ಸುದ್ದಿಗಳು

ಮೋಡಿ ಮಾಡುವ ‘D/O ಪಾರ್ವತಮ್ಮ’ ಚಿತ್ರದ ಎರಡನೇ ಸಾಂಗ್

ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಸಿನಿಮಾ

ಬೆಂಗಳೂರು.ಮೇ.22: ನಟಿ ಹರಿಪ್ರಿಯಾ ವೃತ್ತಿ ಬದುಕಿನ 25 ನೇ ಸಿನಿಮಾ ‘ಡಾಟರ್ ಆಫ್ ಪಾರ್ವತಮ್ಮ’. ಈ ಚಿತ್ರವು ಇದೇ ಶುಕ್ರವಾರ ತೆರೆಗೆ ಬರುತ್ತಿದ್ದು, ಸದ್ಯ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಮೋಡಿ ಮಾಡುತ್ತಿದೆ.

ಹೌದು, ಪಿ.ಆರ್.ಕೆ ಸಂಸ್ಥೆಯ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಆಗಿರುವ ‘ನೀಲಿ ಬಾನಿನಲಿ’ ಎಂಬ ಸಾಲುಗಳುಳ್ಳ ಲಿರಿಕಲ್ ವಿಡಿಯೋ ಹಾಡು ಹಿಟ್ ಆಗಿದ್ದು, ಮೋಡಿ ಮಾಡುತ್ತಿದೆ. ಈ ಹಾಡನ್ನು ಕಿರಣ್ ಕಾವೇರಪ್ಪ ಬರೆದಿದ್ದು, ಮಿದುನ್ ಮುಕುಂದನ್ ದನಿಯಾಗಿದ್ದಾರೆ. ಈ ಹಾಡು ಅಮ್ಮ-ಮಗಳ ಬಾಂಧವ್ಯವನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತದೆ.

ಈ ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿ ವೈದೇವಿ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಸುಮಲತಾ ಅಂಬರೀಶ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಶಂಕರ್ ಜೆ ಎನ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.

ಚಿತ್ರದಲ್ಲಿ ಕಾಲೇಜು, ಪ್ರೀತಿ-ಪ್ರೇಮ ಅಲ್ಲಿಂದ ಉದ್ಯೋಗ ಅಂತ ತನ್ನದೇ ಕಮಿಟ್‌ ಮೆಂಟ್‌ ನಲ್ಲಿ ಖಡಕ್‌ ಆಗಿ ಕಾಣಿಸಿಕೊಳ್ಳುವ ವೈದೇಹಿ, ಅಮ್ಮನ ವಿಚಾರದಲ್ಲಿ ಎಷ್ಟು ಭಾವನಾತ್ಮಕ ಹುಡುಗಿ ಎನ್ನುವುದು ಚಿತ್ರದ ಮತ್ತೊಂದು ವಿಶೇಷ.

ಅಂದ ಹಾಗೆ ಈ ಚಿತ್ರತಂಡದವರು ತಾಯಿ ಮಗಳ ಸೆಲ್ಪಿ ಸ್ಪರ್ಧೆ ಏರ್ಪಡಿಸಿದೆ. ನಿಮ್ಮ ತಾಯಿಯ ಜೊತೆ ಸೆಲ್ಪಿ ತೆಗೆದು 7411157888 ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲಿ ಎಂದು ಚಿತ್ರತಂಡ ಕಾಂಟೆಸ್ಟ್ ಏರ್ಪಡಿಸಿದ್ದಾರೆ.

ನೀವು ಕೂಡ ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಿ ನಿಮ್ಮ ತಾಯಿಯ ಜೊತೆಯಲ್ಲಿರುವ ಪೋಟೋವೊಂದನ್ನು ಈ ನಂಬರ್ ಗೆ ವಾಟ್ಸಾಪ್ ಮಾಡುವ ಮೂಲಕ  ತಾಯಿ ಮಗಳ ಭಾವಚಿತ್ರಕ್ಕೆ ವಿಶೇಷ ಬಹುಮಾನವನ್ನು ತಮ್ಮದಾಗಿಸಿಕೊಳ್ಳಬಹುದು.

‘ಮಾಯಾ ಕನ್ನಡಿ’ ಟೀಸರ್ ರಿಲೀಸ್…

#D/oparvathamma, #lyrical, #2ndsong, #balkaninews #filmnews, #kannadasuddigalu, #sumaltha, #haripriya

Tags