ಸುದ್ದಿಗಳು

ಕಿಚ್ಚನ ಈ ಸಿನಿಮಾ ಕ್ರಿಸ್ ಮಸ್ ಗೆ ರಿಲೀಸ್!!

ಮುಂಬೈ,ಮಾ.15: ಕಿಚ್ಚ’ಸುದೀಪ್  ಸದ್ಯ ‘ಪೈಲ್ವಾನ್​’ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಈಗ ಪೋಸ್ಟ್​ ಪ್ರೊಡಕ್ಷನ್​ ನಡೆಯುತ್ತಿದೆ… ಇದರ ಮಧ್ಯೆ ‘ಕೊಟಿಗೊಬ್ಬ 3’ ಚಿತ್ರ ಕೂಡ ಪ್ರಾರಂಭವಾಗಿದೆ.. ಈಗ ಕಿಚ್ಚ ಮತ್ತೊಮ್ಮೆ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ…  ಕಿಚ್ಚ ಹಿಂದಿ ‘ದಬಂಗ್​ 3’ ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದಿದೆ.. ಈ ಚಿತ್ರವು ಕ್ರಿಸ್​ಮಸ್​  2019ರ ಡಿಸೆಂಬರ್​ ತಿಂಗಳಲ್ಲಿ ತೆರೆಗೆ ಬರಲಿದೆ..

ದಬಂಗ್​ 3’ ಚಿತ್ರತಂಡ ಸುದ್ದಿಗೋಷ್ಠಿ

ಸುದೀಪ್​ ‘ದಬಂಗ್​ 3’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ… ಈಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ದಬಂಗ್​ 3’ ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಮಾತನಾಡಿರುವ ಸಲ್ಮಾನ್​ ಖಾನ್​, “ದಬಂಗ್​ 3 ಚಿತ್ರ ಏಪ್ರಿಲ್​ನಲ್ಲಿ ಸೆಟ್ಟೇರಲಿದೆ. ಡಿಸೆಂಬರ್​​ಗೆ ಚಿತ್ರವನ್ನು ತೆರೆಗೆ ತರುತ್ತೇವೆ,” ಎಂದಿದ್ದರು.

ಅರ್ಬಾಜ್ಖಾನ್ಸಿನಿಮಾ ನಿರ್ಮಾಣ

‘ದಬಂಗ್​ 3’ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದು, . ಅರ್ಬಾಜ್​ ಖಾನ್​ ಸಿನಿಮಾ ನಿರ್ಮಾಣ ಹೊಣೆ ಹೊತ್ತಿದ್ದಾರೆ.. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ನಾಯಕ ಹಾಗೂ ಸೋನಾಕ್ಷಿ ಸಿನ್ಹಾ ನಾಯಕಿ. ಈ ಚಿತ್ರದಲ್ಲಿ ಸುದೀಪ್​ ಪಾತ್ರ ಹೇಗಿರಲಿದೆ  ಎಂದು ಇನ್ನೂ ರಿವಿಲ್ ಆಗಿಲ್ಲ

ಏಕಕಾಲಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸುತ್ತಿರುವ ‘ಕೃಷ್ಣಲೀಲಾ’ ಮಯೂರಿ

Tags