ಸುದ್ದಿಗಳು

‘ಕೆ.ಜಿ.ಎಫ್’ ಆದ್ಮೇಲೆ ಬರೊಬ್ಬರಿ 5 ಭಾಷೆಗಳಲ್ಲಿ ‘ದಮಯಂತಿ’

ಬೆಂಗಳೂರು.ಏ.22: ಸ್ಯಾಂಡಲ್ ವುಡ್ ಚಿತ್ರಗಳ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಈಗಾಗಲೇ ‘ಕೆ.ಜಿ.ಎಫ್’ ಚಿತ್ರವು ಬರೊಬ್ಬರಿ ಐದು ಭಾಷೆಗಳಲ್ಲಿ ತೆರೆ ಕಂಡು ಎಲ್ಲರೂ ನಮ್ಮ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು.

ಸದ್ಯ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯ ತಯಾರಿ ನಡೆಸುತ್ತಿರುವ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರವು 9 ಭಾಷೆಗಳಲ್ಲಿ ತೆರೆ ಕಾಣುವ ತಯಾರಿಯಲ್ಲಿದೆ. ಈ ಚಿತ್ರದಂತೆಯೇ ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿ ನಿಭಾಯಿಸುತ್ತಿರುವ ‘ದಮಯಂತಿ’ ಚಿತ್ರವೂ ಸಹ ಬರೊಬ್ಬರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Image result for damayanthi kannada movie

ಈ ಮೊದಲೆಲ್ಲ ‘ದಮಯಂತಿ’ ಕನ್ನಡದಲ್ಲಷ್ಟೇ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ನವರಸನ್ ಹೇಳಿಕೊಂಡಿದ್ದರು. ಬಹುಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇಲ್ಲ ಎಂದಿದ್ದರು. ಆದರೆ, ಇದೀಗ ಕನ್ನಡ ಅವತರಣಿಕೆ ಮೂಡಿ ಬಂದ ರೀತಿ ನೋಡಿ ಬಹುಭಾಷೆಯಲ್ಲಿ ತೆರೆಕಾಣಿಸುವ ಮನಸ್ಸು ಮಾಡಿದ್ದಾರೆ.

Image result for radhika kumaraswamy damayanthi

ಹೌದು, ಈ ಚಿತ್ರವು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರವನ್ನು ‘ವೈರ’ ಹಾಗೂ ‘ರಾಕ್ಷಸಿ’ ಖ್ಯಾತಿಯ ನವರಸನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Image result for radhika kumaraswamy damayanthi

ಅಂದ ಹಾಗೆ ಈ ಚಿತ್ರವು ಹಿಂದಿ ಮತ್ತು ಮಲೆಯಾಳಂನಲ್ಲಿ ಡಬ್ ಆಗುತ್ತಿದ್ದು, ತಮಿಳು ಮತ್ತು ತೆಲುಗಿನಲ್ಲಿ ನೇರವಾಗಿ ಶೂಟಿಂಗ್ ಆಗುತ್ತಿರುವುದು ವಿಶೇಷ. ಇನ್ನು ಮಾಹಿತಿ ಪ್ರಕಾರ ಇದು ಎಂಭತ್ತರ ದಶಕದ ಕತೆ. ಜೊತೆಗೆ ಇವತ್ತಿನ ವಾಸ್ತವೂ ಕತೆಯೊಳಗೆ ವಿಶ್ರಣವಾಗಿದೆ.

ಚಿತ್ರದಲ್ಲಿ ರಾಧಿಕಾ ಡಬಲ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ರಾಧಿಕಾ ಈ ಚಿತ್ರದೊಂದಿಗೆ ‘ಭೈರಾದೇವಿ’. ರಾಜೇಂದ್ರ ಪೊನ್ನಪ್ಪ’ ಸೇರಿದಂತೆ ಇನ್ನೂ ಹೆಸರಿಡದ ಮತ್ತೊಂದು ಚಿತ್ರಗಳೂ ಅವರ ಕೈ ನಲ್ಲಿ ಇವೆ.

ನನ್ನ ಮೇಲೆ ಬೆಟ್ಟಿಂಗ್ ಕಟ್ಟಬೇಡಿ ಅಂದಿದ್ದೇಕೆ ಸುಮಲತಾ..?

#damayanthi, #movie ,#released, #balkaninews #filmnews, #kannadasuddigalu #radhikakumarswamy

Tags