ಸುದ್ದಿಗಳು

ಯಶಸ್ವಿ 25 ಮತ್ತು 50 ದಿನಗಳನ್ನು ಪೂರೈಸಿದ ‘ಡಾ. ಆಫ್ ಪಾರ್ವತಮ್ಮ’ ಹಾಗೂ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾಗಳು

ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ ಈಗಾಗಲೇ ‘ನಟ ಸಾರ್ವಭೌಮ’, ‘ಬೆಲ್ ಬಾಟಂ’, ಹಾಗೂ ‘ನಟ ಸಾರ್ವಭೌಮ’ ಚಿತ್ರಗಳು ಶತದಿನವನ್ನು ಪೂರೈಸಿವೆ. ಇದೀಗ ಸದ್ದಿಲ್ಲದೇ ‘ಡಾ. ಆಫ್ ಪಾರ್ವತಮ್ಮ’ ಚಿತ್ರವು 25 ದಿನವನ್ನು ಪೂರೈಸಿದ್ದು, ‘ಪ್ರೀಮಿಯರ್ ಪದ್ಮಿನಿ’ ಚಿತ್ರವು 50 ದಿನಗಳನ್ನು ಪೂರೈಸಿದೆ.ಅಂದ ಹಾಗೆ ‘ಡಾ. ಆಫ್ ಪಾರ್ವತಮ್ಮ’ ಚಿತ್ರವು ಮೇ 24 ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಈ ವಾರ ಯಶಸ್ವಿ 4 ನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರದಲ್ಲಿ ಹರಿಪ್ರಿಯಾ ತಿನಿಖಾಧಿಕಾರಿಯಾಗಿ ನಟಿಸಿದ್ದು, ಸುಮಲತಾ ಅಂಬರೀಶ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಹರಿಪ್ರಿಯಾ ವೃತ್ತಿ ಬದುಕಿನ 25 ನೇ ಚಿತ್ರವೆಂಬುದು ವಿಶೇಷ.

ಇನ್ನು ಜಗ್ಗೇಶ್, ಪ್ರಮೋದ್, ಸುಧಾರಾಣಿ ಸೇರಿದಂತೆ ಇತರರು ನಟಿಸಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರವು ಯಶಸ್ವಿ 8 ನೇ ವಾರಕ್ಕೆ ಕಾಲಿಟ್ಟಿದ್ದು, ಇಂದು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಈ ಚಿತ್ರವು ಕಲಾವಿದರು ಸೇರಿದಂತೆ ತಾಂತ್ರಿಕ ವರ್ಗದವರಿಗೂ ಯಶಸ್ಸನ್ನು ತಂದು ಕೊಟ್ಟಿದೆ. ಈಗಾಗಲೇ ಈ ಎರಡೂ ಚಿತ್ರಗಳು ಶತದಿನದತ್ತ ಮುನ್ನುಗ್ಗುತ್ತಿವೆ.

#25, #50, #completed, #movie, #news, #balkaninews #jaggesh, #pramod, #haripriya, #sumalatha

Tags