ಸುದ್ದಿಗಳು

ದಬಾಂಗ್ ೩ ಬಗ್ಗೆ ಕಿಚ್ಚ ಮಾತು

ಮುಂಬೈ,ಮೇ.14: ದಬಾಂಗ್-೩ ಶೂಟಿಂಗ್ ನಲ್ಲಿ ಕಿಚ್ಚ ಭಾಗಿಯಾಗಿದ್ದು, ಇದೀಗ ಸಿನಿಮಾ ಹಾಗೂ ತಮ್ಮ ಶೂಟಿಂಗ್ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ಬಾರೀ ನಿರೀಕ್ಷೆಯ ಸಿನಿಮಾ ದಬಾಂಗ್ ೩ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ನಟ ಸುದೀಪ್ ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ  ಭಾಗಿಯಾಗಿದ್ದಾರೆ. ಈ ಫೋಟೋಗಳು ಕೂಡ ವೈರಲ್ ಆಗಿವೆ. ಸದ್ಯ ಈ ಸಿನಿಮಾದಲ್ಲಿ ಭಾಗಿಯಾಗಿರೋದರ ಬಗ್ಗೆ ಕಿಚ್ಚ ಟ್ವೀಟ್ ಮಾಡಿದ್ದಾರೆ.

Image result for kiccha sudeep and salman khan on dabangg 3 sets

ಟ್ವೀಟ್ನಲ್ಲಿ ಕಿಚ್ಚ ಹೇಳಿದ್ದೇನು..?

ಹೌದು, ನಟ ಕಿಚ್ಚ ಸುದೀಪ್ ಬಾಲಿವುಡ್‌ನ ದಬಾಂಗ್ ೩ ನಲ್ಲಿ ಮಿಂಚುತಿದ್ದಾರೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಬಿಡುಗಡೆಯಾದ ಫೋಟೋಗಳು. ಸದ್ಯ ದಬಾಂಗ್ ೩ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಭಾಗಿಯಾಗಿರುವ ನಟ ಸುದೀಪ್ ಸಿನಿಮಾ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ದಬಾಂಗ್ ೩ ನಲ್ಲಿ ಭಾಗಿಯಾಗಿದ್ದು ಖುಷಿಯಾಗಿದೆ. ಬಹು ದೊಡ್ಡ ಅನುಭವ ಈ ಸಿನಿಮಾದಿಂದ ಪಡೆದುಕೊಂಡಿದ್ದೇನೆ. ಸಲ್ಮಾನ್ ಖಾನ್ ಮುಂದೆ ಹೋರಾಡಿದ ರೀತಿ ಅದ್ಬುತ. ಈ ಸಿನಿಮಾ ಶೂಟಿಂಗ್ ಅನ್ನು ನಾನು ಎಂಜಾಯ್ ಮಾಡಿದ್ದೇನೆ. ಇದರಿಂದ ನನಗೆ ನನ್ನ ಮೇಲಿನ ಕಾನ್ಫಿಡೆನ್ಸ್ ಹೆಚ್ಚಾಗಿದೆ ಎಂದಿದ್ದಾರೆ.

ಸಿಖಂದರ್ ಭಾರಧ್ವಜ್ ಪಾತ್ರದಲ್ಲಿ ಕಿಚ್ಚ

ಸುದೀಪ್ ಇಲ್ಲಿ ಸಿಖಂದರ್ ಭಾರಧ್ವಜ್ ಎಂಬ ಪಾತ್ರದಲ್ಲಿ ನಟಿಸಿದರೆ, ಚುಲ್‌ಬುಲ್ ಪಾಂಡೆ ಹೆಸರಿನ ಪಾತ್ರದಲ್ಲಿ ಸಲ್ಮಾನ್ ಪುನಃ ಮಿಂಚಲಿದ್ದಾರೆ. ನಿರ್ದೇಶಕ ಪ್ರಭುದೇವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. ಇನ್ನು ಈಗಾಗಲೇ ಫೋಟೋಗಳಿಂದಲೇ ಭಾರೀ ನಿರೀಕ್ಷೆ ಹೆಚ್ಚಿರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ ಸೋನಾಕ್ಷಿ ಸಿನ್ಹಾ.

#dabbang3 #dabbangkiccha #salmankhan #dabbanggbollywood

Tags

Related Articles