ಸುದ್ದಿಗಳು

ಬಾಲ್ಕನಿ ದಿನ ಭವಿಷ್ಯ: 27 ನವಂಬರ್ 2018 ಸೋಮವಾರ

ನಿಮ್ಮ ಭವಿಷ್ಯ ನಿಮ್ಮ ನಿಮ್ಮ ಕೈಯ್ಯಲ್ಲಿ…..

ಮೇಷಸೋತು ಗೆದ್ದಿರುವ ನೀವು ಹೊಸ ಸ್ಥಳದಲ್ಲಿನ ಕೆಲಸಗಳನ್ನು ಮಾಡಲು ಆತ್ಮವಿಶ್ವಾಸ ಮತ್ತು ಧೈರ್ಯ ರೂಢಿಸಿಕೊಳ್ಳಿ. ಬಾಕಿ ಸಮಸ್ಯೆಗಳೆಲ್ಲವೂ ಕ್ರಮೇಣ ಬಗೆಹರಿದು ನೆಮ್ಮದಿ ಮೂಡಲಿದೆ. ಆಸ್ತಿಗೆ ಸಂಬಂಧಪಟ್ಟಂತೆ ನೆರೆಹೊರೆಯವರಿಂದ ತಗಾದೆ ಬರುವುದು. ಇದು ವಿಕೋಪಕ್ಕೆ ಹೋಗುವ ಮುನ್ನ ಮಾತುಕತೆಯಿಂದ ಬಗೆಹರಿಸಿಕೊಳ್ಳಿ. ಶ್ರಮಜೀವಿಗಳಿಗೆ ಹೆಚ್ಚಿನ ದುಡಿಮೆಯಿಂದ ಅಧಿಕ ಧನಲಾಭವಾಗಲಿದೆ. ಮತ್ತೊಬ್ಬರಿಗೆ ಹಾಸ್ಯ ಮಾಡಲು ಹೋಗಿ ನೀವೇ ಅಪಹಾಸ್ಯಕ್ಕೆ ಗುರಿಯಾಗುವಿರಿ. ವಿದೇಶದಲ್ಲಿರುವ ಮಗನ ಉದ್ಯೋಗ ವೇತನ ಹೆಚ್ಚುವುದು. ರೈತರಿಗೆ ಸರ್ಕಾರದಿಂದ ಬರುವ ಸೌಲಭ್ಯ ಆಶಾಕಿರಣವಾಗಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಿದೆ.

ಅದೃಷ್ಟ ಸಂಖ್ಯೆ:2

ವೃಷಭಸ್ವಂತ ಉದ್ಯಮಿಗಳು ಸಿಬ್ಬಂದಿ ಮಾಡುವ ತಪ್ಪಿನಿಂದಾಗಿ ಹೆಚ್ಚಿನ ತೊಂದರೆ ಅನುಭವಿಸುವರು. ಅನಿರೀಕ್ಷಿತವಾಗಿ ದೂರ ಪ್ರಯಾಣ ಕೈಗೊಳ್ಳಬೇಕಾಗುವುದು. ಅವಿವಾಹಿತರಿಗೆ ಉತ್ತಮ ಸಂಬಂಧಗಳು ತಾವಾಗಿಯೇ ಬರಲಿದ್ದು, ಅನುಕೂಲ ಕಂಡುಬಂದಲ್ಲಿ ಮಾತುಕತೆ ಮುಂದುವರೆಸಿ. ಚಿಲ್ಲರೆ ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಹಾರ್ದದಿಂದ ವರ್ತಿಸಿದರೆ ಅನುಕೂಲವಿದೆ. ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡುಬಂದು ಆಸ್ಪತ್ರೆ ಖರ್ಚು ಹೆಚ್ಚಾಗುವ ಸಂಭವವಿದೆ. ಹಿರಿಯ ಅಧಿಕಾರಿಗಳಿಗೆ ಅನಿರೀಕ್ಷಿತ ವರ್ಗಾವಣೆ ಕಂಡುಬರುವುದರಿಂದ ಕೈ ಕೆಳಗಿನ ಕೆಲಸಗಾರರಿಗೆ ಹೆಚ್ಚಿನ ಸಂತೋಷ ಉಂಟಾಗುವುದು. ಸೋದರನ ಕೋರಿಕೆಯನ್ನು ಶಾಂತವಾಗಿ ಆಲಿಸಿ. ಆತನ ಕಷ್ಟಗಳಿಗೆ ಸ್ಪಂದಿಸುವುದರಿಂದ ಸಮಾಜದಲ್ಲಿ ಕೀರ್ತಿ ದೊರೆಯುವುದು.

ಅದೃಷ್ಟ ಸಂಖ್ಯೆ:1

ಮಿಥುನಕುಟುಂಬದ ಸೌಹಾರ್ದತೆ ಕಾಪಾಡಿಕೊಳ್ಳಲು ಹೆಣಗಾಡುವಿರಿ. ನೀವು ಯಾರ ಪರವಾಗಿ ಮಾತನಾಡಿದರೂ ಮತ್ತೊಬ್ಬರಿಗೆ ಅಸಹನೆ ಆಗುವುದು. ಸಮನ್ವಯತೆ ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಯಾವುದೇ ಪ್ರಯತ್ನಗಳಿಗೆ ಮನೆ ಸದಸ್ಯರ ಸಹಕಾರ ಸಿಗದೆ ಕಳವಳ ಪಡುವಿರಿ. ಆದರೆ ನಿಮ್ಮ ಛಲದ ಸ್ವಭಾವ ಅವೆಲ್ಲವನ್ನು ಮೆಟ್ಟಿ ನಿಲ್ಲುವುದು. ದುಡಿಮೆ ಎಷ್ಟಿದ್ದರೂ ಸಾಲದೇ ಹೋಗಬಹುದು.  ಮಾತಿನಲ್ಲಿ ಬಲು ಚತುರರಾದ ನೀವು ವಿಷಯಗಳು ತಿಳಿದಿದ್ದರೂ ಮುಗ್ಧರಂತೆ ಇರುವುದು ಉತ್ತಮ. ಬೇರೆಯವರ ವೈಯಕ್ತಿಕ ವಿಚಾರಗಳಲ್ಲಿ ಅತಿ ಕುತೂಹಲ ಬೇಡ. ಇದರಿಂದ ವೈಯಕ್ತಿಕ ಕೀರ್ತಿಗೆ ಕಳಂಕ ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಮನಸ್ಸಿಗೆ ನೆಮ್ಮದಿ ನೀಡುವುದು. ಆದಾಯ ಹೆಚ್ಚುವುದು. ಸ್ಥಿರಾಸ್ತಿ ಖರೀದಿ ವಿಚಾರದಲ್ಲಿ ಆಶಾಕಿರಣ ಮೂಡುವುದು.

ಅದೃಷ್ಟ ಸಂಖ್ಯೆ:2

ಕಟಕಎದುರಾಗುವ ಸಮಸ್ಯೆಗಳನ್ನು ನಾಜೂಕಾಗಿ ನಿಭಾಯಿಸುವಿರಿ. ನಿಮ್ಮ ಪರವಾಗಿ ನಿಮ್ಮ ವಕೀಲರು ವಾದ ಮಾಡಿ ಜಯ ತಂದುಕೊಡುವರು. ಹಿತಶತ್ರುಗಳ ವಿಷಯದಲ್ಲಿ ಉದಾಸೀನ ಬೇಡ. ಸಾಲ ತೆಗೆದುಕೊಳ್ಳುವಾಗ ಇದ್ದ ಉತ್ಸಾಹ ತೀರಿಸುವಾಗ ಇಲ್ಲದಿದ್ದರೆ ಮರ್ಯಾದೆ ಹೋಗುವುದು. ಇದಕ್ಕೆ ಅವಕಾಶ ಮಾಡಿಕೊಡದಿರಿ.  ಗೊತ್ತುಗುರಿಯಿಲ್ಲದೆ ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ಆರ್ಥಿಕ ಕೊರತೆ ಕಂಡು ಬರಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಡುವಿರಿ. ಮಾತಿನ ತಪ್ಪು ಗ್ರಹಿಕೆಯಿಂದ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಏಳುವುದು. ಇದನ್ನು ತಾಳ್ಮೆಯಿಂದ ಹಾಗೂ ವಿವೇಚನೆಯಿಂದ ಬಗೆಹರಿಸಿಕೊಳ್ಳಿ. ಮಗನ ನಿರುದ್ಯೋಗ ಸಮಸ್ಯೆ ಸದ್ಯದಲ್ಲಿಯೇ ಬಗೆಹರಿಯಲಿದೆ.

ಅದೃಷ್ಟ ಸಂಖ್ಯೆ:4

ಸಿಂಹಸ್ನೇಹಿತರ ಹಾಗೂ ಅನುಭವಿಗಳ ಮಾರ್ಗದರ್ಶನ ತುಂಬಾ ಅಗತ್ಯ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡುವುದು. ಸೂಕ್ತ ಚಿಕಿತ್ಸೆ ಮಾಡಿಸಿ. ನಿಮ್ಮ ಶ್ರಮಕ್ಕೆ ಹಾಗೂ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಮತ್ತೊಬ್ಬರ ಜೀವನದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಇದರಿಂದ ನೀವು ಜೀವನದಲ್ಲಿ ಕಷ್ಟ ಅನುಭವಿಸುವಿರಿ.  ನೀವು ಎಷ್ಟೇ ದುಡಿದು ದಣಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಅವಕಾಶ ಬಹಳ ಕಡಿಮೆ. ನೀವು ಉಳಿಸಿದಷ್ಟು ಹಣವನ್ನು ಮಡದಿ ಮಕ್ಕಳು ಖರ್ಚು ಮಾಡುವರು. ಹೀಗಾಗಿ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಪರದಾಡುವಿರಿ. ಆದರೂ ದುಡಿಮೆಯ ಉತ್ಸಾಹ ನಿಮ್ಮಲ್ಲಿ ಕಡಿಮೆಯಾಗುವುದಿಲ್ಲ. ಹಿರಿಯರ ಅಣತಿಯಂತೆ ನಡೆದರೆ ಉತ್ತಮ.

ಅದೃಷ್ಟ ಸಂಖ್ಯೆ:6

ಕನ್ಯಾಮಗಳ ಕುಟುಂಬದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ಬಗೆಹರಿದು ದಂಪತಿಯಲ್ಲಿ ಅನ್ಯೋನ್ಯತೆ ಮೂಡಲಿದೆ. ಕಳೆದೇ ಹೋಗಿದ್ದ ಮುಖ್ಯ ದಾಖಲೆಗಳು ಆಶ್ಚರ್ಯಕರ ರೀತಿಯಲ್ಲಿ ಮತ್ತೆ ನಿಮ್ಮ ಕೈ ಸೇರಲಿವೆ. ನೀವು ದೂರ ಪ್ರಯಾಣ ಮಾಡಬೇಕಾಗುವುದು. ಇದರ ಪೂರ್ವ ತಯಾರಿ ಮಾಡಿಕೊಳ್ಳದೆ ಹೊರಡುವುದು ಸೂಕ್ತವಲ್ಲ. ರಾಜಕೀಯ ಮುಂದಾಳತ್ವ ಸಾಮರ್ಥ್ಯ‌ವಿದ್ದಲ್ಲಿ ವಹಿಸಿಕೊಳ್ಳಿ. ಚಾಡಿ ಮಾತುಗಳಿಗೆ ಕಿವಿಗೊಡದಿರಿ. ಬಂಧುಗಳ ಮಧ್ಯೆ ಬಿಟ್ಟು ಹೋಗಿದ್ದ ಸಂಬಂಧ ಮತ್ತೆ ಚಿಗುರಲಿದೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಸಂತೋಷವುಂಟಾಗುವುದು. ಚಿಕ್ಕ ಮಕ್ಕಳ ಅನಾರೋಗ್ಯದಿಂದ ಹೆಚ್ಚಿನ ಖರ್ಚಾಗುವುದು. ಇದಕ್ಕಾಗಿ ಹೆಚ್ಚು ಚಿಂತಿಸಬೇಡಿ. ತುಸು ಜಾಗ್ರತೆ ವಹಿಸದಿದ್ದಲ್ಲಿ ಆಹಾರ ಸಂಬಂಧಿಉದರ ಸಮಸ್ಯೆ ನಿಮ್ಮನ್ನು ಕಾಡುವುದು.

ಅದೃಷ್ಟ ಸಂಖ್ಯೆ:4

ತುಲಾನಿಮ್ಮ ಯೋಜನೆಗಳಲ್ಲಿ ಪರಿಶ್ರಮ ಇರಲಿ. ನಿಧಾನವಾದರೂ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಇದಕ್ಕೆ ಪೂರಕವಾಗಿ ಹಿರಿಯರ ಆಶೀರ್ವಾದ ನಿಮಗಿರುವುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ನಿಮ್ಮ ಸುತ್ತಮುತ್ತಲೂ ನಿಮ್ಮ ಆರಾಧಿಸುವ, ವಿರೋಧಿಸುವ ಜನರು ಇದ್ದೇ ಇರುತ್ತಾರೆ. ಅವರ ನಿಜವಾದ ಮುಖವಾಡ ತಿಳಿಯದೆ ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಜೀವನ ರಥ ಸಾಗಿಸಲು ಗಂಡು ಹೆಣ್ಣು ಅವಶ್ಯಕ. ಆದರೆ ರಥ ಸಾಗಿಸಲು ಪರ ಪುರುಷರ ಅಥವಾ ಪರಸ್ತ್ರೀಯ ಸಹಾಯ ಪಡೆಯುವುದು ಅಪಚಾರವಾಗುವುದು. ಈ ಬಗ್ಗೆ ವಿವೇಚನೆಯಿಂದ ವರ್ತಿಸಿ.

ಅದೃಷ್ಟ ಸಂಖ್ಯೆ:2

ವೃಶ್ಚಿಕಉಗುರಿನಲ್ಲಿ ಹೋಗುವ ಕೆಲಸಗಳಿಗೆ ಕೊಡಲಿ ಹಿಡಿಯುವ ವ್ಯರ್ಥ ಶ್ರಮ ಕೈಬಿಡಿ. ಅನಗತ್ಯವಾದ ಸಂಶಯವೇ ನಿಮ್ಮ ಕಾರ್ಯಹಾನಿಗೆ ಕಾರಣವಾಗುವುದು. ಧನಾತ್ಮಕವಾಗಿ ಚಿಂತಿಸಿ ಧನ್ಯತೆ ಹೊಂದಿ.  ಅಂಗೈ ಹುಣ್ಣಿಗೆ ಕನ್ನಡಿ ಬೇರೆ ಎನ್ನುವಂತೆ ನಿಮ್ಮ ಸುತ್ತಮುತ್ತಲಿನ ಜನರಿಂದಲೇ ನಿಮ್ಮ ಕಾರ್ಯವಾಗುತ್ತಿರುವಾಗ ಅದಕ್ಕಾಗಿ ರಾಜಕಾರಣಿಯ ಸಹಾಯ ಪಡೆಯುವುದು ಸೂಕ್ತವಲ್ಲ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಇದೆ.  ನೀವು ಧಾರಾಳತನವೇ ನಿಮಗೆ ತೊಂದರೆಯನ್ನುಂಟು ಮಾಡುವುದು. ಒಳ್ಳೆಯತನಕ್ಕೂ ಒಂದು ಮಿತಿ ಉಂಟು. ಆ ಮಿತಿಯನ್ನು ಅರಿತು ಸಮಾಜದಲ್ಲಿ ವರ್ತಿಸಿ. ಇದರಿಂದ ಮಡದಿ ಮಕ್ಕಳು ಸಂತಸ ಪಡುವರು.

ಅದೃಷ್ಟ ಸಂಖ್ಯೆ:8

ಧನುಸ್ಸುಸ್ನೇಹಿತರ ಮೂಲಕವೇ ಕೆಲಸಗಳು ಆಗುತ್ತವೆ ಎಂಬ ನಿಯಮವಿಲ್ಲ. ನಿಮ್ಮ ಪ್ರಯತ್ನವೂ ಸಾಕಷ್ಟು ಬೇಕು. ವ್ಯಾಪಾರ ವ್ಯವಹಾರದಲ್ಲಿ ಆದಷ್ಟು ಪಾರದರ್ಶಕತೆ ರೂಢಿಸಿಕೊಳ್ಳಿ.  ರಾಜಕಾರಣಿಗಳು ತಮ್ಮ ಮನದ ಇಚ್ಛೆಯನ್ನು ಬಹಿರಂಗ ಪಡಿಸುವ ಮೂಲಕ ತಮ್ಮ ಕಾರ್ಯಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಇದೊಂದು ರಾಜಕೀಯ ಕಣ್ಣೋರೆಸುವ ತಂತ್ರವಾದರೂ ಮುಂದೆ ಅನುಕೂಲವಾಗುವುದು.  ಸ್ವಚ್ಛ ಮನೆಯು ಸ್ವಚ್ಛ ಮನಸ್ಸಿನ ಸಂಕೇತವಾಗಿರುವುದು. ಆದರೆ ಮನೆಯನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳಲು ಆಲಸ್ಯತನ ಅಡ್ಡ ಬರುತ್ತದೆ. ಇದರಿಂದ ಹೊರಬನ್ನಿ. ಆಂಜನೇಯ ಸ್ತೋತ್ರ ಪಠಿಸಿ.

ಅದೃಷ್ಟ ಸಂಖ್ಯೆ:8

ಮಕರತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವರು. ಅಂತೆಯೇ ಈಗ ಗ್ರಹಗಳ ಬಲ ಇಲ್ಲದೆ ಒತ್ತಡ ಜೀವನ ನಡೆಸುತ್ತಿರುವ ನಿಮಗೆ ಸಾಲಗಾರರು ಹೆಚ್ಚಿನ ತಲೆ ನೋವು ಉಂಟು ಮಾಡುವರು. ಬಹುಜನರಿಗೆ ಪ್ರಿಯರಾಗಿದ್ದೀರಿ. ಆದರೆ ತುಸುವಾದರೂ ನಿಷ್ಠುರತೆ ಬೆಳೆಸಿಕೊಳ್ಳದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮತನವನ್ನು ಕಾಯ್ದುಕೊಳ್ಳಲು ಕೆಲವರಿಂದ ಅಂತರ ಕಾಯ್ದುಕೊಳ್ಳಿ. ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.

ಅದೃಷ್ಟ ಸಂಖ್ಯೆ:7

ಕುಂಭಮಕ್ಕಳ ಪ್ರಗತಿ ಕಂಡು ಅವರ ಬೆನ್ನು ತಟ್ಟಿ ಹುರಿದುಂಬಿಸಿ. ಅವರು ನಿಮ್ಮ ಮನೋಭಾವನೆಗಳನ್ನು ಗುರುತಿಸಿ ಗೌರವಿಸುವರು. ಇದರಿಂದ ನಿಮಗೂ ಆನಂದ ಮತ್ತು ಕುಟುಂಬದಲ್ಲಿ ನೆಮ್ಮದಿ ಮೂಡುವುದು. ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ.

ಅದೃಷ್ಟ ಸಂಖ್ಯೆ:2

ಮೀನಹೊಸಬರ ಸಂಗಡ ಚಾಣಾಕ್ಷ ತನದಿಂದ ಮಾತುಗಳನ್ನು ಆಡುವಿರಿ. ಅವರು ನೀವೆಷ್ಟು ವಿವೇಚನಾಶಾಲಿಗಳು ಎಂದು ಕೊಂಡಾಡುವರು. ಆದರೆ ನಿಮ್ಮ ಆಂತರ್ಯವನ್ನು ಅವರ ಎದುರು ಬಹಿರಂಗ ಪಡಿಸದಿರಿ. ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ. ಒಂದೇ ಸಲಕ್ಕೆ ದೊಡ್ಡ ಬಂಡವಾಳದ ಕಾರ್ಯ ಯೋಜನೆಗೆ ಕೈಹಾಕದಿರಿ. ನೀವು ಮಾಡುತ್ತಿರುವ ಕಾರ್ಯದ ಮೇಲೆ ನಿಗಾ ಇರಲಿ. ಹಣಕಾಸಿನ ವಿಷಯದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ಹಣ ಖರ್ಚು ಮಾಡುವುದು ಸುಲಭ, ಗಳಿಸುವುದು ಕಠಿಣ.

ಅದೃಷ್ಟ ಸಂಖ್ಯೆ:1

……………………………………………………………………………………………………………………………………….

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

ಪಂಡಿತ್ ಮಂಜುನಾಥ್ ಶಾಸ್ತ್ರೀ, ದೈವಜ್ಞ ಜ್ಯೋತಿಷ್ಯರು 9845743807

 

Tags

Related Articles