ಸುದ್ದಿಗಳು

‘ಡಿ ಬಾಸ್’ ಹುಟ್ಟುಹಬ್ಬಕ್ಕೆ ‘ಇನ್ಸ್ ಪೆಕ್ಟರ್ ವಿಕ್ರಂ’ ನಿಂದ ಸ್ಪೆಷಲ್ ವಿಶ್!!

ಭಗತ್ ಸಿಂಗ್ ಪಾತ್ರದಲ್ಲಿ ಡಿ ಬಾಸ್!!

ಬೆಂಗಳೂರು,ಫೆ.16:

ಇಂದು ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 42ರ ಹುಟ್ಟು ಹಬ್ಬದ ಸಂಭ್ರಮ.. ಎಲ್ಲೆಡೆಯಿಂದ ಶುಭಾಶಯಗಳ ಮಹಪೂರವೇ ಹರಿದು ಬರುತ್ತಿದೆ.. ಚಿತ್ರರಂಗದ ಅನೇಕ ನಟ-ನಟಿಯರು ಡಿ ಬಾಸ್ ಗೆ ಶುಭಾಶಯ ಕೋರುತ್ತಿದ್ದಾರೆ..

ಡಿ ಬಾಸ್ ಕಾರ್ಟೂನ್

ದಚ್ಚು ಹುಟ್ಟು ಹಬ್ಬದ ಪ್ರಯುಕ್ತ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರತಂಡ ದಚ್ಚುಗಾಗಿಯೇ ಕಾರ್ಟೂನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.. ಡಿ ಬಾಸ್ ಕಾರ್ಟೂನ್ ತುಂಬಾ ಮಸ್ತ್ ಹಾಗೂ ಡಿಫರೆಂಟ್ ಆಗಿದೆ.. ಸಂಗೊಳ್ಳಿರಾಯಣ್ಣ, ಭಗತ್ ಸಿಂಗ್, ಲಾಂಗ್ ಹಿಡಿದು, ಪೋಲೀಸ್ ಗೆಟಪ್ ನಲ್ಲಿ ದಚ್ಚು ಮಿಂಚುತ್ತಿದ್ದಾರೆ.. ‘ಇನ್ಸ್ ಪೆಕ್ಟರ್’ ಚಿತ್ರತಂಡ ದಚ್ಚುಗೆ ಈ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ..

Image may contain: 5 people, text

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರ

ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರ ನಿಭಾಯಿಸುವ ಮೂಲಕ ಆ ಸಿನಿಮಾಗಳಿಗೆ ಮೆರುಗು ಹೆಚ್ಚಿಸಿದ್ದು ಗೊತ್ತೇ ಇದೆ. ಹೌದು, ಶ್ರೀ ನರಸಿಂಹ ನಿರ್ದೇಶನದ, ವಿಖ್ಯಾತ್ ಪ್ರೊಡಕ್ಷನ್ ಹೌಸ್ ನಲ್ಲಿ ಮೂಡಿಬರುತ್ತಿರುವ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಸಕ್ತಿಕರ ವಿಷಯವೆಂದರೆ ಇಲ್ಲಿ ಅವರು ‘ಭಗತ್ ಸಿಂಗ್” ಅವರ ಪೋಷಾಕು ತೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ ಹಾಗೂ ಭಾವನಾ ಮೆನನ್ ನಾಯಕಿ ..

Related image

ಭಗತ್ ಸಿಂಗ್ ದಚ್ಚುಗೂ ಏನು ಸಂಬಂಧ?

ಚಿತ್ರಕ್ಕೂ, ಭಗತ್ ಸಿಂಗ್ ಅವರಿಗೂ ಏನು ಸಂಬಂಧ ಅಂತ ಪ್ರಶ್ನೆ ಉದ್ಬವವಾಗುತ್ತದೆ. ಅದಕ್ಕೆ ಉತ್ತರವನ್ನು ಚಿತ್ರತಂಡದವರು ಈ ಹಿಂದೆ ನೀಡಿದ್ದಾರೆ, ‘ಚಿತ್ರದಲ್ಲಿ ಐತಿಹಾಸಿಕ ಮತ್ತು ಪ್ರಸ್ತುತ ಕಾಲಘಟ್ಟದ ಸನ್ನಿವೇಶ ಇರುತ್ತದೆ. ಇಡೀ ಸಿನಿಮಾದಲ್ಲಿ 10 ನಿಮಿಷಗಳ ಕಾಲ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಪ್ರಜ್ವಲ್ ಗೂ ಮುಖಾಮುಖಿ ದೃಶ್ಯಗಳಿವೆ’ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರು.

ಅಬಿಯು ಹಣ್ಣಿನಿಂದಾಗುವ ಆರೋಗ್ಯದ ಪ್ರಯೋಜನಗಳು

#balkaninews #sandalwood #dbossbirthday

Tags