಚಿತ್ರತಂಡವು ಏಪ್ರಿಲ್ನಲ್ಲಿ ರಾಬರ್ಟ್ ಚಿತ್ರವನ್ನು ತೆರೆಗೆ ತರಲು ಪ್ರಯತ್ನಿಸುತ್ತಿದೆ. ನಮ್ಮ ಬಾಲ್ಕನಿ ನ್ಯೂಸ್ ತಂಡದಿಂದ D ಬಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತಿದ್ದೇವೆ.

#balkaninews #Dbossbirthday #darshanbirthday #sandalwoodnews

Tags